Car Launch: ಹೊಸ ಅವತಾರ ತಳೆದ ಮಾರುತಿ ಆಲ್ಟೋ, ಗ್ರಾಹಕರ ಹುಬ್ಬೇರುವುದು ಗ್ಯಾರೆಂಟಿ

0
204
Car Lunch

Car Launch

ಮಾರುತಿ ಸುಜುಕಿ ಭಾರತದ ಅತ್ಯುತ್ತಮ ಕಾರು ತಯಾರಿಕಾ ಸಂಸ್ಥೆ. ಭಾರತದ ಮಧ್ಯಮ ವರ್ಗವನ್ನು ಗುರಿಯಾಗಿಸಿಖಂಡು ದಶಕಗಳಿಂದಲೂ ಕಾರು ನಿರ್ಮಿಸಿ ಮಾರಾಟ ಮಾಡುತ್ತಿದೆ. ಮಾರುತಿ 800, ಮಾರುತಿ ಆಲ್ಟೋ ಈ ಸಂಸ್ಥೆಯ ಲೋ ಎಂಡ್ ಕಾರುಗಳಾಗಿದ್ದವು. ಮಾರುತಿ 800 ಈಗಾಗಲೇ ಬಂದ್ ಆಗಿ ಸಾಕಷ್ಟು ಸಮಯವಾಗಿದೆ. ಮಾರುತಿ ಆಲ್ಟೋ ಅನ್ನು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಈಗಲೂ ಕಡಿಮೆ ದರದ ವಾಹನವಾಗಿ ಮಾರಾಟ ಮಾಡುತ್ತಿದೆ ಮಾರುತಿ. ಆದರೆ ಈಗ ಆಲ್ಟೋನ ವಿನ್ಯಾಸವನ್ನೆ ಮಾರುತಿ ಬದಲಿಸಿದ್ದು, ಗ್ರಾಹಕರು ಸ್ವಿಫ್ಟ್ ಬಿಟ್ಟು ಆಲ್ಟೋ ಖರೀದಿಗೆ ಮುಗಿ ಬೀಳುವ ಸಾಧ್ಯತೆ ಇದೆ.

ಇತ್ತೀಚೆಗಿನ ದಿನಗಳಲ್ಲಿ‌ ಮಧ್ಯಮ ವರ್ಗಕ್ಕೆ ಸೇರಿದ ಗ್ರಾಹಕ ಸಹ ಭದ್ರತೆ, ಕಂಫರ್ಟ್ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದಾನಾದ್ದರಿಂದ ಮಾರುತಿ ಸಹ ತನ್ನ ಲೋ ಎಂಡ್ ವಾಹನವಾಗಿದ್ದ ಆಲ್ಟೋ ಅನ್ನು ತುಸು ಅಪ್ ಗ್ರೇಡ್ ಮಾಡಿದ್ದು, ಸೇಫ್ಟಿ, ಕಂಫರ್ಟ್ ಅಂಶಗಳನ್ನು ಸೇರಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದು, ಹೊಸ ಆಲ್ಟೋದ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿವೆ.

ವಿಶ್ವ ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲದಲ್ಲಿ ಮಾಂಸಾಹಾರ! ಹೊತ್ತಿಕೊಂಡಿದೆ ವಿವಾದದ ಕಿಡಿ

ಆಲ್ಟೋ ಕಾರು ಸಣ್ಣ ಆಕಾರ, ಕಡಿಮೆ ತಂತ್ರಜ್ಞಾನದ ಆಯ್ಕೆಗಳು, ಕಡಿಮೆ ಪ್ಯಾಸೆಂಜರ್ ಸ್ಪೇಸ್ ಹಾಗೂ ಕಡಿಮೆ ಬೆಲೆಯನ್ನು ಹೊಂದಿತ್ತು. ಆದರೆ ಈಗ ನೆಕ್ಸ್ಟ್ ಜೆನ್ ಆಲ್ಟೋ ಅನ್ನು ಮಾರುತಿ ಸಂಸ್ಥೆ ಬಿಡುಗಡೆ ಮಾಡುತ್ತಿದ್ದು, ಹೊಸ ಆಲ್ಟೋ ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಬರುತ್ತದೆ. ಅಂದರೆ ಮಾರುತಿ ಸ್ವಿಫ್ಟ್ ಗಿಂತಲೂ ದೊಡ್ಡ ಕಾರು ಮಾರುತಿ ಆಲ್ಟೋ ಆಗಲಿದೆ. ಬೆಲೆ ಸಹ ಸ್ವಲ್ಪ ಹೆಚ್ಚಾಗಿ ಮಾರುತಿ ಸ್ವಿಫ್ಟ್ ನ ಆಸು-ಪಾಸಿಗೆ ಬರಲಿದೆ ಎನ್ನಲಾಗುತ್ತಿದೆ.

ಹೊಸ ಆಲ್ಟೋ, ಬಿಎಸ್ 6 ನಿಯಮದಂತೆ ಹಲವು ಏರ್ ಬ್ಯಾಗ್ ಗಳನ್ನು ಹೊಂದಿರಲಿದೆ. ಜೊತೆಗೆ ಹಿಲ್‌‌ ಅಸಿಸ್ಟ್, ನವೀನ ಬ್ರೇಕ್ ತಂತ್ರಜ್ಞಾನ, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಇನ್ನೂ ಕಡಲವು ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರಲಿದೆ. ಜೊತೆಗೆ ಕಾರಿನ ಒಳಗೆ ದೊಡ್ಡ ಇನ್ಪೋಟೇನ್ ಮೆಂಟ್ ಸಿಸ್ಟಮ್ ಸೇರಿದಂತೆ, 360 ಡಿಗ್ರಿ ಕ್ಯಾಮೆರಾ, ಮುಂದಿನ ಹಾಗೂ ಹಿಂದಿನ ಪ್ರಯಾಣಿಕರಿಗೆ ಹೆಚ್ಚು ಸ್ಪೇಸ್ ಎಲ್ಲವೂ ದೊರಕಲಿದೆ. ಮಾರುತಿಯ ಎದುರಾಳಿ ಟಾಟಾ ಸಂಸ್ಥೆಯ ಟಾಪ್ ಸೆಲ್ಲಿಂಗ್ ಕಾರಾದ ಪಂಚ್ ಗೆ ಎದುರಾಳಿಯಾಗಿ ಈ ಕಾರನ್ನು ಮಾರುಕಟ್ಟೆಗೆ ತರಲಾಗುತ್ತಿದೆ ಎನ್ನಲಾಗುತ್ತಿದೆ.

ಮಾರುತಿ ಸಂಸ್ಥೆಯ ಸ್ವಿಫ್ಟ್, ಬೊಲೆನೊ, ಬ್ರಿಜಾ, ವ್ಯಾಗನ್ ಆರ್, ಎರ್ಟಿಗಾ, ಫ್ರಾಂಕ್ಸ್ ಕಾರುಗಳು ಅತ್ಯಂತ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ. ಈ ಪಟ್ಟಿಯಲ್ಲಿ ಆಲ್ಟೋ ಮೊದಲಿನಿಂದಲೂ ಇದೆ. ಆದರೆ ಈಗ ಆಲ್ಟೋ ಲುಕ್ ಬದಲಿಸಿದ ಮೇಲೆ ಅದೇ ಬೇಡಿಕೆಯನ್ನು ಉಳಿಸಿಕೊಳ್ಳಲಿದೆಯೇ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here