Gautam Gambhir
ಹಲವಾರು ಹೆಸರುಗಳು ಹರಿದಾಡಿದ ಬಳಿಕ ಕೊನೆಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆ ಆಗಿದ್ದಾರೆ. ವಿವಿಎಸ್ ಲಕ್ಷ್ಮಣ್, ರಿಕಿ ಪಾಂಟಿಗ್, ಸೆಹ್ವಾಗ್ ಸೇರಿದಂತೆ ಹಲವರ ಹೆಸರುಗಳು ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಕೇಳಿ ಬಂದಿತ್ತು. ಅಂತಿಮವಾಗಿ ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದಾರೆ. ಭಾರತದ ಶ್ರೀಲಂಕಾ ಪ್ರವಾಸದಿಂದ ಅವರು ತಂಡದ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕನಿಗೆ ಇರುವಷ್ಟೆ ಮಹತ್ವ, ಗೌರವ ಮತ್ತು ಜವಾಬ್ದಾರಿ ತಂಡದ ಕೋಚ್ ಗೆ ಇದೆ. ಅದಕ್ಕೆ ತಕ್ಕಂತೆ ಈ ಹುದ್ದೆಗೆ ಇರುವ ಸಂಬಳವೂ ಸಹ ಕಡಿಮೆಯಲ್ಲ. ಭಾರಿ ಮೊತ್ತದ ಸಂಬಳವನ್ನೇ ಗೌತಮ್ ಗಂಭೀರ್ ಗೆ ನೀಡಲಾಗುತ್ತಿದೆ. ಅಂದಹಾಗೆ ಸಂಬಳದ ಕಾರಣದಿಂದಲೆ ಗೌತಮ್ ಹೆಸರು ಘೋಷಣೆಗೆ ತಡವಾಯ್ತಂತೆ. ಗೌತಮ್ ದೊಡ್ಡ ಮೊತ್ತದ ಸಂಬಳಕ್ಕೆ ಬೇಡಿಕೆ ಇಟ್ಟಿದ್ದರು ಅವರೊಟ್ಟಿಗೆ ನೆಗೋಸಿಯೇಷನದ ಮಾಡಿ ನಿರ್ದಿಷ್ಟ ಮೊತ್ತಕ್ಕೆ ಕರೆ ತರಲು ತಡವಾಯ್ತು ಎನ್ನಲಾಗುತ್ತಿದೆ.
ಹೊಸ ಅವತಾರ ತಳೆದ ಮಾರುತಿ ಆಲ್ಟೋ, ಗ್ರಾಹಕರ ಹುಬ್ಬೇರುವುದು ಗ್ಯಾರೆಂಟಿ
ಅದಹಾಗೆ ಗೌತಮ್ ಗಂಭೀರ್ ಗೆ ವರ್ಷಕ್ಕೆ 12 ಕೋಟಿ ಸಂಬಳವನ್ನು ಬಿಸಿಸಿಐ ನೀಡಲಿದೆ. ಅಂದರೆ ಗೌತಮ್ ಗಂಭೀರ್ ಪ್ರತಿ ತಿಂಗಳು ಒಂದು ಕೋಟಿ ಸಂಬಳ ಪಡೆಯಲಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಂಬಳವನ್ನು ಭಾರತ ಕ್ರಿಕೆಟ್ ತಂಡದ ಇನ್ಯಾವುದೇ ಕೋಚ್ ಗಳಿಗೆ ನೀಡಿರಲಿಲ್ಲ. ರಾಹುಲ್ ದ್ರಾವಿಡ್ ಅವರಿಗೆ ವರ್ಷಕ್ಕೆ 10 ಕೋಟಿ ಮಾತ್ರವೇ ನೀಡಲಾಗಿತ್ತು ಎನ್ನಲಾಗುತ್ತದೆ.
ಸಂಬಳ ಮಾತ್ರವೇ ಅಲ್ಲದೆ ಇನ್ನೂ ಕೆಲವು ಹೆಚ್ಚುವರಿ ಸೌಲಭ್ಯಗಳು ಸಹ ಗೌತಮ್ ಗಂಭೀರ್ ಗೆ ಸಿಗಲಿದೆ. ಟೂರ್ನಿಗಾಗಿ ಹೊರಗೆ ಹೋದಾಗ ಡಿಎ (ಡೈಲಿ ಅಲೋವೆನ್ಸ್) ಎಂದು 21 ಸಾವಿರ ಸಿಗಲಿದೆ. ಲಾಂಡ್ರಿ ಅಲೋವೆನ್ಸ್, ರೂಂ ಅಲೋವೆನ್ಸ್, ದುಬಾರಿ ಜೀವ ವಿಮೆ, ಆರೋಗ್ಯ ವಿಮೆ, ವಿದೇಶ ಪ್ರವಾಸದ ಸಮಯದಲ್ಲಿ ನಾಯಕನ ಜೊತೆಗೆ ವಿಮಾನದ ಫಸ್ಟ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಅವಕಾಶ ಸಿಗಲಿದೆ. ಅಂದಹಾಗೆ ಎಲ್ಲ ಆಟಗಾರರಿಗೂ ಫಸ್ಟ್ ಕ್ಲಾಸ್ ಟಿಕೆಟ್ ಸಿಗುವುದಿಲ್ಲ. ಇನ್ನೂ ಕೆಲವು ಸೌಲಭ್ಯಗಳು ಗೌತಮ್ ಗಂಭೀರ್ ಗೆ ಸಿಗಲಿವೆ.