Sukesh Chandrashekhar: ಹರಾಜಾಗಲಿವೆ ಬೆಂಗಳೂರಿನ ಮಹಾವಂಚಕ ಸುಖೇಶನ 26 ಐಶಾರಾಮಿ ಕಾರುಗಳು

0
145
Sukesh Chandrashekhar
Sukesh Car

Sukesh Chandrashekhar

ಪ್ರಸ್ತುತ ತಿಹಾತ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಬೆಂಗಳೂರು ಮೂಲದ ಮಹಾ ವಂಚಕ ಸುಖೇಶನಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ 26 ಐಶಾಮಿ ಕಾರುಗಳ ಮಾರಾಟಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ ಹಲವು ಐಶಾರಾಮಿ ಕಾರುಗಳನ್ನು ವಂಚಕ ಸುಖೇಶ್ ಖರೀದಿಸಿದ್ದ ಆ ಎಲ್ಲ ಕಾರುಗಳನ್ನು ಈಗ ಹರಾಜು ಹಾಕಲಾಗುತ್ತಿದೆ.

ಸುಖೇಶ್ ನ ಮೇಲೆ ಇಡಿ ದಾಳಿ ಮಾಡಿ ಎರಡು ವರ್ಷಗಳಾಗುತ್ತಾ ಬಂದಿದ್ದು ಎರಡು ವರ್ಷಗಳ ಹಿಂದೆ ಸುಖೇಶ್ ಗೆ ಸೇರಿದ್ದ 26 ಕಾರುಗಳನ್ನು ಇಡಿ ವಶಪಡಿಸಿಕೊಂಡಿತ್ತು. ಆಗಲಿಂದಲೂ ಈ ಕಾರುಗಳು ಇಡಿ ವಶದಲ್ಲಿದ್ದವು‌. ಆದರೆ ಈ ಕಾರುಗಳ ಮೇಂಟೇನೆನ್ಸ್ ಇಡಿಗೆ ತಲೆ ನೋವಾಗಿತ್ತು, ಹಾಗಾಗಿ ನ್ಯಾಯಾಲಯದ ಒಪ್ಪಿಗೆ ಪಡೆದು ಕಾರುಗಳ ಹರಾಜಿಗೆ ಇಡಿ ಮುಂದಾಗಿದೆ. ಕಾರುಗಳ ಹರಾಜಿಗೆ ಸುಖೇಶನ ಪತ್ನಿ ಲೀಸಾ ತಕರಾರು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು ಆದರೆ ಆ ಅರ್ಜಿಯನ್ನು ನ್ಯಾಯಾಧೀಶರು ತಳ್ಳಿ ಹಾಕಿದ್ದಾರೆ.

ಸುಖೇಶ್ ಮೇಲೆ ದಾಳಿ ನಡೆಸಿದಾಗ ರೋಲ್ಸ್ ರಾಯ್ಸ್, ಫೆರಾರಿ, ರೇಂಜ್ ರೋವರ್, ಬೆಂಜ್, ಬಿಎಂಡಬ್ಲು, ಲೆಕ್ಸಸ್, ಆಸ್ಟನ್ ಮಾರ್ಟಿನ್ ಸೇರಿದಂತೆ ಇನ್ನೂ ಕೆಲವು‌ ಐಶಾರಾಮಿ ಬ್ರ್ಯಾಂಡ್ ನ ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 26 ಐಶಾರಾಮಿ ಕಾರುಗಳು ಸುಖೇಶ್ ಬಳಿ ಇದ್ದವು. ಅವುಗಳನ್ನು ನಿಲ್ಲಿಸುವುದು ಇಡಿಗೆ ತಲೆ ನೋವಾಗಿತ್ತು, ಓಡಿಸದೆ ನಿಲ್ಲಿಸಿರುವುದರಿಂದ ಅದರ ಎಂಜಿನ್ ನ ಕೆಲ ಭಾಗಗಳು ಹಾಳಾಗಿದ್ದು ಅವುಗಳ ಮೇಂಟೇನ್ ಸಹ ಕಷ್ಟ ಹಾಗಾಗಿ, ಆ ವಾಹನಗಳನ್ನೆಲ್ಲ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಎಫ್ ಡಿ ಮಾಡುವುದಾಗಿ ಇಡಿ ನ್ಯಾಯಾಲಯಕ್ಕೆ ಹೇಳಿತ್ತು. ಇಡಿಯ ಅರ್ಜಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ರೈತರಿಗೆ ಅವಮಾನ ಮಾಡಿದ ಬೆಂಗಳೂರಿನ ಪ್ರಸಿದ್ಧ ಮಾಲ್

ಬೆಂಗಳೂರಿನ ಸುಖೇಶ್ ಭಾರತದ ಮಹಾನ್ ವಂಚಕರಲ್ಲಿ ಮೊದಲಿಗ. ತಮಿಳು ಮೂಲದ ಸುಖೇಶ್ ಹಲವು ಸಚಿವರು, ಶಾಸಕರು, ಖ್ಯಾತ ಉದ್ಯಮಿಗಳಿಗೂ ಉಂಡೆನಾಮ ಹಾಕಿ ನೂರಾರು ಕೋಟಿ ಸಂಪಾದನೆ ಮಾಡಿದ್ದ. ಇಡಿ, ಸುಖೇಶ್ ಮೇಲೆ ದಾಳಿ ಮಾಡಿದಾಗ ಸುಮಾರು 200 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಸುಖೇಶ್ ನಿಂದ ವಶಪಡಿಸಿಕೊಂಡಿತ್ತು. ಇದರಲ್ಲಿ ಕೆಜಿಗಟ್ಟಲೆ ಚಿನ್ನ ಸಹ ಸೇರಿತ್ತು.

ತಮಿಳುನಾಡಿನ ಪ್ರಮುಖ ರಾಜಕಾರಣಿ ಟಿಟಿವಿ ದಿವಾಕರನ್ ಅವರಿಗೆ ನೂರಾರು ಕೋಟಿ ಹಣ ವಂಚನೆ ಮಾಡಿದ್ದ. ಅದೇ ಪ್ರಕರಣದಲ್ಲಿ ಜೈಲು ಸೇರಿದ್ದ ಸುಖೇಶ್ ಜೈಲಿನಿಂದಲೇ ತನ್ನ ವಂಚನೆ ಮುಂದುವರೆಸಿದ್ದ ಪ್ರಸಿದ್ಧ ರ್ಯಾನ್ ಬಾಕ್ಸಿ ಸಂಸ್ಥೆಯ ಮಾಲೀಕನ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ್ದ. ರ್ಯಾನ್ ಬಾಕ್ಸಿ ಸಂಸ್ಥೆಯ ಮಾಲೀಕನ ಪತ್ನಿ ಸುಮಾರು 50 ಕೋಟಿ ಹಣವನ್ನೂ ಸಹ ಸೆಖೇಶ್ ಗೆ ನೀಡಿದ್ದರು. ಆದರೆ ಅದಾದ ಬಳಿಕ ಇಡಿಗೆ ದೂರು ನೀಡಿದ್ದರು. ಬಳಿಕ ಇಡಿ ಸುಖೇಶ್ ಪ್ರಕರಣ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಬಳಿಕ ಆತನ ಅನೇಕ ವಿಷಯಗಳು ಬಹಿರಂಗಗೊಂಡವು.

LEAVE A REPLY

Please enter your comment!
Please enter your name here