ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ನೀತಿ ಆಯೋಗದ ಸಭೆ ನಡೆಯಿತು. ಸಭೆಯಲ್ಲಿ ದೇಶದ ಎಲ್ಲ ರಾಜ್ಯದ ಮುಖ್ಯ ಮಂತ್ರಿಗಳು ಭಾಗವಹಿಸಬೇಕಿತ್ತು. ಆದರೆ ಕೆಲವು ರಾಜ್ಯದ ಸಿಎಂಗಳು, ಬಜೆಟ್ನಲ್ಲಿ ತಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಪ್ರತಿಭಟಿಸಿ ಸಭೆಗೆ ಗೈರಾಗಿದ್ದವು, ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ ಸಹ ಅವರಲ್ಲಿ ಒಬ್ಬರು. ಆದರೆ ಈ ಸಭೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೋಗವ ಮೂಲಕ ಆಶ್ಚರ್ಯ ಹುಟ್ಟಿಸಿದ್ದರು. ಆದರೆ ಸಭೆಯಲ್ಲಿ ಅರ್ಧದಲ್ಲಿಯೇ ಮಮತಾ ಬ್ಯಾನರ್ಜಿ ಹೊರ ಬಂದಿದ್ದು, ಸಭೆಯಲ್ಲಿ ತಮಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆಗೆ ತುಸು ತಡವಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು, ದೇಶದ ಪ್ರಧಾನ ಮಂತ್ರಿ ಹಾಗೂ ಕೆಲವು ಸಚಿವರು ಭಾಗವಹಿಸಿದ್ದರು. ಸಭೆಯಲ್ಲಿ ಸಿಎಂಗಳಿಗೆ ಮಾತನಾಡುವ ಅವಕಾಶವಿತ್ತು. ಮಮತಾ ಬ್ಯಾನರ್ಜಿ ಹೇಳಿರುವಂತೆ ಅವರು ಮಾತನಾಡಲು ಆರಂಭಿಸಿದ ಕೆಲವೇ ನಿಮಿಷದಲ್ಲಿ ಅವರ ಮಾತನ್ನು ನಿಲ್ಲಿಸಲಾಯ್ತಂತೆ. ಅವರು ಮಾತನಾಡದಂತೆ ಸೂಚಿಸಲಾಯ್ತಂತೆ. ತನ್ನ ಧ್ವನಿಯನ್ನು ಧಮನಿಸಲು ಯತ್ನಿಸಿದ ಕಾರಣ ಮಮತಾ ಬ್ಯಾನರ್ಜಿ ಸಭೆ ತ್ಯಜಿಸಿ ಹೊರಬಂದಿದ್ದಾರೆ.
ಸಭೆಯಿಂದ ಹೊರಬಂದ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, ‘ನಾನು ಸಭೆಯನ್ನು ಬಾಯ್ಕಾಟ್ ಮಾಡಿದ್ದೇನೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ 20 ನಿಮಿಷ ಮಾತನಾಡಲು ಅವಕಾಶ ಕೊಡಲಾಗಿತ್ತು. ಅಸ್ಸಾಂ, ಗೋವಾ, ಚತ್ತೀಸ್ಘಡ ಸಿಎಂಗಳು 10 ರಿಂದ 12 ನಿಮಿಷ ಮಾತನಾಡಿದರು. ಆದರೆ ನಾನು ಮಾತನಾಡಲು ಆರಂಭಿಸಿದ 5 ನಿಮಿಷದಲ್ಲಿಯೇ ನನ್ನ ಭಾಷಣವನ್ನು ಮೊಟಕುಗೊಳಿಸಲಾಯ್ತು. ಇದು ಅನ್ಯಾಯ. ವಿರೋಧ ಪಕ್ಷದಿಂದ ನಾನೊಬ್ಬಳೇ ಸಿಎಂ ಈ ಸಭೆಯಲ್ಲಿ ಭಾಗವಹಿಸಿದ್ದು, ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕು ಎಂಬ ದೃಷ್ಟಿಕೋನದಿಂದ ನಾನು ಸಭೆಗೆ ಬಂದಿದ್ದೆ. ಆದರೆ ನನಗೆ ಸಭೆಯಲ್ಲಿ ಅವಮಾನಿಸಲಾಯ್ತು’ ಎಂದಿದ್ದಾರೆ.
MLA salary: ಯಾವ ರಾಜ್ಯದ ಶಾಸಕರಿಗೆ ಹೆಚ್ಚು ಸಂಬಳ ಸಿಗುತ್ತೆ? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಮುಂದುವರೆದು ಮಾತನಾಡಿದ ಮಮತಾ ಬ್ಯಾನರ್ಜಿ, ‘ನೀತಿ ಆಯೋಗದಿಂದ ಯಾವುದೇ ಲಾಭವಿಲ್ಲ. ಏಕೆಂದರೆ ಅದಕ್ಕೆ ಯಾವುದೇ ಹಣಕಾಶು ಶಕ್ತಿಗಳು ಇಲ್ಲ. ಈ ಹಿಂದೆ ಇದ್ದ. ಯೋಜನಾ ಆಯೋಗ (ಪ್ಲಾನಿಂಗ್ ಕಮಿಷನ್) ಅನ್ನೇ ಮರಳಿ ತರಬೇಕು ಎಂದಿರುವ ಅವರು, ‘ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಬರಬೇಕಾದ ಎಲ್ಲ ಯೋಜನೆಗಳನ್ನು ನಿಲ್ಲಿಸಿದ್ದಾರೆ. ನಮಗೆ ಬರಬೇಕಾಗಿರುವ ಆವಾಸ್ ಯೋಜನೆ, ಆಹಾರ ಸಬ್ಸಿಡಿ ನಿಲ್ಲಿಸಲಾಗಿದೆ. 1,71 ಲಕ್ಷ ಕೋಟಿ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ’ ಇದನ್ನು ಹೇಳಿದ ಕೂಡಲೇ ಅವರು ನಾನು ಮಾತನಾಡುತ್ತಿದ್ದ ಮೈಕ್ ಅನ್ನು ಆಫ್ ಮಾಡಿದರು. ನಾನು ಮಾತನಾಡದಂತೆ ತಡೆದರು’ ಎಂದಿದ್ದಾರೆ ಮಮತಾ.
ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದ ಏಕೈಕ ವಿಪಕ್ಷದ ಸಿಎಂ ಮಮತಾ ಬ್ಯಾನರ್ಜಿ ಆಗಿದ್ದರು. ಮಮತಾ ಬ್ಯಾನರ್ಜಿ ಹೊರತಾಗಿ ಇನ್ನೆಲ್ಲರೂ ಬಿಜೆಪಿ ಮತ್ತು ಎನ್ಡಿಎಯ ಸಿಎಂಗಳೇ ಆಗಿದ್ದಾರೆ. ಸಭೆಗೆ ಎನ್ಡಿಎಯ ಮಿತ್ರ ಪಕ್ಷದಲ್ಲಿರುವ ಬಿಹಾರ ಸಿಎಂ ನಿತೇಶ್ ಕುಮಾರ್ ಸಹ ಭಾಗಿಯಾಗಿರಲಿಲ್ಲ. ಇದು ತುಸು ಆಶ್ಚರ್ಯಕ್ಕೆ ಕಾರಣವಾಗಿತ್ತು.