Bengaluru Police: ಬೆಂಗಳೂರು ಪೊಲೀಸರನ್ನೇ ಬೆದರಿಸಿ ಹಣ ವಸೂಲಿ ಮಾಡಿದ್ದ ಐನಾತಿಯ ಬಂಧನ

0
111
Bengaluru Police

Bengaluru Police

ಬೆಂಗಳೂರಿನ ಐನಾತಿ ಆಸಾಮಿಯೊಬ್ಬ ಪೊಲೀಸರ ಜೊತೆಗಿದ್ದು, ಪೊಲೀಸರನ್ನೇ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ. ಇದೀಗ ಪೊಲೀಸರು ಆತನನ್ನು ಚಾಣಾಕ್ಷತನದಿಂದ ಬಂಧಿಸಿದ್ದು, ಆತನ ಮೇಲಿನ ಹಳೆ ಕೇಸುಗಳನ್ನು ಜಾಲಾಡುತ್ತಿದ್ದಾರೆ.

ಭಾರತಿ ನಗರ ನಿವಾಸಿ ಸೈಯದ್ ಸರ್ಫರಾಜ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಹಲವು ವರ್ಷಗಳಿಂದಲೂ ಶಿವಾಜಿನಗರ, ಡಿಜೆ ಹಳ್ಳಿ, ಆರ್ ಟಿ ನಗರ ಪೊಲೀಸರ ಮಾಹಿತಿದಾರನಾಗಿ ಕೆಲಸ ಮಾಡಿದ್ದನಂತೆ.  ಪೊಲೀಸರ ಮಾಹಿತಿದಾರನಾಗಿ ಕೆಲಸ ಮಾಡುವ ವೇಳೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸಂಪರ್ಕ ಬೆಳೆಸಿಕೊಂಡಿದ್ದ ಸೈಯ್ಯದ್ ಹಲವರ ಒಳಗುಟ್ಟುಗಳನ್ನು ಸಹ ತಿಳಿದುಕೊಂಡಿದ್ದ.

ಇತ್ತೀಚೆಗೆ ಶಿವಾಜಿನಗರ ಪೊಲೀಸರು ಇರ್ಷಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತ ಹೋಟೆಲ್ ಒಂದರಲ್ಲಿ ಗಲಾಟೆ ಮಾಡುತ್ತಿದ್ದ ವೇಳೆಯಲ್ಲಿಯೇ ಆತನನ್ನು‌ ಬಂಧಿಸಲಾಗಿತ್ತು. ಆದರೆ ಹೋಟೆಲ್ ನ ಮಾಲೀಕ ಅಧಿಕೃತವಾಗಿ ದೂರು ನೀಡಲೆಂದು ಪೊಲೀಸರು ಎಫ್ ಐಆರ್ ದಾಖಲಿಸದೆ ಕಾಯುತ್ತಿದ್ದರು.

ವಿಷಯ ತಿಳಿದ ಪೊಲೀಸ್ ಮಾಹಿತಿಧಾರ ಸೈಯ್ಯದ್ ಸರ್ಫರಾಜ್ ಅಹ್ಮದ್, ಕರ್ನಾಟಕ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ, ಪೊಲೀಸರು ಇರ್ಷಾದ್ ಎಂಬಾತ‌ನನ್ನು ಜುಲೈ 22 ರಂದು ಅಕಾರಣವಾಗಿ ವಶಕ್ಕೆ ಪಡೆಸು ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾನೆ. ಆ ಬಳಿಕ ಯಾರ ಮೇಲೆ ದೂರು ನೀಡಿದ್ದನೊ ಅವರಿಗೆ ಕರೆ ಮಾಡಿ, ದೂರು ವಾಪಸ್ ಪಡೆಯಲು ಇಂತಿಷ್ಟು ಹಣ ಪಡೆಯಬೇಕು ಎಂದು ಬೇಡಿಕೆ ಇರಿಸಿದ್ದಾನೆ.

ಚಾಣಾಕ್ಷ ಪೊಲೀಸರು, ಬಂಧಿತ ವ್ಯಕ್ತಿ ಇರ್ಷಾದ್ ರೆಸ್ಟೊರೆಂಟ್ ನಲ್ಲಿ ಗಲಾಟೆ ಮಾಡುವಾಗ ಸೆರೆಯಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಬಳಿಕ ತಮಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಾಹಿತಿಧಾರ ಸೈಯ್ಯದ್ ಗೆ ಹಣ ನೀಡಲು ಒಪ್ಪಿರುವುದಾಗಿ ಹೇಳಿದ್ದಾರೆ. ಆಗಲೆಂದು ನಿಗದಿತ ಸಮಯ, ಸ್ಥಳ ನಿಗದಿ ಪಡಿಸಿದ ಸೈಯ್ಯದ್ ತನ್ನ ಪರವಾದ ವ್ಯಕ್ತಿಯೊಬ್ಬನನ್ನು ಹಣ ಪಡೆದುಕೊಳ್ಳಲು ಕಳಿಸಿದ್ದಾನೆ. ಆತ ಪೊಲೀಸರಿಂದ ಹಣ ಪಡೆಯುತ್ತಿರುವ ಸಮಯದಲ್ಲಿ ಅದನ್ನು ವಿಡಿಯೋ ಮಾಡಿ ಆತನನ್ನು ಬಂಧಿಸಿದ್ದಾರೆ. ಬಳಿಕ ಹಣ ಪಡೆಯಲು ಬಂದಿದ್ದ ವ್ಯಕ್ತಿಯ ಹೇಳಿಕೆ ದಾಖಲು ಮಾಡಿಕೊಂಡು ಸೂತ್ರಧಾರ ಸೈಯ್ಯದ್ ಅನ್ನು ಸಹ ಬಂಧಿಸಿದ್ದಾರೆ.

Women Safety: ಬೆಂಗಳೂರು ಎಲ್ಲಿ ಹೋದರು ಆ 485 ಯುವತಿಯರು

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸರು, ಸೈಯ್ಯದ್ ಹಲವು ವರ್ಷಗಳಿಂದ ಪೊಲೀಸರ ಮಾಹಿತಿಧಾರನಾಗಿದ್ದು, ಸುಮಾರು 20 ಕ್ಕೂ ಪೊಲೀಸರನ್ನು ಬೆದರಿಕೆ, ಬ್ಲಾಕ್‌ಮೇಲ್ ಮಾಡಿ ಲಕ್ಷಾಂತರ ಹಣ ವಸೂಲಿ ಮಾಡಿರುವ ಮಾಹಿತಿ ಇದೆ. ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here