Personal Finance: ಹಣ ಉಳಿಸಬೇಡಿ, ಹೂಡಿಕೆ ಮಾಡಿ, ಮುಂದಿದೆ ಕರಾಳ ದಿನಗಳು

0
163
Personal Finance

Personal Finance

ಭಾರತ ಪ್ರಗತಿ ಹೊಂದುತ್ತಿದೆ, ವಿಶ್ವದಲ್ಲೇ ಶಕ್ತಿಶಾಲಿ ಆಗುತ್ತಿದೆ ಎಂಬ ಮಾತುಗಳು ಇನ್ ಸ್ಟಾಗ್ರಾಂ ರೀಲ್ ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಆದರೆ ಇದು ಪೂರ್ಣ ಸತ್ಯವಲ್ಲ. ಭಾರತದ ಆರ್ಥಿಕ ಸ್ಥಿತಿಯನ್ನು K ಟ್ರೆಂಡ್ ಎನ್ನುತ್ತಾರೆ ನುರಿತ ಆರ್ಥಿಕ ತಜ್ಞರು. ಶ್ರೀಮಂತರು ಹೆಚ್ಚು ಶ್ರೀಮಂತರಾದರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎನ್ನುತ್ತಿದೆ ಕೆಲವು ಅಂಕಿ-ಸಂಖ್ಯೆಗಳು. ಹಾಗಾಗಿ ಮುಂಬರಲಿರುವ ಕರಾಳ ದಿನಗಳನ್ನು ಎದುರಿಸಲು ಹಣ ಉಳಿಸಿದರೆ ಮಾತ್ರ ಸಾಕಾಗದು ಹೂಡಿಕೆ ಮಾಡಲೇ ಬೇಕಾದ ಅನಿವಾರ್ಯತೆ ಇದೆ

ಭಾರತದ ಮಧ್ಯಮ ವರ್ಗದ ಸಂಬಳದ ವರ್ಷದಿಂದ ವರ್ಷಕ್ಕೆ ಹೇಗೆ ಏರಿಕೆ ಆಗಿದೆ ಎಂಬುದರ ಮೇಲೆ ಕಣ್ಣು ಹಾಯಿಸಿದರೆ ಸಾಕು ಸತ್ಯ ಅರಿವಾಗುತ್ತದೆ. 1990 ರಲ್ಲಿ ಸರಾಸರಿ ಸಂಬಳ ಐದು ಸಾವಿರ ರೂಪಾಯಿ ಇತ್ತು. ಆದರೆ ಈ ಹಣದಿಂದ ಬಾಡಿಗೆ, ದಿನಸಿ ಇತರೆ ಖರ್ಚುಗಳನ್ನು ತೆಗೆದರೂ ಹಣ ಉಳಿತಾಯ ಮಾಡಬಹುದಾಗಿತ್ತು. ಏಕೆಂದರೆ ಆಗ ಹಣದುಬ್ಬರ ಕಡಿಮೆ ಇತ್ತು. 2000 ದಲ್ಲಿ ಸರಾಸರಿ ಸಂಬಳ 15 ಸಾವಿರ ಆಯ್ತು. ಆಗಲೂ ಸಹ ಖರ್ಚುಗಳನ್ನು ಕಳೆದು ಸ್ವಲ್ಪ ಹಣ ಉಳಿಸಬಹುದಾಗಿತ್ತು. 2010 ರಲ್ಲಿ ಭಾರತೀಯರ ಸರಾಸರಿ ಸಂಬಳ 25000 ಆಯ್ತು. ಆ ವೇಳೆಗಾಗಲೆ ಹಣದುಬ್ಬರ ಏರಿಕೆಯತ್ತ ಮುಖ ಮಾಡಿತ್ತು. ಉಳಿತಾಯದ ಪ್ರಮಾಣ ಕಡಿಮೆ ಆಗಿತ್ತು.

2020 ರ ವೇಳೆಗೆ ಸರಾಸರಿ ಸಂಬಳ 35 ಸಾವಿರ ಆಗಿದೆ. ಆದರೆ ಬೆಲೆಗಳು ಅದೆಷ್ಟು ಮೇಲೆ ಏರಿವೆಂದರೆ ಬೆಂಗಳೂರು ಅಥವಾ ಇನ್ಯಾವುದೇ ಮೆಟ್ರೋ ಸಿಟಿಯಲ್ಲಿ 35 ಸಾವಿರ ಸಂಬಳದಲ್ಲಿ ಸಾಧಾರಣ ಸೌಲಭ್ಯಗಳೊಂದಿಗೆ ಬದುಕುವುದು ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಬೆಲೆಗಳು ಏರಿದ ದರದಲ್ಲಿ ಸಂಬಳಗಳು ಏರಿಲ್ಲ. ಈಗ ರಿಸೆಷನ್ ಸಹ ಬರುತ್ತಿದ್ದು ಇದರ ಹೊಡೆತ ನೇರವಾಗಿ ಭಾರತದ ಮಧ್ಯಮ ವರ್ಗದ ಮೇಲೆ ಆಗಲಿದೆ.

Switzerland: ಸ್ವಿಟ್ಜರ್ಲ್ಯಾಂಡ್ ನಲ್ಲಿ ಅತಿ ಹೆಚ್ಚು ಕೋಟ್ಯಧೀಶರು, ಏಕೆ ಗೊತ್ತೆ?

ಆರ್ ಬಿಐ ವರದಿಯ ಪ್ರಕಾರ ಭಾರತೀಯರ ಉಳಿತಾಯದ ಪ್ರಮಾಣ ಕಳೆದ ಕೆಲವು‌ ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕುಸಿದಿದೆ, ಅದೂ ತೀವ್ರವಾಗಿ. ಇದೆ ಜೊತೆಗೆ ಜನರ ಸಾಲದ ಪ್ರಮಾಣ ಏರಿಕೆ ಆಗಿದೆ. ಇಂಥಹಾ ಸ್ಥಿತಿ ನಿರ್ಮಾಣವಾದಾಗಲೆಲ್ಲ ಆರ್ಥಿಕತೆ ಹೊಡೆತ ತಿನ್ನುತ್ತದೆ. ಮಧ್ಯಮ ವರ್ಗದ ಜನ ಕಷ್ಟ ಅನುಭವಿಸುತ್ತಾರೆ. ಹಾಗಾಗಿ ಉಳಿಯುತ್ತಿರುವ ಕಡಿಮೆ ಹಣವನ್ನು ಸುಮ್ಮನೆ ಉಳಿತಾಯ ಖಾತೆಯಲ್ಲಿ ಇಡಬೇಡಿ, ಬದಲಿಗೆ ಚಿನ್ನ, ರಿಯಲ್‌ಎಸ್ಟೇಟ್, ಮ್ಯೂಚುವಲ್‌ ಫಂಡ್, ಷೇರುಗಳು ಅಥವಾ ಇನ್ಯಾವುದೇ ಒಳ್ಳೆಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ, ಹಣದುಬ್ಬರ ಏರಿದಾಗ ಅದಕ್ಕೆ ತಕ್ಕಂತೆ ನಿಮ್ಮ ಹಣವೂ ಏರಿಕೆ ಆಗುವಂತೆ ಮಾಡಿಕೊಳ್ಳಿ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು.

LEAVE A REPLY

Please enter your comment!
Please enter your name here