Former Cricketer: ಸಿಎಸ್ ಕೆ ಪರ ಆಡಿದ್ದ ಸ್ಟಾರ್ ಕ್ರಿಕೆಟಿಗ ಇಒಗ ಬಸ್ ಡ್ರೈವರ್

0
367
Former Cricketer

Former Cricketer

ಸಿನಿಮಾ ಮತ್ತು ಕ್ರಿಕೆಟ್ ಬಹಳ ಬೇಗ ಜನಪ್ರಿಯತೆ ಮತ್ತು ಹಣ ತಂದು ಕೊಡುತ್ತದೆ. ಆದರೆ ಒಮ್ಮೆ ಅದೃಷ್ಟ ಕೈಕೊಟ್ಟಿತೆಂದರೆ ಈ ಜನಪ್ರಿಯತೆ ಎಂಬ ನೀರಿನ ಮೇಲೆ ಗುಳ್ಳೆ ಪಟ್ಟನೆ ಒಡೆದು ಜೀವನದ ನೈಜತೆಯನ್ನು ಮುಖಕ್ಕೆ ಹಿಡಿಯುತ್ತದೆ. ವಿಶ್ವಕಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ, ಸಿಎಸ್ ಕೆ ಪರವಾಗಿಯೂ ಆಡಿದ್ದ ಕ್ರಿಕೆಟ್ ಆಟಗಾರ ಈಗ ಜೀವನ ನಿರ್ವಹಣೆಗಾಗಿ ಬಸ್ ಓಡಿಸುತ್ತಿದ್ದಾರೆ. ಈ ಕ್ರಿಕೆಟಿಗನ ಹೆಸರು ಸೂರಜ್ ರಂಧೀವ್.

ಸೂರಜ್ ರಂಧಿವ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ. ತನ್ನ ದೇಶದ ಪರವಾಗಿ ಸುಮಾರು ಏಳು ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ ಮಾತ್ರವಲ್ಲದೆ ಐಪಿಎಲ್ ನಲ್ಲಿಯೂ ಧೋನಿ ಜೊತೆಗೆ‌ ಆಟ ಆಡಿದ್ದಾರೆ ಆದರೆ ಈಗ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದೂ ದೂರದ ಆಸ್ಟ್ರೇಲಿಯಾನಲ್ಲಿ.

2009 ರಲ್ಲಿ‌ ಸೂರಜ್ ಶ್ರೀಲಂಕಾ‌ ಕ್ರಿಕೆಟ್ ತಂಡ ಸೇರ್ಪಡೆಗೊಂಡರು. 2011 ರಲ್ಲಿ ಭಾರತ, ಶ್ರೀಲಂಕಾ ತಂಡದ ವಿರುದ್ಧ ವಿಶ್ವಕಪ್ ಗೆದ್ದಾಗ ಶ್ರೀಲಂಕಾ ತಂಡದಲ್ಲಿ ಸೂರಜ್ ಆಡಿದ್ದರು. ಬಳಿಕ ಸೂರಜ್ ರ ಪ್ರತಿಭೆ ಗುರುತಿಸಿ ಅವರಿಗೆ ಸಿಎಸ್ ಕೆ ತಂಡಕ್ಕೂ ಆಯ್ಕೆ ಮಾಡಲಾಗಿತ್ತು. ಧೋನಿ ಜೊತೆಗೂ ಸೂರಜ್ ಕ್ರಿಕೆಟ್ ಆಡಿದ್ದರು. ಆದರೆ ವಯಸ್ಸು ಆಗುತ್ತಲೂ ಹಾಗೂ ಹೊಸ ಆಟಗಾರರ ಎಂಟ್ರಿಯಿಂದಾಗಿ ಸೂರಜ್ ಗೆ ಅವಕಾಶಗಳು ಇಲ್ಲದಾಯ್ತು. ಹಾಗಾಗಿ ಇಒಗ ಜೀವನ ನಿರ್ವಣೆಗೆ ಬಾ್ ಓಡಿಸುತ್ತಾರೆ.

ಅವಕಾಶಗಳು ಕಡಿಮೆ ಆಗುತ್ತಿದ್ದಂತೆ ಆಸ್ಟ್ರೇಲಿಯಾಕ್ಕೆ ವಾಸ್ತವ್ಯ ಬದಲಿಸಿದ ಸೂರಜ್, ಮೆಲ್ಬೋರ್ನ್ ನ ಟ್ರ್ಯಾನ್ಸ್ ಡೆವ್ ಹೆಸರಿನ ಕಂಪೆನಿಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ ಇನ್ನೂ ಇಬ್ಬರು ಅಂತರಾಷ್ಟ್ರೀಯ ಕ್ರಿಕೆಟಿಗರು ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚಿಂತಕ ಜಯಸಿಂಘೆ ಹಾಗೂ ಜಿಂಬಾಬ್ವೆಯ ವಡ್ಡಿಂಗ್ ಟನ್ ಮೇವ್ಯಾಡ್.

Manu Bhaker: ಭಾರತಕ್ಕೆ‌‌ ಪದಕ ಗೆಲ್ಲಿಸಿಕೊಟ್ಟ ಮನು ಹಿಂದಿರುವ ಕೋಚ್ ಗೆ ತುರ್ತಾಗಿ ಬೇಕಿದೆ ಉದ್ಯೋಗ

ಶ್ರೀಲಂಕಾದಲ್ಲಿ ಉದ್ಯೋಗಗಳೂ ಕಡಿಮೆ,  ಸಂಬಳವೂ ಕಡಿಮೆ ಆದ್ದರಿಂದ ಸೂರಜ್ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿಯೇ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here