ಬೆಂಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಎಂಟು ಸ್ಥಳಗಳು ಇವು
ಕಬ್ಬನ್ ಪಾರ್ಕ್, 1870 ರಲ್ಲಿ ನಿರ್ಮಾಣವಾದ ಕಬ್ಬನ್ ಪಾರ್ಕ್ ಮನಸ್ಸಿಗೆ ಶಾಂತಿ ನೀಡುವ ಜೊತೆಗೆ ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಜೀವ ವೈವಿಧ್ಯದ ಬಗ್ಗೆ ಆಸಕ್ತಿ, ಸಫಾರಿ ಮಾಡುವ ಇಚ್ಛೆ ಇದ್ದವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲೇ ಬೇಕು. ಇಲ್ಲಿ ಚಿಟ್ಟೆ ಪಾರ್ಕ್ ಸಹ ಇದೆ.
ಬೆಂಗಳೂರು ಅರಮನೆ, ಬೆಂಗಳೂರಿನ ಘತ ವೈಭವಕ್ಕೆ ಸಾಕ್ಷಿ. ಬೆಂಗಳೂರು ಅರಮನೆಯಲ್ಲಿ ಹಲವು ಐತಿಹಾಸಿಕ ವಸ್ತುಗಳು, ಚಿತ್ರಗಳು ಸಹ ಇವೆ.
ಟಿಪ್ಪು ಸುಲ್ತಾನ ಅರಮನೆ, ಚಾಮರಾಜಪೇಟೆಯಲ್ಲಿರುವ ಟಿಪ್ಪು ಸುಲ್ತಾನ ಅರಮನೆ ಬೆಂಗಳೂರಿನ ಇತಿಹಾಸಕ್ಕೆ ಸಾಕ್ಷಿ. ಇಲ್ಲಿ ಬಳಸಲಾಗಿರುವ ವಿನ್ಯಾಸ ಗಮನ ಸೆಳೆಯದೇ ಇರದು.
ಲಾಲ್ ಬಾಗ್, ಟಿಪ್ಪು ಕಾಲದಲ್ಲಿ ನಿರ್ಮಾಣವಾದ ಲಾಲ್ ಬಾಗ್ ಬೆಂಗಳೂರಿನ ಹೆಮ್ಮೆ. ಇಲ್ಲಿರುವಷ್ಟು ಸಸ್ಯ ವೈವಿಧ್ಯ ಬೇರೆಲ್ಲೂ ನೋಡಲು ಸಿಗದು.
ಇಸ್ಕಾನ್ ದೇವಾಲಯ, ರಾಜಾಜಿನಗರದ ಬಳಿ ಇರುವ ಇಸ್ಕಾನ್ ದೇವಾಲಯ ಬೆಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳ. ದೇವರ ದರ್ಶನ ಮಾಡಿ, ಪ್ರಸಾದ ಸೇವಿಸಿ ಬರಬಹುದು.
ಬೆಂಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಎಂಟುನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ವಸಂತ ನಗರದ ಬಳಿ ಇರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಕಲೆಯಲ್ಲಿ ಆಸಕ್ತಿ ಇರುವವರು ನೋಡಲೇ ಬೇಕಾದ ಜಾಗ. ಸ್ಥಳಗಳು ಇವು
ವಿಶ್ವೇಶ್ವರಯ್ಯ ಮ್ಯೂಸಿಯಂ, ವಿಜ್ಞಾನದ ಬಗ್ಗೆ ಆಸಕ್ತಿ ಇರುವವರು ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ಜವಾಹಾರ್ ಲಾಲ್ ನೆಹರು ತಾರಾಲಯವನ್ನು ಮಿಸ್ ಮಾಡುವಂತೆಯೇ ಇಲ್ಲ.