Instant Divorce
ಮದುವೆ ಏಳು ಜನ್ಮಗಳ ಬಂಧ ಎಂಬ ನಂಬಿಕೆ ಇದೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಕೆಲ ವಿದೇಶಗಳಲ್ಲಿ ನಂಬಲಾಗುತ್ತದೆ. ಆದರೆ ಇತ್ತೀಚೆಗೆ ಮದುವೆಯ ಕಾನ್ಸೆಪ್ಟ್ ಬದಲಾಗಿದೆ. ಅದ್ಧೂರಿಯಾಗಿ ಮದುವೆಯಾಗುತ್ತಿರುವ ಯುವಕರು ಕೆಲ ವರ್ಷಗಳಲ್ಲಿಯೇ ವಿಚ್ಛೇದನ ಪಡೆಯುತ್ತಿದ್ದಾರೆ. ಇಲ್ಲೊಂದು ಜೋಡಿ ಮದುವೆ ಆದ ಕೇವಲ ಮೂರೇ ನಿಮಿಷಕ್ಕೆ ಜಗಳ ಮಾಡಿಕೊಂಡು ವಿಚ್ಛೇದನ ಪಡೆದಿದ್ದಾರೆ.
ಈ ಮೂರು ನಿಮಷದ ಮದುವೆ ನಡೆದಿರುವುದು ಕುವೈತ್ ನಲ್ಲಿ. ಮದುವೆ ಮುಗಿದ ಮೇಲೆ ಹೊರಗೆ ಹೋಗಬೇಕಾದರೆ ಮದುವೆ ಹೆಣ್ಣು ಕೆಳಗೆ ಬಿದ್ದರಂತೆ. ಆಗ ನವ ವರ, ಅದನ್ನು ನೋಡಿ ನಕ್ಕಿದ್ದಲ್ಲದೆ ಮೂರ್ಖೆ ಎಂದು ಇಂಗ್ಲೀಷ್ ನಲ್ಲಿ ಬೈದಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ, ಪತಿಯೊಡನೆ ಜೋರಾಗಿ ಜಗಳ ಮಾಡಿದ್ದಾಳೆ. ಅಲ್ಲಿಯೇ ಇದ್ದ ವಿವಾಹ ನೊಂದಣಿ ಜಡ್ಜ್ ಗೆ ಮನವಿ ಮಾಡಿ ತಮ್ಮ ಮದುವೆಯನ್ನು ಕೂಡಲೆ ರದ್ದು ಮಾಡಿ ಎಂದಿದ್ದಾಳೆ. ಅಂತೆಯೇ ಜಡ್ಜ್ ಅವರ ಮದುವೆಯನ್ನು ರದ್ದು ಮಾಡಿದ್ದು, ಕೇವಲ ಮೂರೇ ನಿಮಿಷದಲ್ಲಿ ಈ ಜೋಡೊ ವಿಚ್ಚೇದನ ಪಡೆದಿದೆ.
ಈ ರೀತಿಯ ಇನ್ ಸ್ಟಂಟ್ ವಿಚ್ಚೇದನ ಇದು ಮೊದಲೇನೂ ಅಲ್ಲ. ಈ ಹಿಂದೆ 2004 ರಲ್ಲಿ ಇಂಗ್ಲೆಂಡ್ ನಲ್ಲಿ ಇಂಥಹುದೇ ಘಟನೆ ನಡೆದಿತ್ತು. ಮದುವೆಯಾದ 90 ನಿಮಿಷದಲ್ಲಿಯೇ ಮದುವೆ ಮುರಿದು ಬಿದ್ದಿತ್ತು, ಮಾತ್ರವಲ್ಲ ಆ ಘಟನೆಯಲ್ಲಿ ಗಂಡನಿಗೆ ಸರಿಯಾಗಿ ಏಟೂ ಸಹ ಬಿದ್ದಿತ್ತು ಪತ್ನಿಯಿಂದ.
https://samasthanews.com/bengaluru-zlb23-bar-awarded-as-indias-bar-and-asias-40th-best-bar/
ಸ್ಕಾಟ್ ಮೆಕೆ ಮತ್ತು ವಿಕ್ಟೋರಿಯಾ ಆಂಡರ್ ಸನ್ ಗ್ರೇಟ್ ಮ್ಯಾಂಚೆಸ್ಟರ್ ನಲ್ಲಿ ವಿವಾಹವಾಗಿದ್ದರು. ಅದಾದ ಬಳಿಕ ಕುಟುಂಬ ಭೋಜನದಲ್ಲಿ ಟೋಸ್ಟ್ ಮಾಡಿ ಕುಟುಂಬ ಸದಸ್ಯರು ಮದುವೆ ಹೆಣ್ಣಿನ ಬಗ್ಗೆ, ಅವರ ಕುಟುಂಬದ ಬಗ್ಗೆ ಎರಡು ನಿಮಿಷ ಮಾತನಾಡಬೇಕಿತ್ತು. ಅಂತೆಯೇ ಮದುವೆ ಗಂಡು ಟೋಸ್ಟ್ ಸಂದರ್ಭದಲ್ಲಿ ಮದುವೆ ಹೆಣ್ಣಿನ ಗೆಳತಿಯರ ಬಗ್ಗೆ ಅವಾಚ್ಯ ಜೋಕುಗಳನ್ನು ಮಾಡಿದ್ದಾನೆ. ಹೆಣ್ಣಿನ ಕುಟುಂಬದ ಬಗ್ಗೆಯೂ ವ್ಯಂಗ್ಯ ಮಾಡಿದ್ದಾನೆ. ಗಂಡಿನ ತಂದೆಯೂ ಸಹ ಹೆಣ್ಣಿನ ಕುಟುಂಬದ ಬಗ್ಗೆ ಜೋಕ್ ಮಾಡಿದ್ದಾರೆ. ಇದನ್ನು ಸಹಿಸದ ವಧು ವಿಕ್ಟೋರಿಯಾ, ಪತಿಯ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾಳೆ. ಬಳಿಕ ಇನ್ನೇನು ಇಬ್ಬರೂ ಹೋಗಿ ವಿಚ್ಚೇದನ ಪಡೆದಿದ್ದಾರೆ. ಇವರ ಮದುವೆ ಕೇವಲ 90 ನಿಮಿಷಗಳಲ್ಲಿಯೇ ಅಂತ್ಯವಾಗಿದೆ.