Channapatna: ಜೆಡಿಎಸ್-ಬಿಜೆಪಿ ನಡುವೆಯೇ ಮುನಿಸಿಗೆ ಕಾರಣಾಯ್ತೆ ಚನ್ನಪಟ್ಟಣ ಉಪಚುನಾವಣೆ?

0
120
Channapatna

Channapatna

ಜೆಡಿಎಸ್ ಹಾಗೂ ಬಿಜೆಪಿ ಈಗ ಮಿತ್ರ ಪಕ್ಷಗಳು. ಜೀವನಪರ್ಯಂತ ಜಾತ್ಯಾತೀತ, ಧರ್ಮಾತೀತ ರಾಜಕಾರಣ ಮಾಡಿಕೊಂಡು ಬಂದಿದ್ದ ದೇವೇಗವಡರ ಪಕ್ಷ ಬಿಜೆಪಿ ಜೊತೆ ಕೈ ಜೋಡಿಸಿದಾಗ ಹಲವು ಟೀಕೆಗಳು ಎದುರಾಗಿತ್ತು. ಪಕ್ಷದ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಗೆ ಬಿಜೆಪಿ ಮೈತ್ರಿ ಅವಶ್ಯಕತೆ ಇತ್ತೆಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರ. ಅದಕ್ಕೆ ತಕ್ಕಂತೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಚೆನ್ನಾಗಿಯೇ ಕೆಲಸ ಮಾಡಿದೆ. ಆದರೆ ಈಗ ಮೈತ್ರಿ ಮಧ್ಯೆ‌ ಮುನಿಸು ಮೂಡಿದಂತಿದೆ. ಇದಕ್ಕೆ ಕಾರಣ ಆಗಿರುವುದು  ಚನ್ನಪಟ್ಟಣ ಉಪಚುನಾವಣೆ.

ಚನ್ನಪಟ್ಟಣದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದ ಕುಮಾರಸ್ವಾಮಿ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕೇಂದ್ರ ಮಂತ್ರಿ ಆಗಿದ್ದಾರೆ. ಈಗ ಚನ್ನಪಟ್ಟಣ ಕ್ಷೇತ್ರ ತೆರವಾಗಿದ್ದು ಶೀಘ್ರವೇ ಅಲ್ಲಿ ಉಪಚುನಾವಣೆ ನಡೆಯಲಿದೆ. ಮೈತ್ರಿ ಅಬ್ಯರ್ಥಿಯಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಎರಡು ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಬಿಸಿ ಪಾಟೀಲ್ ಅಳಿಯನ ಆತ್ಮಹತ್ಯೆಗೆ ಕಾರಣವೇನು?

ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ ಆಗಿದ್ದು, ಕುಮಾರಸ್ವಾಮಿ ಅವರು ಸ್ಪರ್ಧಿಸಿರುವ, ಇದಕ್ಕೆ ಹಿಂದೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದ ಕ್ಷೇತ್ರ. ಹಾಗಾಗಿ ಆ ಕ್ಷೇತ್ರವನ್ನು ತಾವೇ ಉಳಿಸೊಕೊಳ್ಳುವ ಪ್ರಯತ್ನದಲ್ಲಿ ಜೆಡಿಎಸ್ ಇದೆ. ಆದರೆ ಚನ್ನಪಟ್ಟಣದಿಂದ ವರ್ಷಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾ ಬಂದಿರುವ ಸಿಪಿ ಯೋಗೀಶ್ವರ್ ಚನ್ನಪಟ್ಟಣದ ಟಿಕೆಟ್ ತಮಗೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಭಾಗದಲ್ಲಿ ಬಿಜೆಪಿಯನ್ನು ಬಲಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸಹ ಚನ್ನಪಟ್ಟಣದಲ್ಲಿ ಯೋಗೀಶ್ವರ್ ಗೆ ಟಿಕೆಟ್ ನೀಡುವ‌ ಆಸಕ್ತಿ ತೋರುತ್ತಿದೆ.

ಆದರೆ ಕುಮಾರಸ್ವಾಮಿ ಇದಕ್ಕೆ ತೀವ್ರ ವಿರೋಧ ತೋರಿದ್ದು, ಚನ್ನಪಟ್ಟಣ ಕ್ಷೇತ್ರದಿಂದ ತಮ್ಮ‌ ಪುತ್ರ ನಿಖಿಲ್ ಕುಮಾರಸ್ವಾಮಿ ಅಥವಾ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವ ಆಲೋಚನೆ ಹೊಂದಿದ್ದಾರೆ. ಇದೀಗ ಇದೇ ವಿಷಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮುನಿಸಿಗೆ ಕಾರಣವಾಗಿದ್ದು, ಬಹುಷಃ ಬಿಜೆಪಿ ಹೈಕಮಾಂಡ್ ಈ ವಿಷಯದಲ್ಲಿ ತಲೆ ಹಾಕುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here