Anchor Aparna: ಈಡೇರಲಿಲ್ಲ ನಟಿ, ನಿರೂಪಕಿ ಅಪರ್ಣಾ ಕೊನೆ ಆಸೆ

0
165
Anchor Aparna
Anchor Aparna

Anchor Aparna

ನಟಿ, ನಿರೂಪಕಿ ಅಪರ್ಣಾ ನಿನ್ನೆ (ಜುಲೈ 12) ರಾತ್ರಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ ಕೇವಲ 51 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷದಿಂದಲೂ ಅವರು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಅಪರ್ಣಾರ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಅಶೋಕ್ ಸೇರಿದಂತೆ ಹಲವಾರು ಮಂದಿ ರಾಜಕಾರಣಿಗಳು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಪರ್ಣಾ ಬಹುಬೇಗ ಎಲ್ಲರನ್ನೂ ಅಗಲಿ ಹೋಗಿಬಿಟ್ಟಿದ್ದಾರೆ ಅವರಲ್ಲಿದ್ದ ಅದಮ್ಯ ಆಸೆಯೊಂದನ್ನು ಈಡೇರಿಸಿಕೊಳ್ಳದೆ ಮರೆಯಾಗಿದ್ದಾರೆ.

ಕನ್ನಡಿಗರಿಗೆ ತಿಳಿದೇ ಇರುವಂತೆ ಅಪರ್ಣಾ ಮೂರು ದಶಕಕ್ಕೂ ಹೆಚ್ಚು ಸಮಯ‌ ಕನ್ನಡದ ಅತ್ಯುತ್ತಮ ಕಾರ್ಯಕ್ರಮ ನಿರೂಪಕಿ ಆಗಿ ಮನೆ ಮಾತಾಗಿದ್ದವರು. ಡಿಡಿ ಚಂದನದಿಂದ ಆರಂಭಿಸಿ ಹಲವು ಹಲವು ಚಾನೆಲ್ ಗಳಲ್ಲಿ, ರೇಡಿಯೋ ಕಾರ್ಯಕ್ರಮಗಳಲ್ಲಿ ಅಪರ್ಣಾ ನಿರೂಪಕಿ ಆಗಿದ್ದರು. ಅವರ ಕನ್ನಡ‌ ಉಚ್ಛಾರಣೆಗೆ ಮಾರುಹೋಗದವರ ಸಂಖ್ಯೆ ಕಡಿಮೆ. ನಟಿಯಾಗಿಯೂ ಗುರುತಿಸಿಕೊಂಡಿದ್ದ ಅಪರ್ಣಾ ಹೆಚ್ಚು ಪರಿಚಿತವಾಗಿರುವುದು ನಿರೂಪಕಿಯಾಗಿಯೇ.

BREAKING: ಜನಪ್ರಿಯ ನಟಿ, ನಿರೂಪಕಿ ಅಪರ್ಣಾ ನಿಧನ

ಅಪರ್ಣಾಗೆ ನಿರೂಪಣೆಯನ್ನು ಕಲಿಸುವ ಶಾಲೆಯನ್ನು ತೆರೆಯುವ ಮನಸ್ಸಿತ್ತು. ತಮ್ಮ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಹಂಬಲ ಇತ್ತು. ನಿರೂಪಣೆಗಾಗಿ ಶಾಲೆ ತೆರೆದು, ಅದಕ್ಕೊಂದು‌ ಪಠ್ಯ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂಬುದು ಅವರ ಆಸೆಯಾಗಿತ್ತು. ಈ ಬಗ್ಗೆ ತಮ್ಮ ಗೆಳೆಯರ ಬಳಿ ಅವರು ಹಲವು ಬಾರಿ ಹೇಳಿಕೊಂಡಿದ್ದರು. ಆದರೆ ಆಸೆ ಈಡೇರಿಸಿಕೊಳ್ಳುವ ಮುನ್ನವೇ ಅಪರ್ಣಾ ಕಣ್ಮರೆಯಾದರು.

ನಿರೂಪಣಾ ಕ್ಷೇತ್ರದಲ್ಲಿ ಅಪರ್ಣಾ ಅವರದ್ದು ಅಭೂತಪೂರ್ವ ಸಾಧನೆ. ,1990 ರಲ್ಲಿ ನಿರೂಪಣೆ ಆರಂಭಿಸಿದ ಅಪರ್ಣಾ, ಡಿಡಿ ಚಂದನ, ಆಕಾಶವಾಣಿ, ಎಫ್ ಎಂ ರೇಡಿಯೋ, ವಿವಿಧ ಕಲಾಸಗಿ ಚಾನೆಲ್ ಗಳಲ್ಲಿ ನಿರೂಪಣೆ ಮಾಡಿರುವುದು ಮಾತ್ರವಲ್ಲದೆ. ಸರ್ಕಾರದ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಸಹ ನಿರೂಪಣೆ ಮಾಡಿದ್ದಾರೆ. ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಅಪರ್ಣಾ ಅವರೇ ಕಾರ್ಯಕ್ರಮ ನಿರೂಪಣೆಗೆ ಇರಬೇಕಿತ್ತು. ಆ ಮಟ್ಟಿಗಿನ ಜನಪ್ರಿಯತೆ ಅವರದ್ದಾಗಿತ್ತು. ಅಂದಹಾಗೆ ನಮ್ಮ ಮೆಟ್ರೋನಲ್ಲಿ ನಿಮಿಷಕ್ಕೊಮ್ಮೆ ಕೇಳಿ ಬರುವ ಧ್ವನಿ ಅಪರ್ಣಾ ಅವರದ್ದೇ. ಅಪರ್ಣಾ ಇಲ್ಲವಾದರೂ ಅವರ ಧ್ವನಿ ಕನ್ನಡಿಗರೊಟ್ಟಿಗೆ ಇರಲಿದೆ.

LEAVE A REPLY

Please enter your comment!
Please enter your name here