Darshan Thoogudeepa: ಭೇಟಿಗೆ ಬಂದವರ ಬಳಿ ಅಭಿಮಾನಿಗಳ ಬಗ್ಗೆ ವಿಚಾರಿಸಿದ ದರ್ಶನ್

0
256
Darshan Thoogudeepa

Darshan Thoogudeepa

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿ ನಾಳೆಗೆ (ಜುಲೈ 11) ಒಂದು ತಿಂಗಳಾಗುತ್ತದೆ. 13 ದಿನ ಪೊಲೊಇಸ್ ಕಸ್ಟಡಿಯಲ್ಲಿ ಕಳೆದ ದರ್ಶನ್ ಇನ್ನುಳಿದ ದಿನಗಳನ್ನು ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಸಹ ದರ್ಶನ್ ಎದುರಿಸಿದ್ದಾರೆ. ಮಾನಸಿಕ ಹಿಂಸೆ, ಒಂಟಿತನ, ಆರೋಗ್ಯ ಸಮಸ್ಯೆ ಇದೆಲ್ಲದರ ನಡುವೆಯೂ ಸಹ ದರ್ಶನ್ ತಮ್ಮನ್ನು ಭೇಟಿಯಾದ ವಕೀಲರ ಬಳಿ ತಮ್ಮ ಅಭಿಮಾನಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ಇಂದು (ಜುಲೈ 10) ಪವಿತ್ರಾ ಗೌಡ ಅವರ ಪರ ವಕೀಲರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪವಿತ್ರಾ ಗೌಡ ಹಾಗೂ ದರ್ಶನ್ ಅವರನ್ನು ಭೇಟಿ ಆಗಿದ್ದರು. ಹೆಚ್ಚು ಸಮಯವೇ ವಕೀಲರು ಜೈಲಿನಲ್ಲಿದ್ದರು‌. ಹೊರಬಂದು ಮಾಧ್ಯಮದವರೊಡನೆ ಮಾತನಾಡಿದ ವಕೀಲರು, ದರ್ಶನ್ ಹಾಗೂ ಪವಿತ್ರಾ ಗೌಡ ಜೊತೆ ಮಾತನಾಡಿದ ಕೆಲವು ವಿಷಯಗಳನ್ನು ಹಂಚಿಕೊಂಡರು.

‘ಜೈಲಿನಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತನಾಡಿದೆ. ಈ ಸಮಯದಲ್ಲಿ ಅವರ ಆರೋಗ್ಯ ವಿಚಾರಣೆ ಜೊತೆಗೆ ಪ್ರಕರಣದಲ್ಲಿ ಮುಂದಿನ ಕಾರ್ಯಗಳ ಬಗ್ಗೆ ಮುಂದಿನ ಹೆಜ್ಜೆಗಳ ಬಗ್ಗೆ ಅವರೊಡನೆ ಚರ್ಚಿಸಿದೆ’ ಎಂದಿದ್ದಾರೆ. ದರ್ಶನ್ ಜೊತೆ ಮಾತನಾಡುವಾಗ ಅವರು ತಮ್ಮ ಅಭಿಮಾನಿಗಳ ಯೋಗಕ್ಷೇಮ ವಿಚಾರಿಸಿದರು ಎಂದಿದ್ದಾರೆ.

ದರ್ಶನ್ ಸಹೋದರ ದಿನಕರ್ ನಿಜಕ್ಕೂ ಬಾಡಿಗೆ ಮನೆಯಲ್ಲಿದ್ದಾರೆಯೇ?

‘ದರ್ಶ‌ನ್ ಅವರಿಗೆ ಅಭಿಮಾನಿಗಳೆಂದರೆ ಬಹಳ ಪ್ರೀತಿ. ಹಾಗಾಗಿ ತಮ್ಮ ಅಭಿಮಾನಿಗಳು ಹೇಗಿದ್ದಾರೆ? ಯಾರೂ ಸಹ ಆತಂಕ ಪಟ್ಟುಕೊಳ್ಳುವುದು ಬೇಡ, ಯಾರೂ ಸಹ ಯಾವುದೇ ರೀತಿ ತೊಂದರೆ ಮಾಡಿಕೊಳ್ಳುವುದು ಬೇಡ’ ಎಂದು ದರ್ಶನ್ ಕಾಳಜಿ ತೋರಿದರು ಎಂದು ವಕೀಲರು ಹೇಳಿದ್ದಾರೆ.

ಅಂದಹಾಗೆ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಇಂದೂ ಸಹ ಜೈಲಿನಲ್ಲಿ ಭೇಟಿ ಆದರು. ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಇದು ಮೂರನೇ ಬಾರಿ ಪತ್ನಿ ಮತ್ತು ಪುತ್ರ ಅವರನ್ನು ಕಾಣಲು ಬಂದಿರುವುದು.

ತಮಗೆ ಜೈಲಿನ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಾಗಿರುವ ಕಾರಣ ತಮಗೆ ಮನೆಯಿಂದ ಆಹಾರ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ರಿಟ್ ಅರ್ಜಿಯನ್ನು ತಿರಸ್ಕರಿಸಿದೆ. ಆದರೆ ಸರ್ಕಾರಕ್ಕೆ ಈ ಬಗ್ಗೆ ನೋಟೀಸ್ ನೀಡಿದ್ದು, ಜೈಲಿನ ಆಹಾರ, ಮಲಗುವ ವ್ಯವಸ್ಥೆ ಸರಿ ಪಡಿಸುವಂತೆ ನಿರ್ದೇಶನ ನೀಡಿದೆ.

LEAVE A REPLY

Please enter your comment!
Please enter your name here