Central Government: ಸೋಲಾರ್ ಹಾಕಿಸುವವರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಇದು ಉಚಿತ ಯೋಜನೆ

0
127
Central Government

Central Government

ಸೂರ್ಯ ಘರ್ ದೀರ್ಘಾವಧಿಯಲ್ಲಿ ಒಂದು ಉಚಿತ ವಿದ್ಯುತ್ ಯೋಜನೆಯಾಗಿದ್ದು, ಈಗಾಗಲೇ 1.3 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ, ಫೆಬ್ರವರಿ 29ರಂದು ಆರಂಭಿಸಿದ ಸೂರ್ಯ ಘರ್ ಯೋಜನೆ ಅನುಷ್ಠಾನ ಕಳೆದೊಂದು ತಿಂಗಳಿಂದ ಚುರುಕಾಗಿದೆ. ಇದು ಬಡವರಿಗೆ ಮತ್ತು ಮಾಧ್ಯಮ ವರ್ಗಕ್ಕೆ ಅತ್ಯುಪಯುಕ್ತ ಯೋಜನೆಯಾಗಿದೆ  ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಸಂಸತ್ ಅಧಿವೇಶನದಲ್ಲಿ ಹೇಳಿದರು.

ಸೂರ್ಯ ಘರ್ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಬೇರೆ ವಿಭಾಗಗಳಿಲ್ಲ. ಸೌರಶಕ್ತಿ ಘಟಕ ಸ್ಥಾಪಿಸಲು ಬಯಸುವ ಎಲ್ಲರಿಗೂ ಬೆಂಬಲ ನೀಡುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ತ್ವರಿತವಾಗಿ ಜಾರಿಗೆ ತರಲು ಡಿಸ್ಕಾಮ್‌ ಗಳಿಗೆ ನಿರ್ದೇಶಸಿದ್ದೇವೆ. ಈ ಯೋಜನೆಯಡಿ 3 KW   ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ 78,000 ರೂ. ಸಬ್ಸಿಡಿ ನೀಡುತ್ತಿದೆ. ಜತೆಗೆ ಬ್ಯಾಂಕ್ ಸಾಲ ಸೌಲಭ್ಯವೂ ಇರುತ್ತದೆ ಎಂದರು.

Narendra Modi: ಮೋದಿ ಪ್ರಮಾಣ ವಚನಕ್ಕೆ ಚಾಮರಾಜನಗರದ ಯುವತಿಗೆ ಆಹ್ವಾನ, ಯಾರೀಕೆ?

ಸಾಮಾನ್ಯವಾಗಿ 3 KW ಘಟಕ 300 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಸೂರ್ಯ ಘರ ಘಟಕಕ್ಕೆ ಮೇಲ್ಛಾವಣಿ ಸ್ಥಾಪನೆಗೆ 1.5 ಲಕ್ಷ ರೂ. ವೆಚ್ಚವಾಗಲಿದೆ. 78,000 ರೂ. ಸಬ್ಸಿಡಿ ಲಭ್ಯವಿದ್ದು, ಉಳಿದ ಬಂಡವಾಳಕ್ಕೆ ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಬಹುದು. 300 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದಲ್ಲಿ, ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್ ಗಳಿಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಸಾಮಾನ್ಯ 5 ಜನರಿರುವ ಮಧ್ಯಮ ವರ್ಗದವರ ಮನೆಗಳಿಗೆ 300 ಯೂನಿಟ್ ವಿದ್ಯುತ್ ಸಾಕಷ್ಟಾಗುತ್ತದೆ ಎಂದು ಅಭಿಪ್ರಾಯ ಮಂಡಿಸಿದ  ಸಚಿವರು, ಡಿಸ್ಕಾಮ್ ಗಳು ನವೀಕರಿಸಬಹುದಾದ ಇಂಧನವನ್ನು ಖರೀದಿಸುವ ಬಾಧ್ಯತೆ ಹೊಂದಿದ್ದು, ಇದಕ್ಕಾಗಿ ಕುಟುಂಬಗಳಿಗೆ ಮರುಪಾವತಿ ಮಾಡಲಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಅದು ಮಧ್ಯಮವರ್ಗಕ್ಕೆ ಉಚಿತವಾಗುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here