Sri Lanka: ಮುಸ್ಲೀಮರ ಕ್ಷಮೆ ಕೇಳಿದ ಶ್ರೀಲಂಕಾ, ಕಾರಣ ಏನು?

0
137
Sri Lanka
Namaz

Sri Lanka

ನೆರೆಯ ಶ್ರೀಲಂಕಾ ದೇಶವು, ತನ್ನ ದೇಶದ ಮುಸ್ಲೀಂ ಸಮುದಾಯದ ಕ್ಷಮೆ ಕೇಳಿದೆ. ಕೋವಿಡ್ ಸಮಯದಲ್ಲಿ ಮಾಡಿದ ಬಲವಂತದ ಅಂತ್ಯ ಸಂಸ್ಕಸರಕ್ಕೆ ಶ್ರೀಲಂಕಾದ ಸಂಸತ್ತು ಮುಸ್ಲೀಂ ಸಮುದಾಯದ ಕ್ಷಮೆ ಕೇಳಿದೆ. ಸರ್ಕಾರದ ಈ ಕ್ಷಮೆಯನ್ನು ಮುಸ್ಲೀಂ ಸಮುದಾಯ ಸ್ವೀಕಾರ ಮಾಡಿದೆ. ಆದರೆ ಈ ಕ್ರಮಕ್ಕೆ ಕಾರಣವಾದವರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದೆ.

ಕೋವಿಡ್ ಸಮಯದಲ್ಲಿ ಏನಾಗಿತ್ತು?

ಕೋವಿಡ್ ಸಮಯದಲ್ಲಿ ನಿಧನ ಹೊಂದಿದ ಮುಸ್ಲೀಮರನ್ನು ಅವರ ಪದ್ಧತಿಯಂತೆ ಮಣ್ಣಿನಲ್ಲಿ ಹೂಳಲು ಬಿಟ್ಟಿರಲಿಲ್ಲ. ಬದಲಾಗಿ ಸುಡಲಾಗಿತ್ತು. ಕೋವಿಡ್ ಸೋಂಕಿತರನ್ನು ಮಣ್ಣಿನಲ್ಲಿ ಹೂಳುವುದರಿಂದ ತಾವುದೇ ಸಮಸ್ಯೆ ಆಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದರೂ ಸಹ ಶ್ರೀಲಂಕಾ ಸರ್ಕಾರವು ಶವಗಳನ್ನು ಸುಟ್ಟಿತ್ತು.

2020 ರಲ್ಲಿ ಹೊಸ ಕಾನೂನೊಂದನ್ನು ತಂದಿದ್ದ ರಸಜಪಕ್ಸೆ ಸರ್ಕಾರ ‘ಕಡ್ಡಾಯ ಅಂತ್ಯಸಂಸ್ಕಾರ ಪಾಲಿಸಿ’ಯನ್ನು ಪರಿಚಯಿಸಿತ್ತು. ಈ ಪಾಲಿಸಿಗೆ ಮುಸ್ಲೀಮರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸತ್ತವರನ್ನು ಮೆಕ್ಕಾ ಇರುವ ದಿಕ್ಕಿಗೆ ಮುಖ ಮಾಡಿ ಹೂಳುವುದು ಇಸ್ಲಾಂನ ಪದ್ಧತಿ, ದೇಹವನ್ನು ಸುಡುವುದಕ್ಕೆ ಅವಕಾಶವಿಲ್ಲ. ಹಾಗಾಗಿ ಈ ಪಾಲಿಸಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ 2021 ರಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ಶ್ರೀಲಂಕಾಗೆ ಬಂದು ಮನವಿ ಮಾಡಿದ ಬಳಿಕವಷ್ಟೆ ಮೃತರ ದೇಹವನ್ನು ಕಡ್ಡಾಯವಾಗಿ ಸುಡುವ ಆದೇಶವನ್ನು ಹಿಂಪಡೆಯಲಾಯ್ತು. ಆದರೆ ದ್ವೀಪ ರಾಷ್ಟ್ರದ ಖಾಲಿ ಜಾಗವೊಂದರಲ್ಲಿ ಸಾಮೂಹಿಕವಾಗಿ ದೇಹಗಳನ್ನು ಹೂಳುವ ಪದ್ಧತಿ ಆ ನಂತರ ಆರಂಭವಾಯ್ತು. ಇದಕ್ಕೂ ಸಹ ವಿರೋಧಗಳು ಎದುರಾಗಿದ್ದವು.

Yuvraj Singh: ಮತ್ತೆ ಐಪಿಎಲ್ ಗೆ ಬರ್ತಿದ್ದಾರೆ ಯುವರಾಜ್ ಸಿಂಗ್, ಸಿಕ್ಕಿದೆ ಭರ್ಜರಿ ಆಫರ್

ಶ್ರೀಲಂಕಾ ಸರ್ಕಾರ ಕೇಳಿರುವ ಕ್ಷಮೆಯನ್ನು ಸ್ವೀಕರಿಸಿರುವುದಾಗಿ ಹೇಳಿರುವ ದೇಶದ ಮುಸ್ಲಿಂ ಸಮುದಸಯದ ಮುಖಂಡರು. ಈ ಆದೇಶ ಹೊರಬರಲು ಕಾರಣವಾದ ಮೆತಿಕಾ ವಿಂತಾಜೆ ಮತ್ತು ಚಾನ ಜಯಸುಮಾನ ವಿರುದ್ಧ ಪ್ರಕರಣ ದಾಖಲಿಸಲಿದ್ದೇವೆ. ಅವರಿಂದ ಪರಿಹಾರವನ್ನೂ ಪಡೆಯಲಿದ್ದೇವೆ ಎಂದಿದ್ದಾರೆ. ಯಾವುದೇ ವೈದ್ಯಕೀಯ ಹಿನ್ನೆಲೆ ಇಲ್ಲದಿರುವ ಈ ಇಬ್ಬರು ‘ತಜ್ಞರ’ ಸಲಹೆಯಿಂದಲೇ ರಾಜಪಕ್ಸೆ ಹೆಣಗಳನ್ನು ಸುಡುವ ಆದೇಶ ಮಾಡಿದ್ದರು.

LEAVE A REPLY

Please enter your comment!
Please enter your name here