Ramanagara District: ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾಯ್ತು ರಾಮನಗರ, ಹೆಸರು ಬದಲಾವಣೆಗೆ ಕಾರಣವೇನು?

0
130
Ramanagara district

Ramanagara District

ಉತ್ತರ ಪ್ರದೇಶ ಇನ್ನಿತರೆ ಕೆಲವು ರಾಜ್ಯಗಳಲ್ಲಿ ಕೇಳಿ ಬರುತ್ತಿದ್ದ ನಗರಗಳ ಹೆಸರು ಬದಲಾವಣೆ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಕರ್ನಾಟಕದ ರಾಮನಗರ ಜಿಲ್ಲೆಯ ಹೆಸರನ್ನು ದಕ್ಷಿಣ ಬೆಂಗಳೂರು ಜಿಲ್ಲೆಯನ್ನಾಗಿ ಬದಲಾವಣೆ ಮಾಡಲಾಗಿದೆ. ನಿನ್ನೆ (ಜುಲೈ 26) ನಡೆದ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ತೀರ್ಮಾನ ಮಾಡಲಾಗಿದ್ದು, ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದೀಯ ಸಚಿವ ಎಚ್​ಕೆ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕಾರಣ ಏನೆಂದು ವಿವರಿಸಿದ ಎಚ್​ಕೆ ಪಾಟೀಲ್, ‘ರಾಮನಗರಕ್ಕೆ ಬ್ರ್ಯಾಂಡ್ ಬೆಂಗಳೂರಿನ ಲಾಭ ವಿಸ್ತರಣೆ ಆಗಬೇಕು ಎಂಬ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗುತ್ತಿದೆ. ಇದರಿಂದ ರಾಮನಗರವು ಬೆಂಗಳೂರಿನ ಭಾಗವಾಗಲಿದೆ. ಈ ಹಿಂದೆಯೂ ರಾಮನಗರ ಬೆಂಗಳೂರಿನ ಭಾಗವಾಗಿತ್ತು, ಈಗ ಮತ್ತೆ ಬೆಂಗಳೂರಿನ ಭಾಗವಾಗುತ್ತಿದೆ’ ಎಂದಿದ್ದಾರೆ.

ಹೆಸರು ಬದಲಾವಣೆ ಮಾಡಲು ಸ್ಥಳೀಯರು, ಜನಪ್ರತಿನಿಧಿಗಳ ಒತ್ತಾಯ ಸಾಕಷ್ಟು ಇತ್ತು ಹಾಗಾಗಿ ಹೆಸರು ಬದಲಾವಣೆ ಮಾಡಲಾಗಿದೆ. ಇದನ್ನು ಚುನಾವಣೆ ದೃಷ್ಟಿಕೋನದಿಂದಲೋ ಅಥವಾ ರಾಜಕೀಯ ಹಿತಾಸಕ್ತಿಯಿಂದಲೋ ಮಾಡಿದ್ದಲ್ಲ. ಬ್ರ್ಯಾಂಡ್ ಬೆಂಗಳೂರಿನ ಭಾಗವಾದ ಬಳಿಕ ರಾಮನಗರ ಅಥವಾ ಬೆಂಗಳೂರು ದಕ್ಷಿಣದ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಬೆಂಗಳೂರಿಗೆ ಸಿಗುವ ಸವಲತ್ತುಗಳು ರಾಮನಗರಕ್ಕೂ ದೊರೆಯಲಿದೆ ಎಂದಿದ್ದಾರೆ.

ರಾಮನಗರದ ಹೆಸರು ಮಾತ್ರವೇ ಸದ್ಯಕ್ಕೆ ಬದಲಾವಣೆ ಆಗಿದೆ ಆದರೆ ಜಿಲ್ಲೆಯ ಭೌಗೋಳಿಕ ವಿನ್ಯಾಸ, ಅದರ ತಾಲ್ಲೂಕುಗಳು ಇನ್ಯಾವುದೇ ವಿಷಯಗಳು ಬದಲಾವಣೆ ಆಗುವುದಿಲ್ಲ. ಅಲ್ಲದೆ ರಾಮನಗರ ಜಿಲ್ಲಾ ಕಾರ್ಯಾಲಯ ಅದೇ ಹೆಸರಿನಲ್ಲಿ ಮುಂದುವರೆಯಲಿದೆ. ಹೆಸರು ಬದಲಾವಣೆ ಕುರಿತು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ಅದಾದ ಬಳಿಕ ಕಂದಾಯ ಇಲಾಖೆಯು ಉಳಿದ ಕಾರ್ಯವನ್ನು ಮಾಡಲಿದೆ’ ಎಂದಿದ್ದಾರೆ.

Karnataka Airports:ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳ ಹೆಸರು ಬದಲಿಸಲು ಮುಂದಾದ ರಾಜ್ಯ ಸರ್ಕಾರ

ರಾಮನಗರ ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ತಾಲ್ಲೂಕಾಗಿತ್ತು. ಎಚ್​ಡಿ ಕುಮಾರಸ್ವಾಮಿ ಸಿಎಂ ಆದಾಗ ರಾಮನಗರವನ್ನು ಸ್ವತಂತ್ರ್ಯ ಜಿಲ್ಲೆಯನ್ನಾಗಿಸಿದರು. ಕನಕಪುರ, ಮಾಗಡಿ, ಚನ್ನಪಟ್ಟಣ ಮತ್ತು ರಾಮನಗರ ತಾಲ್ಲೂಕುಗಳನ್ನು ಜಿಲ್ಲೆಗೆ ಸೇರಿಸಿದರು. ಈಗ ಹೆಸರು ಬದಲಾವಣೆ ಬಳಿಕವೂ ಈ ನಾಲ್ಕು ತಾಲ್ಲೂಕುಗಳು ರಾಮನಗರ ಅಥವಾ ಬೆಂಗಳೂರು ದಕ್ಷಿಣ ಜಿಲ್ಲೆಯ ಭಾಗವಾಗಿಯೇ ಇರಲಿವೆ.

ರಾಮನಗರದ ಹೆಸರು ಬದಲಾವಣೆ ಘೋಷಣೆ ಆದಾಗಿನಿಂದಲೂ ಅದನ್ನು ವಿರೋಧಿಸುತ್ತಲೇ ಬಂದಿರುವ ಎಚ್​ಡಿ ಕುಮಾರಸ್ವಾಮಿ, ನಿನ್ನೆಯೂ ಸಹ ಈ ಬಗ್ಗೆ ಗುಡುಗಿದ್ದು, ರಾಮನಗರದ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗುತ್ತಾರೆ. ಮುಂದೆ ನಮ್ಮ ಸರ್ಕಾರ ಬರುತ್ತದೆ ನಾವು ಕಡ್ಡಾಯವಾಗಿ ರಾಮನಗರ ಹೆಸರನ್ನು ಮತ್ತೆ ಇಡುತ್ತೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here