Yuvraj Singh: ಮತ್ತೆ ಐಪಿಎಲ್ ಗೆ ಬರ್ತಿದ್ದಾರೆ ಯುವರಾಜ್ ಸಿಂಗ್, ಸಿಕ್ಕಿದೆ ಭರ್ಜರಿ ಆಫರ್

0
338
Yuvraj Singh
Yuvraj Singh

Yuvraj Singh

ಯುವರಾಜ್ ಸಿಂಗ್, ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ ರೌಂಡರ್, ಭಾರತ ವಿಶ್ವಕಪ್ ಗೆದ್ದ ಎರಡು ಬಾರಿ (ಒಮ್ಮೆ ಟಿ20) ಸರಣಿ ಸರ್ವೋತ್ತಮನಾಗಿದ್ದ ಯುವರಾಜ್ ಸಿಂಗ್ ತಮ್ಮ ಅತ್ಯದ್ಭುತ ಬ್ಯಾಟಿಂಗ್ ನಿಂದ ಭಾರತಕ್ಕೆ ಹಲವಾರು ಮಹತ್ವದ ಟೂರ್ನಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಯುವರಾಜ್ ಸಿಂಗ್ ಆರ್ ಸಿಬಿ, ಪಂಜಾಬ್ ಸೇರಿದಂತೆ ಹಲವು ತಂಡಗಳಿಗಾಗಿ ಆಡಿದ್ದಾರೆ. ಯುವಿ, ಐಪಿಎಲ್ ಸೇರಿದಂತೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಬಹಳ ಸಮಯವಾಗಿದೆ. ಆದರೆ ಈಗ ಯುವರಾಜ್ ಸಿಂಗ್ ಐಪಿಎಲ್ ಗೆ ಮರಳುತ್ತಿದ್ದಾರೆ!

\ಆದರೆ ಯುವರಾಜ್ ಸಿಂಗ್ ಐಪಿಎಲ್ ಗೆ ಬರುತ್ತಿರುವುದು ಆಟಗಾರನಾಗಿ ಅಲ್ಲ ಬದಲು, ಕೋಚ್ ಆಗಿ. ಗುಜರಾತ್ ಟೈಟನ್ಸ್ ಐಪಿಎಲ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಯುವರಾಜ್ ಸಿಂಗ್ ರನ್ನು ಕೇಳಲಾಗಿದ್ದು, ಭಾರಿ ದೊಡ್ಡ ಆಫರ್ ಅನ್ನೇ ಯುವರಾಜ್ ಸಿಂಗ್ ಗೆ ನೀಡಲಾಗಿದೆ.

ಗುಜರಾತ್ ಟೈಟನ್ಸ್ ಗೆ ಆಶಿಶ್ ನೆಹ್ರಾ ಮುಖ್ಯ ಕೋಚ್ ಆಗಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕ್ವತದಲ್ಲಿ‌ಗುಜರಾತ್ ಟೈಟನ್ಸ್ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದೆ ಮಾತ್ರವಲ್ಲದೆ, 2022 ರಲ್ಲಿ ಐಪಿಎಲ್ ಕಪ್ ಅನ್ನು ಸಹ ಗೆದ್ದಿತ್ತು. ಆದರೆ ಈಗ ತಂಡದ ಮುಖ್ಯ ಕೋಚ್ ಸ್ಥಾನದಿಂದ ನೆಹ್ರಾ ಅವರನ್ನು ಕೈಬಿಡಲಾಗಿದ್ದು ಆ ಸ್ಥಾನಕ್ಕೆ ಯುವರಾಜ್ ಸಿಂಗ್ ಅವರನ್ನು ನೇಮಿಸಲಾಗಿದೆ.

BBMP: ಬೀದಿ ನಾಯಿಗಳಿಗೆ ಚಿಪ್ ಅಳವಡಿಸಲು ಮುಂದಾದ ಬಿಬಿಎಂಪಿ

ಯುವರಾಜ್ ಸಿಂಗ್ ಈ ಹಿಂದೆಯೇ ಐಪಿಎಲ್ ತಂಡವೊಂದಕ್ಕೆ ಮೆಂಟರ್ ಆಗುವ‌ ಪ್ರಯತ್ನ ಮಾಡಿದ್ದರು. ಆದರೆ ಆಗ ಅದು ಸಾಧ್ಯವಾಗಿರಲಿಲ್ಲ. ಈಗ ಗುಜರಾತ್ ಟೈಟನ್ಸ್ ನ ಮುಖ್ಯ ಕೋಚ್ ಆಗುತ್ತಿದ್ದಾರೆ. ಯುವರಾಜ್ ಸಿಂಗ್, ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದು, ಅವರಿಗೆ ಕೋಚಿಂಗ್ ನ ಅನುಭವ ಇದೆ. ಕಳೆದ ಐಪಿಎಲ್ ನಲ್ಲಿ ಹೈದರಾಬಾದ್ ಪರ ಭರ್ಜರಿ ಪ್ರದರ್ಸನ ನೀಡಿರುವ ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ರ ಶಿಷ್ಯ. ಈಗ ಗುಜರಾತ್ ತಂಡವನ್ನು ಯುವರಾಜ್ ಹೇಗೆ ನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಯುವರಾಜ್ ಸಿಂಗ್, RCB, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಕ್ಸ್ ಎಲೆವನ್, ಪುಣೆ ವಾರಿಯರ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗೆ ಆಡಿದ್ದಾರೆ. 132 ಐಪಿಎಲ್ ಪಂದ್ಯಗಳನ್ನು ಆಡಿರುವ ಯುವಿ, 2750 ರನ್ ಭಾರಿಸಿ, 36 ವಿಕೆಟ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here