Bollywood Story: ಪರಸ್ತ್ರೀ ಜೊತೆಗಿದ್ದಾಗ ಹೆಂಡತಿ ಕೈಗೆ ಸಿಕ್ಕಿಬಿದ್ದಿದ್ದ ಬಾಲಿವುಡ್ ಸ್ಟಾರ್ ನಟ

0
163
Bollywood Story
Vishal Punjabi

Bollywood Story: ಬಾಲಿವುಡ್ ಚಿತ್ರರಂಗದ ಅಪಸವ್ಯಗಳು ಒಂದೆರಡಲ್ಲ. ಮದುವೆಗೆ ಮುಂದೆ ತಿಂಗಳಿಗೊಬ್ಬರು ಬಾಯ್ ಫ್ರೆಂಡ್-ಗರ್ಲ್ ಫ್ರೆಂಡ್ ಗಳು, ಹಲವು ಲೈಂಗಿಕ ಸಂಗಾತಿಗಳು, ಗರ್ಭಿಣಿ ಆದ ಬಳಿಕ‌ ಮದುವೆ, ಅಕ್ರಮ ಸಂಬಂಧಗಳು ಒಂದೆರಡಲ್ಲ.

ಆಗಾಗ್ಗೆ ಬಾಲಿವುಡ್ ನ ಈ ಕರಾಳ ಸುದ್ದಿಗಳು ಬಹಿರಂಗ ಆಗುತ್ತಲೇ ಇರುತ್ತವೆ. ಬಾಲಿವುಡ್ ನ ಸೆಲೆಬ್ರಿಟಿ ವೆಡ್ಡಿಂಗ್ ವಿಡಿಯೋಗ್ರಾಫರ್  ತಮ್ಮ ಗ್ರಾಹಕನಾಗಿದ್ದ ನಟನೊಬ್ಬ ತನ್ನ ಗರ್ಲ್‌ಫ್ರೆಂಡ್ ಜೊತೆ ಏಕಾಂತದಲ್ಲಿದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಿದ್ದ ಘಟನೆ ಹಂಚಿಕೊಂಡಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಸೆಲೆಬ್ರಿಟಿ ವೆಡ್ಡಿಂಗ್ ಫಿಲ್ಮ್ ಮೇಕರ್, ವಿಶಾಲ್‌ ಪಂಜಾಬಿ, ಸ್ಟಾರ್ ನಟನ ಕರ್ಮ ಕಾಂಡವನ್ನು ಬಿಚ್ಚಿಟ್ಟಿದ್ದಾರೆ ಅಲ್ಲದೆ ಅದರಿಂದ ತಮಗೆ ಆದ ನಷ್ಟದ ಬಗ್ಗೆಯೂ ಮಾತನಾಡಿದ್ದಾರೆ.

ಭಾರಿ ಅದ್ಧೂರಿಯಾಗಿ ಮದುವೆ ಆಗಿದ್ದ ಸ್ಟಾರ್ ನಟ, ಮದುವೆಯಾದ ಕೇವಲ ಎರಡು ತಿಂಗಳಲ್ಲಿ ತನ್ನ ಹೊಸ ಸಿನಿಮಾದ ಸಹನಟಿಯೊಟ್ಟಿಗೆ ಸಂಬಂಧ ಇಟ್ಟುಕೊಂಡಿದ್ದನಂತೆ. ಸಿನಿಮಾ ಸೆಟ್ ನಲ್ಲಿ ತನ್ನ ವ್ಯಾನಿಟಿ ವ್ಯಾನ್ ಗೆ ನಟಿಯನ್ನು ಕರೆಸಿಕೊಂಡು ಶೃಂಗಾರದಲ್ಲಿ ತೊಡಗಿರುವಾಗಲೇ ಆ ಸ್ಟಾರ್ ನಟನ ನಟಿ ಸೆಟ್ ಗೆ ಎಂಟ್ರಿ ಕೊಟ್ಟರಂತೆ. ತನ್ನ ಗಂಡನ ರಂಗಿನಾಟ ಕಂಡು ಕೋಪದಿಂದ ಸೆಟ್ ನಲ್ಲೇ ಜಗಳ ಮಾಡಿ ಹೋದರಂತೆ.

Darshan: ಜೈಲಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ನಟ ದರ್ಶನ್, ಜೈಲಾಧಿಕಾರಿಗಳಿಗೆ ತಲೆ‌ ನೋವು

ಆದರೆ ಇದರಿಂದ ತಮಗೆ ಬಹಳ ನಷ್ಟವಾಯ್ತು ಎಂದಿದ್ದಾರೆ ವಿಶಾಲ್ ಪಂಜಾಬಿ. ನಾನು ಸಾಮಾನ್ಯವಾಗಿ ಮದುವೆಯ ಮುಂದೆ ಅರ್ಧ ಹಣ, ಮದುವೆ ಮುಗಿದು ವಿಡಿಯೋ ಡೆಲಿವರಿ ಕೊಟ್ಟ ಬಳಿಕ ಅರ್ಧ ಹಣ ನೀಡುವಂತೆ ಹೇಳಿರುತ್ತೇನೆ‌. ಆದರೆ ಆ ನಟ ಮಾಡಿದ ಕೆಲಸಕ್ಕೆ ಆತನ ಪತ್ನಿ ನಾನು ಮಾಡೊದ ಮದುವೆ ವಿಡೊಯೋದ ಡೆಲಿವರಿಯನ್ನೇ ಪಡೆದುಕೊಳ್ಳಲಿಲ್ಲ. ಮದುವೆ ವಿಡಿಯೋ ನೀವೆ ಇಟ್ಟುಕೊಳ್ಳಿ ಎಂದು ಫೋನ್ ಕಟ್ ಮಾಡಿಬಿಟ್ಟರು ಎಂದಿದ್ದಾರೆ ವಿಶಾಲ್.

ಆ ಮದುವೆ ವಿಡಿಯೋ ಅನ್ನು ಕಾಮಿಡಿ ಸಿನಿಮಾ ಎಂದು ಬಿಡುಗಡೆ ಮಾಡಬಹುದು. ಮದುವೆಯ ದಿನ ತನ್ನ ಪತ್ನಿಯನ್ನು ಬಹಳ ಪ್ರೀತಿಸುವಂತೆ ನಾಟಕ ಮಾಡಿದ್ದ‌, ಕಣ್ಣೀರು ಹಾಕಿಕೊಂಡು ‘ಲವ್ ಯು ಬೇಬಿ’ ಎಂದೆಲ್ಲ ಹೇಳಿದ್ದ. ಆದರೆ ಅದಾದ ಎರಡೇ ತಿಂಗಳಿಗೆ ಬೇರೆ ನಟಿಯೊಟ್ಟಿಗೆ ರಾಸಕ್ರೀಡೆಯಲ್ಲಿ ತೊಡಗಿದ್ದ ಎಂದಿದ್ದಾರೆ.

ವಿಶಾಲ್ ಹೇಳಿರುವ ಈ ಸ್ಟಾರ್ ನಟ ಯಾರಿರಬಹುದು ಎಂಬ ಊಹೆ ಪ್ರಾರಂಭವಾಗಿದೆ‌. ಕೆಲವರು ಇದು ರಣ್ ಬೀರ್ ಕಪೂರ್ ಇರಬಹುದು ಎಂದಿದ್ದರೆ, ಇನ್ನು ಕೆಲವರು ಇದು ಸಿದ್ದಾರ್ಥ್ ಮಲ್ಹೋತ್ರಾ ಇರಬಹುದು ಎಂದಿದ್ದಾರೆ‌.

LEAVE A REPLY

Please enter your comment!
Please enter your name here