Renault Duster: ಬರುತ್ತಿದೆ ಆ ಕಾರು, ಮಾರುತಿ, ಹುಂಡೈ, ಟೊಯೊಟಾಗೆ ಶುರುವಾಗಿದೆ ನಡುಕ

0
149
Renault Duster
Renault Duster

Renault Duster

ಈಗ ರಸ್ತೆಯ ಮೇಲೆ ಎಲ್ಲಿ ನೋಡಿದರೂ ಎಸ್ ಯುವಿ ಕಾರುಗಳದ್ದೇ ಜಮಾನ. ಮಾರುತಿಯ ಬ್ರೆಜಾ, ಹುಂಡೈನ ಕ್ರೆಟಾ, ವೆನ್ಯು, ಟಾಟಾದ ನೆಕ್ಸಾನ್, ಕರ್ವ್, ಪಂಚ್, ಟೊಯೊಟಾದ ಉರ್ಬನ್ ಕ್ರೂಸರ್, ಕಿಯಾದ ಸೆಲ್ಟೋಸ್, ಹೀಗೆ ಹಲವು ಕಾರು ಕಂಪೆನಿಗಳು ಎಸ್ ಯುವಿ ಕಾರುಗಳ ಮೂಲಕವೇ ಕಾರು ಮಾರುಕಟ್ಟೆಯನ್ನು ಆಳುತ್ತಿವೆ. ಆದರೆ ಈಗ ಹೊಸ ಕಾರೊಂದು ಬರುತ್ತಿದೆ. ಈ ಕಾರಿನ ಟ್ರೇಲರ್ ಬಿಡುಗಡೆ ಆಗಿದ್ದು ಎಲ್ಲ ಸಂಸ್ಥೆಗಳಿಗೂ ನಡುಕ ಹುಟ್ಟಿಸಿದೆ.

ಭಾರತದಲ್ಲಿ ಎಸ್ ಯುವಿ ಕಾರುಗಳು ಹೆಚ್ಚು ಜನಪ್ರಿಯಗೊಳ್ಳಲು ಕಾರಣವಾದ ಕಾರು, ರೆನಾಲ್ಟ್ ಸಂಸ್ಥೆಯ ಡಸ್ಟರ್. ಮಹಿಂದ್ರಾ ಸಂಸ್ಥೆಯ ಸ್ಕಾರ್ಪಿಯೊ ಅತಿ ಹೆಚ್ಚು ಜನಪ್ರಿವಾಗಿದ್ದ ಕಾಲದಲ್ಲಿ ಬಂದ ಡಸ್ಟರ್ ಕಾರು ಭಾರತದಲ್ಲಿ ಎಸ್ ಯುವಿಯ ಸೆಗ್ಮೆಂಟ್ ನಲ್ಲಿ ಕ್ರಾಂತಿಯನ್ನೇ ಮಾಡಿತ್ತು. ಈಗ ಈ ಕಾರು ಮತ್ತೆ ಬರುತ್ತಿದೆ. ಅದೂ ನವೀನ ತಂತ್ರಜ್ಞಾನ, ಹೆಚ್ಚು ಪವರ್ ಹಾಗೂ ಭರ್ಜರಿ ಲುಕ್ ಜೊತೆಗೆ.

ಹೊಸದಾಗಿ ಬಿಡುಗಡೆ ಆಗಲಿರುವ ರೆನಾಲ್ಟ್ ಡಸ್ಟರ್ ಕಾರು ಹೊಸ ಜನರೇಷನ್ ಕಾರಾಗಿದ್ದು, ನೋಡಲು ರೇಂಜ್ ರೋವರ್ ಕಾರಿನ ರೀತಿ ಕಾಣುತ್ತಿದೆ. ಈ ಕಾರಿನ ಪ್ರಾಯೋಗಿಕ ಚಾಲನೆಯ ಕೆಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರೊದಾಡುತ್ತಿದ್ದು, XUV 700, ಥಾರ್ ಕಾರುಗಳಿಗೆ ಸ್ಪರ್ಧೆ ಒಡ್ಡುವ ರೀತಿ ಆಫ್ ರೋಡಿಂಗ್ ತಂತ್ರಜ್ಞಾನಗಳು ಈ ಕಾರಿನಲ್ಲಿ ಅಡಕವಾಗಿವೆ.

ಮಾತ್ರವಲ್ಲದೆ 20 ಲಕ್ಷಕ್ಕೂ ಹೆಚ್ಚಿನ ಬೆಲೆಯ ಕಾರುಗಳಲ್ಲಿ ಕಾಣ ಸಿಗುವ ಆಡಾಸ್ ತಂತ್ರಜ್ಞಾನ, ಸುರಕ್ಷತಾ ತಂತ್ರಜ್ಞಾನ, 360 ಡಿಗ್ರಿ ಕ್ಯಾಮೆರಾ, ಅತ್ಯುತ್ತಮ ಬಿಲ್ಟ್ ಕ್ವಾಲಿಟಿಯನ್ನು ಈ ಕಾರು ಒಳಗೊಂಡಿದೆ. ಮಾತ್ರವಲ್ಲದೆ ಐಶಾರಾಮಿತನವೂ ಕಾರಿನಲ್ಲಿ ಸಾಕಷ್ಟು ಇರಲಿದೆ. ಕೆಲವು ಮಾಹಿತಿ ಪ್ರಕಾರ ಹೀಟೆಡ್ ವೆಂಟಿಲೇಟೆಡ್ ಸೀಟ್ ಗಳು ಸಹ ಈ ಕಾರಿನಲ್ಲಿ ಲಭ್ಯವಾಗಲಿವೆಯಂತೆ.

Instant Divorce: ಮದುವೆಯಾದ ಮೂರೇ ನಿಮಿಷಕ್ಕೆ ವಿಚ್ಛೇದನ! ಕಾರಣವೇನು?

ಇಷ್ಟೋಂದು ಅತ್ಯಾಧುನಿಕ ತಂತ್ರಜ್ಞಾನ, ಲುಕ್, ಬಿಲ್ಡ್ ಕ್ವಾಲಿಟಿ ಒಳಗೊಂಡಿರುವ ಕಾರಿನ ಬೆಲೆ ಭಾರತದಲ್ಲಿ 10 ರಿಂದ 15 ಲಕ್ಷದ ಒಳಗೆಯೇ ಇರಲಿದೆ ಎನ್ನಲಾಗುತ್ತಿದೆ. ಈ ಕಾರು ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

LEAVE A REPLY

Please enter your comment!
Please enter your name here