Earth: ದಿನಕ್ಕೆ 24 ಗಂಟೆ ಅಲ್ಲ 25 ಗಂಟೆ ಆಗಲಿದೆ

0
262
Earth

Earth

ಒಂದು ದಿನ‌ ಪೂರ್ಣ ಆಗಬೇಕೆಂದರೆ 24 ಗಂಟೆ ಕಳೆಯಬೇಕು. ಇದರ ಅನ್ವಯವೇ ಗಡಿಯಾರಗಳನ್ನು ಡಿಸೈನ್ ಮಾಡಲಾಗಿದೆ. ಆದರೆ ದಿನಕ್ಕೆ 24 ಗಂಟೆ ಎಂಬ ಪದ್ಧತಿ ಬದಲಾಗಿ ದಿನಕ್ಕೆ 25 ಗಂಟೆ ಆಗಲಿದೆ. ಮಾತ್ರವಲ್ಲ, 12 ಗಂಟೆ ಮಾಡೆಲ್ ನ ನಮ್ಮ ಗಡಿಯಾರಗಳು‌ ಬದಲಾಗಲಿವೆ. ಮಾತ್ರವಲ್ಲ ಚಂದ್ರನೂ ಸಹ ಭೂಮಿಯಿಂದ ದೂರಾಗಿ ಮರೆಯೇ ಆಗಿಬಿಡಲಿದ್ದಾನೆ.

ಭೂಮಿ‌ ಉದಯಿಸಿದಾಗಿನಿಂದಲೂ ಚಂದ್ರ, ಭೂಮಿಯ ಜೊತೆಗೆ ಇದ್ದಾನೆ. ಆದರೆ ಅಂತರಿಕ್ಷ ವಿಜ್ಞಾನಿಗಳು ಗಮನಿಸಿರುವಂತೆ‌ ಚಂದ್ರ ಪ್ರತಿ ದಿನವೂ ಭೂಮಿಯಿಂದ ದೂರ‌ಸರಿಯುತ್ತಿದ್ದಾನೆ. ಚಂದ್ರ ಪ್ರತಿ ವರ್ಷ 3.8 ಸೆಂಟಿಮೀಟರ್ ಗಳಷ್ಟು ದೂರ ಸರಿಯುತ್ತಿದ್ದಾನೆ ಎಂಬುದನ್ನು‌ ವಿಜ್ಞಾನಿಗಳು ಗಮನಿಸಿದ್ದಾರೆ. ಚಂದ್ರ, ಭೂಮಿಯಿಂದ ದೂರ ಸರಿಯುತ್ತಿರುವುದರ ಪರಿಣಾಮ ನೇರವಾಗಿ ಭೂಮಿಯ ಮೇಲೆ ಆಗಲಿದೆ.

Earth
Earth

ಚಂದ್ರ ಹಾಗೂ ಭೂಮಿಯ ನಡುವೆ ಗುರುತ್ವಾಕರ್ಷಣ ಸಂಬಂಧ ಇರುವ‌ ಕಾರಣ ಚಂದ್ರ, ಭೂಮಿಯಿಂದ ದೂರ ಹೋದಷ್ಟೂ ಭೂಮಿಯ ಪರಿಭ್ರಮಣೆಯಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ಹಗಲು-ರಾತ್ರಿಗಳಲ್ಲಿ ವ್ಯತ್ಯಾಸವಾಗುತ್ತದೆ. ಈಗಿರುವಂತೆ ದಿನಕ್ಕೆ 24 ಗಂಟೆ ಇರುವುದಿಲ್ಲ‌ ಬದಲಿಗೆ ಸಮಯವೂ ಹೆಚ್ಚಾಗುತ್ತದೆ. ಚಂದ್ರ ಭೂಮಿಯಿಂದ ಹೆಚ್ಚು-ಹೆಚ್ಚು ದೂರ ಸರಿದಂತೆ ಭೂಮಿಯ ಮೇಲೆ ಹಗಲು-ರಾತ್ರಿಯ ಸಮಯ ಧೀರ್ಘವಾಗುತ್ತಾ ಸಾಗುತ್ತದೆ.

Science: ಮತ್ತೊಂದು ಭೂಮಿ ಪತ್ತೆ, ಅಲ್ಲಿ ರಾತ್ರಿ-ಹಗಲಿನ ಪರಿಕಲ್ಪನೆಯೇ ಭಿನ್ನ

ವಿಜ್ಞಾನಿಗಳ ಪ್ರಕಾರ 1.6 ಬಿಲಿಯನ್ ವರ್ಷದ ಹಿಂದೆ ಭೂಮಿಯ ಮೇಲೆ ಒಂದು ದಿನದ ಅವಧಿ ಕೇವಲ 18 ಗಂಟೆ ಆಗಿತ್ತಂತೆ. ಚಂದ್ರ-ಭೂಮಿಯಿಂದ ದೂರ ಸರಿದಷ್ಟು ಭೂಮಿಯ ಪರಿಭ್ರಮಣೆಯ ಮೇಲಾದ ಪರಿಣಾಮದಿಂದಾಗಿ ಈಗ 24 ಗಂಟೆಗಳಿಗೆ ಬಂದು ತಲುಪಿದೆ. ಮುಂದೆ ದಿನಕ್ಕೆ 25 ಗಂಟೆ ಸಹ ಆಗಲಿದೆ. ಆದರೆ ಅದಕ್ಕೆ ಇನ್ನೂ ಸಾಕಷ್ಟು ಸಮಯ ಇದೆ. 200 ಮಿಲಿಯನ್ ವರ್ಷಗಳ ಬಳಿಕ ಸುಮಾರು 7500 ಕಿ.ಮೀ ದೂರ ಆಗಲಿದೆ. ಆಗ ಭೂಮಿಯ ಮೇಲೆ ಒಂದು ದಿನಕ್ಕೆ 24 ರ ಬದಲು 25 ಗಂಟೆ ಆಗಲಿದೆ.

LEAVE A REPLY

Please enter your comment!
Please enter your name here