Union Budget 2024: ಬಜೆಟ್ ಬಳಿಕ ಮೊಬೈಲ್ ಬೆಲೆ ಕಡಿಮೆ, ಆದರೆ ನಿಜಕ್ಕೂ ಇದರಿಂದ ಗ್ರಾಹಕನಿಗೆ ಲಾಭ ಆಗಲಿದೆಯಾ?

0
113
Union Budget 2024
Nirmala Sitharaman

Union Budget 2024

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಮೊಬೈಲ್, ಚಾರ್ಜರ್ ಮತ್ತು ಮೊಬೈಲ್ ಸಂಬಂಧಿತ ಉಪಕರಣಗಳ ಬೆಲೆ ಕಡಿತಗೊಂಡಿರುವುದು  ಬಜೆಟ್ ನ ಪ್ರಮುಖ ಆಂಶವೆಂದು ಹೇಳಲಾಗುತ್ತಿದೆ‌. ಹಾಗಾದರೆ ಬಜೆಟ್ ನ ಬಳಿಕ ಮೊಬೈಲ್ ಬೆಲೆಗಳು ಎಷ್ಟು ಇಳಿಕೆ ಆಗಲಿವೆ? ನಿಜಕ್ಕೂ ಗ್ರಾಹಕನಿಗೆ ಲಾಭ ಆಗಲಿದೆಯೇ? ವಿವರವಾಗಿ ತಿಳಿಯೋಣ ಬನ್ನಿ.

ಇಂದಿನ ಬಜೆಟ್ ನಲ್ಲಿ, ಮೊಬೈಲ್, ಮೊಬೈಲ್ ಬಿಡಿ ಭಾಗ, ಚಾರ್ಜರ್ ಮೇಲಿನ ಮೂಲ ಕಸ್ಟಮ್ ತೆರಿಗೆಯನ್ನು 20 ರಿಂದ 15% ಇಳಿಸಿರುವುದಾಗಿ ಘೋಣಷೆ ಮಾಡಲಾಗಿದೆ. ಈ ಐದು ಪರ್ಸೆಂಟ್ ಇಳಿಕೆ ಸ್ವಾಗತಾರ್ಹವಾದರೂ ಇದರಿಂದ ಗ್ರಾಹಕನಿಗೆ ಲಾಭವಾಗುವುದು ಅನುಮಾನವೇ. ಮುಖ್ಯವಾಗಿ ಮೊಬೈಲ್ ಹಾಗೂ ಚಾರ್ಜರ್ ಮೇಲಿನ ಜಿಎಸ್ ಟಿ 18% ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದು ಭಾರತದಲ್ಲಿ ಮೊಬೈಲ್ ಫೋನ್ ಖರೀದಿದಾರರಿಗೆ ದೊಡ್ಟ ಹೊರೆಯಾಗಿದೆ.

ಇನ್ನು ಈಗ 5% ಇಳಿಕೆ ಮಾಡಿರುವುದು ಆಮದು ಸುಂಕ ಆದರೆ ಭಾರತದಲ್ಲಿ ಈಗ ಮಾರಾಟವಾಗುತ್ತಿರುವ ಬಹುತೇಕ ಫೋನ್ ಗಳು ಭಾರತದಲ್ಲಿಯೇ ತಯಾರಾಗುತ್ತಿವೆ ಹಾಗಾಗಿ ಈ ಆಮದು ಸುಂಕದಲ್ಲಿನ ಇಳಿಕೆ ಬಹುತೇಕ ಮೊಬೈಲ್ ಗಳ ಬೆಲೆಯ ಮೇಲೆ ಪರಿಣಾಮವನ್ನೇ ಬೀರುವುದಿಲ್ಲ. ಆಪಲ್ ಭಾರತದಲ್ಲಿ ಫೋನ್ ತಯಾರಿಕೆ ಆರಂಭ ಮಾಡಿಲ್ಲವಾದ ಕಾರಣ ಅವುಗಳ ಬೆಲೆಯಲ್ಲಿ ತುಸು ಇಳಿಕೆ ಕಾಣಬಹುದಾದರೂ ಬೆಲೆಯಲ್ಲಿ ದೊಡ್ಡ ಬದಲಾವಣೆ ಕಾಣಲು ಸಿಗುವುದಿಲ್ಲ.

Kolar: ಕಾಲೇಜಿನಲ್ಲೇ ಹೊಡದಾಡಿಕೊಂಡ ಉಪನ್ಯಾಸಕರು

ಮೊಬೈಲ್ ಕ್ಷೇತ್ರದ ಕೆಲವು ಕೆಲ ಅನುಭವಿಗಳ ಪ್ರಾಕರ ಮೊಬೈಲ್ ಉದ್ಯಮದಲ್ಲಿ ಸ್ಪರ್ಧೆ ಹೆಚ್ಚೊರುವ ಕಾರಣ ಕಂಪೆನಿಗಳು ಬಹಳ ಕಡಿಮೆ ಲಾಭ ಇರಿಸಿಕೊಂಡಿರುತ್ತವೆ‌. ಆಫರ್ ನೀಡುವುದು, ಸರ್ವೀಸಿಂಗ್, ವಿಮೆ, ಗ್ಯಾರೆಂಟಿ ಇನ್ನಿತರೆಗಳಿಂದಾಗಿ ಸಂಸ್ಥೆಗಳು ಹೆಚ್ಚು ಲಾಭ ಮಾಡುವುದಿಲ್ಲ. ಹಾಗಾಗಿ ಈಗ ಸರ್ಕಾರ ಮಾಡಿರುವ 5% ಕಡಿತವನ್ನು ಸಂಸ್ಥೆಗಳು ತಮ್ಮ ಲಾಭಕ್ಕೆ ಇಟ್ಟುಕೊಳ್ಳುವ ಸಾಧ್ಯತೆ ಹೆಚ್ಚಿದೆ‌. ಸರ್ಕಾರ ನೀಡಿರುವ 5% ಕಡಿತ ಸಂಪೂರ್ಣವಾಗಿ ಗ್ರಾಹಕರಿಗೆ ತಲುಪುವುದಿಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here