Switzerland: ಸ್ವಿಟ್ಜರ್ಲ್ಯಾಂಡ್ ನಲ್ಲಿ ಅತಿ ಹೆಚ್ಚು ಕೋಟ್ಯಧೀಶರು, ಏಕೆ ಗೊತ್ತೆ?

0
151
Switzerland

ಇಡೀ ವಿಶ್ವದಲ್ಲೇ ಅಪರೂಪದ ದೇಶ ಸ್ವಿಟ್ಜರ್ಲ್ಯಾಂಡ್. ಈ ದೇಶದಿಂದ‌ ವಿಶ್ವವೇ ಪಾಠ ಕಲಿಯಬೇಕು. ಭಾರತವಂತೂ ಸ್ವಿಟ್ಜರ್ಲ್ಯಾಂಡ್ ನಿಂದ ಕಲಿಯುವುದು ಬಹಳಿಷ್ಟಿದೆ. ಸ್ವಿಟ್ಜರ್ಲ್ಯಾಂಡ್ ಸಣ್ಣ ದೇಶವಾದರೂ ಆರ್ಥಿಕತೆಯಲ್ಲಿ ಭಾರತವನ್ನು ಸೇರಿದಂತೆ ಹಲವಾರು ದೊಡ್ಡ ದೇಶಗಳನ್ನು ಹಿಂದಿಕ್ಕಿದೆ‌. ಈ ದೇಶದ ಪ್ರತಿ ಏಳು ಜನರಲ್ಲಿ ಒಬ್ಬರು ಕೋಟ್ಯಧೀಶರು ಏಕೆ ಗೊತ್ತೆ?

ಸ್ವಿಟ್ಜರ್ಲ್ಯಾಂಡ್ ನ ಜನ, ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳುತ್ತಾರೆ. ರಿಸ್ಕ್ ಇಲ್ಲದೆ ವ್ಯಾಪಾತ ಇಲ್ಲ, ಆದರೆ ರಿಸ್ಕ್ ತೆಗೆದುಕೊಳ್ಳುವ ಮುಂಚೆ ಸಾಕಷ್ಟು ಯೋಚಿಸಿ,‌ ತೆಗೆದುಕೊಳ್ಳುತ್ತಿರುವ ರಿಸ್ಕ್ ನಿಂದ ನಷ್ಟ ಆಗಂತೆ ಸೂಕ್ತವಾಗಿ ರಿಸ್ಕ್ ಮ್ಯಾನೇಜ್ ಮೆಂಟ್ ಮಾಡುತ್ತಾರೆ ಮಾತ್ರವಲ್ಲದೆ ರಿಸ್ಕ್ ಗೆ ಪ್ರತಿಯಾಗಿ ಹೆಜ್ಜಿಂಗ್ ಅನ್ನು ಸಹ ಸೂಕ್ತವಾಗಿ ಮಾಡಿರುತ್ತಾರೆ. ಹಾಗಾಗಿ ಇವರು ನಷ್ಟ ಅನುಭವಿಸುವುದು ಕಡಿಮೆ.

ಸ್ವಿಟ್ಜರ್ಲ್ಯಾಂಡ್ ನ ಜನ ಐಶಾರಾಮಿ ಜೀವನ ನಡೆಸುವುದಿಲ್ಲ. ದುಬಾರಿ ಕಾರುಗಳು, ದುಬಾರಿ ಬ್ರ್ಯಾಂಡ್ ನ ವಸ್ತುಗಳು, ಅನವಶ್ಯಕವಾಗಿ ದೊಡ್ಡ ಮನೆ ಕಟ್ಟುವುದು ಇಂತಹುದನ್ನು ಮಾಡುವುದಿಲ್ಲ. ತಮ್ಮ ಬಳಿ ಇರುವ ಹಣಕ್ಕಿಂತಲೂ ಕಡಿಮೆ ಮಟ್ಟದ ಜೀವನ ಶೈಲಿಯನ್ನು ರೂಢಿಸಿಕೊಳ್ಲುತ್ತಾರೆ. ಹಣವನ್ನು ಅಸಹ್ಯವಾಗಿ ಪ್ರದರ್ಶಿಸುವ ಗುಣ ಅವರಲ್ಲಿಲ್ಲ. ಹಾಗಾಗಿ ದುಡಿದ ಹಣವನ್ನು ಮತ್ತೆ ಮತ್ತೆ ಇನ್ವೆಸ್ಟ್ ಮಾಡುತ್ತಿರುತ್ತಾರೆ‌.

Rich Indian: ರದ್ದಿ ಆರಿಸುತ್ತಿದ್ದ ಈ ಭಾರತೀಯ ಇಂದು ದುಬೈನ ಭಾರಿ ಶ್ರೀಮಂತರಲ್ಲಿ ಒಬ್ಬ

ಹೂಡಿಕೆಯಲ್ಲಿ ಭಿನ್ನತೆ. ಭಾರತದಲ್ಲಿ ಒಬ್ಬ ವ್ಯಕ್ತಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರೆ ಆತ ಜೀವನ ಪೂರ್ತಿ ಅದನ್ನೇ ಮಾಡುತ್ತಾನೆ, ಆತನ ಮಗ, ಮೊಮ್ಮಗನೂ ಅದನ್ನೇ ಮಾಡುತ್ತಾನೆ. ಆದರೆ ಸ್ವಿಟ್ಜರ್ಲ್ಯಾಂಡ್ ಜನರ ಚಿಂತನೆ ಭಿನ್ನ‌. ಒಬ್ಬ ವ್ಯಕ್ತಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾನೆಂದರೆ ಅದರಿಂದ ಬರುವ ಲಾಭದ ಹಣವನ್ನು ಬೇರೆ ಉದ್ಯಮಗಳ ಮೇಲೂ ಹೂಡಿಕೆ ಮಾಡುತ್ತಾನೆ. ಒಂದು ನಿಂತರೂ ಮತ್ತೊಂದರಿಂದ ಹಣ ಬರುತ್ತಿರುತ್ತದೆ.

ಸ್ವಿಟ್ಜರ್ಲ್ಯಾಂಡ್ ಜನ ಸಾಹಸಿಗರು. ಅವರು ಇನ್ನೊಂದು ಅಥವಾ ಎರಡು ದೇಶದ ಪಾಸ್ ಪೋರ್ಟ್, ರೆಸಿಡೆನ್ಸಿ‌ ಹೊಂದಿರುತ್ತಾರೆ. ತಮ್ಮ ದೇಶದಲ್ಲಿ ಮಾತ್ರವಲ್ಲದೆ ತಮ್ಮ ಉದ್ಯಮವನ್ನು ಬೇರೆ ದೇಶದಲ್ಲೂ ವಿಸ್ತರಣೆ ಮಾಡುತ್ತಾರೆ. ಸಾಧ್ಯವಾದಷ್ಟು ನಿಯಮದ ಪ್ರಕಾರ ತೆರಿಗೆ ಉಳಿಸಲು ಯತ್ನಿಸುತ್ತಾರೆ. ಹೊಸ ವಿಷಯಗಳನ್ನು ತಿಳಿದುಕೊಂಡು ಉದ್ಯಮದಲ್ಲಿ ಬಳಸುತ್ತಾರೆ.

ಸ್ವಿಟ್ಜರ್ಲ್ಯಾಂಡ್ ಜನರಿಗೆ ತಾಳ್ಮೆ ಹೆಚ್ಚು. ಅವರು ಥಟ್ಟನೆ ಶ್ರೀಮಂತರಾಗಲು ಯತ್ನಿಸುವುದಿಲ್ಲ. ಕಷ್ಟಪಟ್ಟು ದುಡಿದರಷ್ಟೆ ಶ್ರೀಮಂತರಾಗಲು ಸಾಧ್ಯ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ದುಡಿಮೆ ಮೇಲೆ ನಂಬಿಕೆ ಇಟ್ಟು ಚೆನ್ನಾಗಿ ಕೆಲಸ ಮಾಡುತ್ತಾರೆ, ಅಡ್ಡ ದಾರಿ ಹಿಡಿಯುವುದಿಲ್ಲ. ಮತ್ತು ದೀರ್ಘ ಕಾಲದ ಪ್ರತಿಫಲದ ಮೇಲೆ ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ಸ್ವಿಟ್ಜರ್ಲ್ಯಾಂಡ್ ಜನ ಜಗತ್ತಿನ ಇತರೆ ದೇಶದ ಜನರಿಗಿಂತಲೂ ಶ್ರೀಮಂತರು.

LEAVE A REPLY

Please enter your comment!
Please enter your name here