Muslim Population: ಭಾರತದ ಈ ರಾಜ್ಯಗಳಲ್ಲಿ ಮುಸ್ಲೀಂ ಜನಸಂಖ್ಯೆ ಹೆಚ್ಚಿದೆ: ಕರ್ನಾಟಕದಲ್ಲಿ ಎಷ್ಟು?

0
135
Muslim Population
Muslim Population

Muslim Population

ಭಾರತ, ವಿವಿಧತೆಯಲ್ಲಿ ಏಕತೆಗೆ ವಿಶ್ವದಲ್ಲೇ ಮಾದರಿಯಾಗಿದೆ‌‌. ದೇಶದಲ್ಲಿ ಹಲವು ಧರ್ಮಗಳ, ಸಾವಿರಾರು ಜಾತಿಗಳಿಗೆ ಸೇರಿದ ಜನರಿದ್ದಾರೆ. ಆದರೆ ಇತ್ತೀಚೆಗೆ ಮುಸ್ಲೀಂ ಜನಮಖ್ಯೆ ಹೆಚ್ಚುತ್ತಿದೆ‌ ಎಂಬ ಸುದ್ದಿಗಳನ್ನು ರೋಚಕಗೊಳಿಸಿ ಪ್ರಸ್ತುತ ಪಡಿಸಲಾಗುತ್ತಿದೆ. 2011 ರ ಜನಸಂಖ್ಯಾ ಗಣತಿಯ ಪ್ರಕಾರ ಭಾರತದಲ್ಲಿ ಆಗ 14.2% ಮುಸ್ಲಿಂ ಸಮುದಾಯದವರಿದ್ದರು. ಅಂದಹಾಗೆ ಭಾರತದಲ್ಲಿ ಹೆಚ್ಚು ಮುಸ್ಲೀಮರಿರುವ ರಾಜ್ಯ ಯಾವುದು? ಕರ್ನಾಟದಲ್ಲಿ ಎಷ್ಟು ಮುಸ್ಲಿಂ ಜನಸಂಖ್ಯೆ ಇದೆ?

ಉತ್ತರ ಪ್ರದೇಶ

ಇಡೀ ದೇಶದಲ್ಲಿಯೇ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಜನ ಮುಸ್ಲಿಂ ಸಮುದಾಯದ ಜನರಿದ್ದಾರೆ. 2011 ರ ಗಣತಿಯಂತೆ ಈ ರಾಜ್ಯದ ಒಟ್ಟು ಜನಸಂಖ್ಯೆಯ 19.26% ಮುಸಲ್ಮಾನರಿದ್ದಾರೆ.

ಪಶ್ಚಿಮ ಬಂಗಾಳ

ಪಟ್ಟಿಯಲ್ಲಿ‌ ಎರಡನೇ ಸ್ಥಾನದಲ್ಲಿರುವುದು ಪಶ್ಚಿಮ ಬಂಗಾಳ. ರಾಜ್ಯದ ಜನಸಂಖ್ಯೆಯ 27% ಮುಸ್ಲೀಮರಿದ್ದಾರೆ. ಹಾಗಿದ್ದರೂ ಸಹ ಸಂಖ್ಯೆತ ಆಧಾರದಲ್ಲಿ ಉತ್ತರ ಪ್ರದೇಶಕ್ಕಿಂತಲೂ ಕಡಿಮೆ ಮುಸ್ಲಿಂ ಜನಸಂಖ್ಯೆ ಇಲ್ಲಿದೆ.

ಬಿಹಾರ

ಬಡ ರಾಜ್ಯ ಎನ್ನಲಾಗುವ‌ ಬಿಹಾರದಲ್ಲಿಯೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲೀಮರಿದ್ದಾರೆ‌. ರಾಜ್ಯದ ಒಟ್ಟು ಜನಸಂಖ್ಯೆಯ 16.87% ಮುಸ್ಲೀಮರಿದ್ದಾರೆ.

ಮಹಾರಾಷ್ಟ್ರ

ದೊಡ್ಡ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ 11.54% ಮುಸ್ಲೀಮರಿದ್ದಾರೆ. ಮಹಾರಾಷ್ಟ್ರದ ಮುಸಲ್ಮಾನರು ವ್ಯಾಪಾರ, ಸಿನಿಮಾ, ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇತರೆ ರಾಜ್ಯಗಳಿಗಿಂತಲೂ ಮಹಾರಾಣ್ಟ್ರದ ಮುಸ್ಲೀಮರು ಮುಂದುವರೆದಿದ್ದಾರೆ.

ಅಸ್ಸಾಂ

ಅಸ್ಸಾಂ ನಲ್ಲಿ ರಾಜ್ಯದ ಜನಸಂಖ್ಯಾವಾರು ಹೆಚ್ಚು ಮುಸಲ್ಮಾನರಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ 34.22% ಮುಸ್ಲೀಮರಿದ್ದಾರೆ. ಆದರೆ ಅಸ್ಸಾಂನಲ್ಲಿ ಕೋಮುಗಲಭೆಗಳು ತೀರ ಅಪರೂಪ.

ಕೇರಳ

ಕೇರಳ ರಾಜ್ಯದ ಒಟ್ಟು ಜನಸಂಖ್ಯೆಯ 26.56% ಮುಸ್ಲೀಮರಿದ್ದಾರೆ. ಇಲ್ಲಿ ಕ್ರಿಶ್ಚಿಯನ್ನರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಮುಸಲ್ಮಾನರು ಇಲ್ಲಿ ಕೃಷಿ, ವ್ಯಾಪಾರ, ಮೀನುಗಾರಿಕೆ ಎಲ್ಲದರಲ್ಲೂ ತೊಡಗಿಕೊಂಡಿದ್ದಾರೆ.

Sri Lanka: ಮುಸ್ಲೀಮರ ಕ್ಷಮೆ ಕೇಳಿದ ಶ್ರೀಲಂಕಾ, ಕಾರಣ ಏನು?

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರವು ಒಂದು ರಾಜ್ಯವಾಗಿದ್ದಾಗ ಅಲ್ಲಿನ ಒಟ್ಟು ಮುಸ್ಲೀಮನ ಜನಸಂಖ್ಯೆ 68.31% ಇತ್ತು. ಈಗ ಮೂರು ಭಾಗಗಳಾಗಿ ವಿಂಗಡಣೆ ಹೊಂದಿದೆ.

ಲಕ್ಷದ್ವೀಪ

ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಅತಿ ಹೆಚ್ಚು ಮುಸ್ಲೀಮರಿದ್ದಾರೆ. ಇಲ್ಲಿ ಒಟ್ಟು ಜನಸಂಖ್ಯೆಯ 96.58% ಮುಸ್ಲೀಮರಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯೂ ಕಡಿಮೆಯೇ ಇದೆ. 2011 ರಲ್ಲಿ ಇಲ್ಲಿ 60 ಸಾವಿರ ಮುಸ್ಲೀಮರಿದ್ದರು.

ಕರ್ನಾಟಕ

2011 ರ ಗಣತಿಯಂತೆ ಕರ್ನಾಟದಲ್ಲಿ ಸುಮಾರು 12% ಮುಸ್ಲೀಮರಿದ್ದಾರೆ. ಸಂಖ್ಯೆಯಲ್ಲಿ ಹೇಳಬೇಕೆಂದರೆ 78.93 ಲಕ್ಷ ಮುಸ್ಲೀಮರಿದ್ದರು. 2011 ರ ಬಳಿಕ ಭಾರತದಲ್ಲಿ ಜನಗಣತಿ ಆಗಿಲ್ಲ.

LEAVE A REPLY

Please enter your comment!
Please enter your name here