Hotel
ಊಟಕ್ಕೆ ಉಪ್ಪಿನ ಕಾಯಿ ಅತ್ಯಂತ ಮುಖ್ಯವಾದುದು. ಊಟ ಬಡಿಸುವ ಮೊದಲೇ ಎಲೆಯಲ್ಲಿ ಉಪ್ಪಿನಕಾಯಿ ಬಡಿಸಲಾಗುತ್ತದೆ. ಊಟದ ಎಲೆಗೆ ಮೊದಲು ಬೀಳುವುದೇ ಉಪ್ಪು ಮತ್ತು ಉಪ್ಪಿನ ಕಾಯಿ. ಆದೃ ತಮಿಳುನಾಡಿನ ವ್ಯಕ್ತಿಯೊಬ್ಬ ಉಪ್ಪಿನ ಕಾಯಿ ಮರೆತಿದ್ದಕ್ಕೆ 35 ಸಾವಿರ ರೂಪಾಯಿ ನಷ್ಟ ಅನುಭವಿಸಿದ್ದಾನೆ.
ಆಗಿರುವುದಿಷ್ಟೆ ತಮಿಳುನಾಡಿನ ಹೋಟೆಲ್ ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಉಪ್ಪಿನ ಕಾಯಿ ಇರಲಿಲ್ಲವೆಂದು ಗ್ರಾಹಕನೊಬ್ಬ ಕೋರ್ಟ್ ಮೆಟ್ಟಿಲೇರಿದ್ದ ಈಗ ಆ ಗ್ರಾಹಕನಿಗೆ ಗೆಲುವಾಗಿದ್ದು ಹೋಟೆಲ್ ಮಾಲೀಕ 35 ಸಾವಿರದ 25 ರೂಪಾಯಿ ದಂಡ ಕಟ್ಟಿದ್ದಾನೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿ ನಿವಾಸಿ ಆರೋಗ್ಯ ಸ್ವಾಮಿ 2022 ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ 25 ವೃದ್ಧರಿಗೆ ಊಟ ಹಾಕಿಸಿದ್ದರು. ಊಟಕ್ಕಾಗಿ ಸಮೀಪದ ಹೋಟೆಲ್ ನಿಂದ 25 ಆಹಾರ ಪೊಟ್ಟಣಗಳನ್ನು ತರಿಸಲಾಗಿತ್ತು. ಪ್ರತಿ ಊಟಕ್ಕೆ 70 ರೂಪಾಯಿ ಹಾಗೂ ಪಾರ್ಸೆಲ್ ಗೆ ತಲಾ 10 ರೂಪಾಯಿಯನ್ನು ಹೋಟೆಲ್ ಚಾರ್ಜ್ ಮಾಡಿದ್ದರು. ಅದರಂತೆ ಆರೋಗ್ಯ ಸ್ವಾಮಿ 25 ಪೊಟ್ಟಣಗಳಿಗೆ 2000 ರೂಪಾಯಿ ಪಾವತಿ ಮಾಡಿದ್ದರು. ಹೋಟೆಲ್‌ನವರು ರಸೀದಿ ಬದಲಾಗಿ ಕೈಯಲ್ಲಿ ಚೀಟಿ ಬರೆದುಕೊಟ್ಟಿದ್ದರು.
ಆದರೆ ಹೋಟೆಲ್ ನವರು ಕೊಟ್ಟಿದ್ದ ಊಟದ ಪ್ಯಾಕೆಟ್ ನಲ್ಲಿ ಉಪ್ಪಿನ ಕಾಯಿ ಮಿಸ್ ಆಗಿತ್ತು. ಮಾರನೇಯ ದಿನ ಹೋಟೆಲ್ ಬಳಿ ಹೋಗಿದ್ದ ಆರೋಗ್ಯ ಸ್ವಾಮಿ ಉಪ್ಪಿನ ಕಾಯಿ ಹಾಕದೇ ಇರುವ ಬಗ್ಗೆ ಪ್ರಶ್ನೆ ಮಾಡಿ, 25 ಉಪ್ಪಿನ ಕಾಯಿ ಹಾಕದೇ ಇರುವುದಕ್ಕೆ ತಲಾ ಒಂದು ರೂಪಾಯಿಯಂತೆ 25 ರೂಪಾಯಿ ವಾಪಸ್ ನೀಡುವಂತೆ ಕೇಳಿದ್ದಾರೆ ಆದರೆ ಇದಕ್ಕೆ ಹೋಟೆಲ್ ಮಾಲೀಕ ಒಪ್ಪಿರಲಿಲ್ಲ.
Beers: ಭಾರತದಲ್ಲಿ ಮಾರಾಟವಾಗುತ್ತಿರುವ ಈ ಬಿಯರ್ ಗಳ ಬಗ್ಗೆ ನಿಮಗೆ ಗೊತ್ತೆ?
ಹೋಟೆಲ್ ಮಾಲೀಕನ ವರ್ತನೆಯಿಂದ ಬೇಸರಗೊಂಡ ಆರೋಗ್ಯ ಸ್ವಾಮಿ ವೆಲ್ಲಪುರಂ ಜಿಲ್ಲಾ ಗ್ರಾಹಕರ ಕುಂದು ಕೊರತೆ ವೇದಿಕೆಗೆ ದೂರು ಸಲ್ಲಿಸಿದರು. ತಮದಮ ಬಳಿ ಇದ್ದ ಸಾಕ್ಷ್ಯಗಳನ್ನು ನೀಡಿದರು. ಹೋಟೆಲ್ ಮಾಲೀಕರನ್ನು ಕರೆದು ವಿಚಾರಣೆ ಮಾಡಲಾಗಿ, ಅವರೂ ಸಹ ಉಪ್ಪಿನ ಕಾಯಿ ಕೊಡುವಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡರು. ಜಿಲ್ಲಾ ಗ್ರಾಹಕ ವೇದಿಕೆಯು ಉಪ್ಪಿನ ಕಾಯಿ ನೀಡದೇ ಇರುವುದಕ್ಕೆ ಹೋಟೆಲ್ ಮಾಲೀಕನಿಗೆ 30 ಸಾವಿರ ದಂಡ, ಆರೋಗ್ಯ ಸ್ವಾಮಿಗೆ ನ್ಯಾಯಾಲಯದ ಖರ್ಚಾಗಿ 5 ಸಾವಿರ ರೂಪಾಯಿ, ಮತ್ತು ಉಪ್ಪಿನ ಕಾಯಿ ಕೊಡದೇ ಇರುವುದಕ್ಕೆ ಬದಲಾಗಿ 25 ರೂಪಾಯಿಗಳನ್ನು ನೀಡುವಂತೆ ಆದೇಸಿದೆ. ಉಪ್ಪಿನ ಕಾಯಿ ಕೊಡುವುದನ್ನು ಮರೆತಿದ್ದರಿಂದ ಹೋಟೆಲ್ ಮಾಲೀಕ ಬರೋಬ್ಬರಿ 35 ಸಾವಿರದ 25 ರೂಪಾಯಿ ಹಣ ತೆರಬೇಕಾಗಿದೆ.