Online Food Order: ಆನ್ ಲೈನ್ ನಲ್ಲಿ‌ ಊಟ ಆರ್ಡರ್ ಮಾಡುವ‌ ಮುಂಚೆ ಈ ಸುದ್ದಿ‌ ಓದಿ

0
130
Online Food order

Online Food Order

ಕೋವಿಡ್ ಬಳಿಕ ಆನ್ ಲೈನ್ ಫ್ಲ್ಯಾಟ್ ಫಾರಂ ಗಳು ಬಲು ವೇಗವಾಗಿ ಬೆಳೆಯುತ್ತಿವೆ. ಊಟದಿಂದ ಆರಂಭಿಸಿ, ತಲೆಗೂದಲು ಕತ್ತರಿಸುವವರು ಸಹ ಆನಗ ಲೈನ್ ನಲ್ಲಿ ಲಭ್ಯವಿದ್ದಾರೆ. ಅದರಲ್ಲೂ ಆನ್ ಲೈನ್ ಫೂಡ್ ಆರ್ಡರಿಂಗ್ ಎಂಬುದು ಬಹಳ ಜನಪ್ರಿಯತೆ ಪಡೆದುಕೊಂಡು ಬಿಟ್ಟಿದೆ. ಜೊಮ್ಯಾಟೊ, ಸ್ವಿಗ್ಗಿ ಸೇರಿದಂತೆ ಇನ್ನೂ ಕೆಲವು ಸಂಸ್ಥೆಗಳು ಆನ್ ಲೈನ್ ಡೆಲಿವರಿ ನೀಡುತ್ತಿವೆ. ಆದರೆ‌ ಆನ್ ಲೈನ್ ನಲ್ಲಿ ಊಟ ಆರ್ಡರ್ ಮಾಡುವ ಮುನ್ನ ಈ ಸುದ್ದಿ ಓದಿ.

ಆನ್ ಲೈನ್ ನಲ್ಲಿ ಊಟ ಆರ್ಡರ್ ಮಾಡುವ ಮುನ್ನ, ಅದೇ ಊಟಕ್ಕೆ ಆಫ್ ಲೈನ್ ನಲ್ಲಿ ಎಷ್ಟು ಬೆಲೆ ಇದೆ ಎಂಬುದನ್ನು ತಿಳಿದುಕೊಂಡರೆ ಬಹುಷಃ ನೀವು ಆನ್ ಲೈನ್ ನಲ್ಲಿ ಆರ್ಡರ್ ಮಾಡಲಾರಿರೇನೋ. ಮುಂಬೈನ ಪತ್ರಕರ್ತರರೊಬ್ಬರು, ಹೋಟೆಲ್ ಒಂದರಲ್ಲಿ ಆರ್ಡರ್ ಮಾಡುವ ಊಟಕ್ಕೂ ಅದೇ ಊಟವನ್ನು ಜೊಮ್ಯಾಟೊ ಮೂಲಕ ಆರ್ಡರ್ ಮಾಡಿದರೆ ಎಷ್ಟು ಹೆಚ್ಚುವರಿ ಹಣ ಖರ್ಚಾಗಲಿದೆ ಎಂಬುದನ್ನು ಟ್ವೀಟ್ ಮಾಡಿದ್ದಾರೆ.

ಅಭಿಷೇಕ್ ಕೊಠಾರಿ ಎಂಬುವರು ಮುಂಬೈನ ವಿಲೆ‌ಪಾರ್ಲೆಯ ಉಡುಪಿ ಟು ಮುಂಬೈ ಹೆಸರಿನ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಅಲ್ಲಿ‌ ಹೋಗಿ ಎರಡು ತಟ್ಟೆ ಇಡ್ಲಿ, ಒಂದು ವಡೆ, ಒಂದು ದೋಸೆ ಉತ್ತಪ್ಪಮ್, ಒಂದು ಉಪ್ಮಾ (ಉಪ್ಪಿಟ್ಟು) ಒಂದು ಟೀ ಖರೀದಿ ಮಾಡಿದ್ದಾರೆ. ಇಷ್ಟಕ್ಕೂ 320 ರೂಪಾಯಿ ಬಿಲ್ ಆಗಿದೆ. ಹೋಟೆಲ್ ನಲ್ಲಿ ನೀಡಿದ ಬಿಲ್‌ನಲ್ಲಿ ಒಂದು ತಟ್ಟೆ ಇಡ್ಲಿಗೆ 60 ರೂಪಾಯಿ, ಉಪ್ಪಿಟ್ಟಿಗೆ 40 ರೂಪಾಯಿ ಬೆಲೆ‌ ನಿಗದಿ ಮಾಡಲಾಗಿದೆ‌.

ಅಭಿಷೇಕ್  ಅದೇ ತಿಂಡಿಗಳನ್ನು ಅದೇ ಹೋಟೆಲ್‌ನ ಮೂಲಕ ಜೊಮ್ಯಾಟೋನಲ್ಲಿ ಆರ್ಡರ್ ಮಾಡಿದರೆ ಎಷ್ಟು ಬೆಲೆ ಆಗಲಿದೆ ಎಂದು ಚೆಕ್ ಮಾಡಿದ್ದಾರೆ, ಜೊಮ್ಯಾಟೊ ತೋರಿಸಿದ ಬೆಲೆ ನೋಡಿ ಗಾಬರಿ ಆಗಿದ್ದಾರೆ. ಹೋಟೆಲ್ ನಲ್ಲಿ ಇಡ್ಲಿಗೆ 60 ರೂಪಾಯಿ ಇದ್ದರೆ ಜೊಮ್ಯಾಟೊನಲ್ಲಿ 120 ರೂಪಾಯಿ ಇದೆ, ಹೋಟೆಲ್‌ನಲ್ಲಿ ಉಪ್ಪಿಟ್ಟಿಗೆ 40 ರೂಪಾಯಿ ಇದ್ದರೆ ಜೊಮ್ಯಾಟೊನಲ್ಲಿ 80 ರೂಪಾಯಿ.

ಕತೆ ಇಷ್ಟಕ್ಕೆ ಮುಗಿಯಲಿಲ್ಲ. ಅಭಿಷೇಕ್ ಹೋಟೆಲ್ ನಲ್ಲಿ ಆರ್ಡರ್ ಪಡೆದ ಪಡೆಷ ಎಲ್ಲ‌ ತಿಂಡಿಗಳ ಒಟ್ಟು ಮೌಲ್ಯ 320 ರೂಪಾಯಿಗಳು ಅದೇ ತಿಂಡಿಗಳನ್ನು (ಟೀ ಬಿಟ್ಟು) ಜೊಮ್ಯಾಟೋನಲ್ಲಿ ಆರ್ಡರ್ ಮಾಡಿದರೆ , ಡೆಲಿವರಿ ಚಾರ್ಜಸ್, ಜಿಎಸ್ ಟಿ, ಫ್ಲ್ಯಾಟ್ ಫಾರ್ಮ್‌ಫೀಸ್ ಎಲ್ಲವೂ ಸೇರಿ 840 ರೂಪಾಯಿ ಕೊಡಬೇಕು. ಅಂದರೆ ಡಬಲ್ ಗಿಂತಲೂ ದುಬಾರಿ. ಹೋಟೆಲ್‌ ನಲ್ಲಿ ತಿಂದರೆ 320 ರೂಪಾಯಿ, ಅದೇ ಊಟ ಜೊಮ್ಯಾಟೊ ಮೂಲಕ ಬಂದರೆ 840 ರೂಪಾಯಿ!

Online fraud: ಭಾರತದ 1967 ಕೋಟಿ ರೂಪಾಯಿ ಹಣ ಕದ್ದ ಕೊರಿಯನ್ನರು

ಅಭಿಷೇಕ್ ಈ ವಿಷಯವನ್ನು ಟ್ವಿಟ್ಟರ್ ಮೂಲಕ‌ ಹಂಚಿಕೊಂಡಿದ್ದು ಇಷ್ಟು ದುಬಾರಿ ಬೆಲೆ ಏಕೆ ಎಂದು ಜೊಮ್ಯಾಟೊ ಅನ್ನು ಪ್ರಶ್ನೆ ಮಾಡಿದ್ದಾರೆ. ಅಭೊಷೇಕ್ ರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಜೊಮ್ಯಾಟೊ, ‘ಹೋಟೆಲ್ ನ ತಿಂಡಿಗಳ ದರ ನಿಗದಿಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ತಿಂಡಿಗಳ ದರವನ್ನು‌ ಹೋಟೆಲ್ ನವರೇ ನಿರ್ಧಾರ ಮಾಡುತ್ತಾರೆ. ನಿಮಗೆ ಆಗಿರುವ‌ ಸಮಸ್ಯೆಯನ್ನು ನಾವು ಹೋಟೆಲ್ ನವರ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here