Beer: 600 ಕೋಟಿ ವೆಚ್ಚದಲ್ಲಿ‌ ನಿರ್ಮಾಣ ಆಗಲಿದೆ ಭಾರತದ ಅತಿ ದೊಡ್ಡ ಬಿಯರ್ ಫ್ಯಾಕ್ಟರಿ

0
226
Beer

Beer

ಬಿಯರ್ ಅನ್ನು ಭಾರತದಲ್ಲಿ ಮದ್ಯವೆಂದು ಪರಿಗಣಿಸಲಾಗಿದೆ ಆದರೆ ಕಲೆವು ದೇಶಗಳಲ್ಲಿ, ಕೊಕಾಕೊಲಾ, ಪೆಪ್ಸಿಗಳಂತೆ ಬಿಯರ್ ಸಹ ಬಿವರೇಜ್ ಅಥವಾ ಸಾಫ್ಟ್ ಡ್ರಿಂಕ್ಸ್ ಅಷ್ಟೆ. ಭಾರತದಲ್ಲಿ ಬಿಯರ್ ಮಾರುಕಟ್ಟೆ ಬಹಳ ದೊಡ್ಡದು. ವರ್ಷಕ್ಕೆ ಅತಿ ಹೆಚ್ಚು ಬಿಯರ್ ಸೇವಿಸುವ 50 ದೇಶಗಳಲ್ಲಿ ಭಾರತವೂ ಒಂದು. ವಿಶ್ವದ ಹಲವು ಅತ್ಯುತ್ತಮ ಬಿಯರ್ ಕಂಪೆನಿಗಳು ಭಾರತದ ಮಾರುಕಟ್ಟೆಯ ಮೇಲೆ‌ ಹೂಡಿಕೆ ಮಾಡಿದ್ದು, ಭಾರತದ ಬೆಳೆಯುತ್ತಿರುವ ಮಾರುಕಟ್ಟೆಯ ಲಾಭ ಪಡೆವ ಉತ್ಸಾಹದಲ್ಲಿದೆ.

ಭಾರತದ ಕೆಲವು ಬಿಯರ್ ಸಂಸ್ಥೆಗಳು ಇಲ್ಲಿನ ಜನರ ಅಭಿರುಚಿಗೆ ತಕ್ಕಂತೆ ಬಿಯರ್ ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ಭಾರತದ ಬಿಯರ್ ಗಳದ್ದೆ ಪಾರುಪತ್ಯ ಇದೆಯಾದರೂ, ಗುಣಮಟ್ಟದಲ್ಲಿ ವಿದೇಶಿ ಬಿಯರ್ ಗಳೇ ಈಗಲೂ ಬಿಯರ್ ಪ್ರಿಯರಿಗೆ ಅಚ್ಚು-ಮೆಚ್ಚು‌. ಭಾರತೀಯ ಬಿಯರ್ ಸಂಸ್ಥೆಗಳು ಅತ್ಯುತ್ತಮ ಬಿಯರ್ ನಿರ್ಮಾಣ ಮಾಡಲು ಸಾಧ್ಯ ಆಗದೇ ಇರಲು ಸಕಲ ಸಂಪನ್ಮೂಲಗಳು ಇರುವ ಕಾರ್ಖಾನೆಯ ಕೊರತೆ ಇದೆ ಎನ್ನಲಾಗುತ್ತದೆ. ಆದರೆ ಈಗ ಭಾರತದ ಬಿಯರ್ ಸಂಸ್ಥೆಯೊಂದು ಭಾರತದ ಈವೆರೆಗಿನ ಅತಿ ದೊಡ್ಡ ಕಾರ್ಖಾನೆ ಅಥವಾ ನಿರ್ಮಾಣ ಘಟಕ ಸ್ಥಾಪಿಸಲು ಮುಂದಾಗಿದೆ.

ಬಿ9 ಬಿವರೇಜಸ್ ಲಿಮಿಟೆಡ್ ಸಂಸ್ಥೆಯು ಉತ್ತರ ಪ್ರದೇಶದಲ್ಲಿ ಭಾರತದ ಅತಿ‌ದೊಡ್ಡ ಬಿಯರ್ ಫ್ಯಾಕ್ಟರಿ ನಿರ್ಮಿಸಲು ಮುಂದಾಗಿದೆ. ಬಿ9 ಬಿವರೇಜಸ್ ಲಿಮಿಟೆಡ್ ಭಾರತದ ಬಿಯರ್ ನಿರ್ಮಾಣ ಸಂಸ್ಥೆಯಾಗಿದ್ದು ಭಾರತದಲ್ಲಿ ‘ಬೀರ’ ಹೆಸರಿನ ಬಿಯರ್ ಉತ್ಪಾದಿಸಿ ಮಾರಾಟ ಮಾಡುತ್ತದೆ. ಈ ಸಂಸ್ಥೆ ಇದೀಗ‌ ಭಾರತದಲ್ಲಿ ಮಾರುಕಟ್ಟೆ ವಿಸ್ತರುವ ಆಲೋಚನೆಯಲ್ಲಿದ್ದು, ಇದೇ ಕಾರಣಕ್ಕೆ ಸುಮಾರು 600 ಕೋಟಿ ಹೂಡಿಕೆ ಮಾಡಿ ಭಾರತದಲ್ಲಿಯೇ ಅತಿ ದೊಡ್ಡ ಬಿಯರ್ ಉತ್ಪಾದನಾ ಘಟಕ ಸ್ತಾಪನೆಗೆ ಮುಂದಾಗಿದೆ.

ಬಿ9 ಬಿವರೇಜಸ್ ಅಥವಾ ‘ಬೀರ’ದ ಸಂಸ್ಥಾಪಕ ಅಂಕುರ್ ಜೈನ್, ವಿಶ್ವದ ಅತಿ ದೊಡ್ಡ ಹೂಡಿಕೆದಾರರಲ್ಲಿ ಒಂದಾದ ಮಾರ್ಗನ್ ಆಂಡ್ ಸ್ಡಾನ್ಲಿ ಸಂಸ್ಥೆಯಿಂದ ಭಾರಿ‌ ದೊಡ್ಡ ಮೊತ್ತದ ಹಣವನ್ನು ಹೂಡಿಕೆಯಾಗಿ ತೆಗೆದುಕೊಂಡು ಬಂದಿದೆ. 600 ಕೋಟಿಯ ಕಾರ್ಖಾನೆ ನಿರ್ಮಾಣದ ಜೊತೆಗೆ ಪ್ರಚಾರ,‌ ವಿತರಣೆ ಇನ್ನಿತರೆಗಳಿಗೆ ಈ ಹಣವನ್ನು ಖರ್ಚು ಮಾಡುವ ಯೋಜನೆ ಹಾಕಿಕೊಂಡಿದೆ. ಆ ಮೂಲಕ ಭಾರತದ ಟಾಪ್‌ 1 ಮಾರಾಟವಾಗುವ‌ ಕಿಂಗ್ ಫಿಷರ್ ಸಂಸ್ಥೆಗೆ ಠಕ್ಕರ್ ನೀಡುವ ಯೋಜನೆ ಹಾಕಿಕೊಂಡಿದೆ. ಮಾರ್ಗನ್ ಆಂಡ್ ಸ್ಟಾನ್ಲಿ ಸಂಸ್ಥೆ ಸಹ ಈ ವಿಷಯದಲ್ಲಿ ಬೀರಗೆ ನೆರವು ನೀಡಲಿದೆ.

Personal Finance: ಹಣ ಉಳಿಸಬೇಡಿ, ಹೂಡಿಕೆ ಮಾಡಿ, ಮುಂದಿದೆ ಕರಾಳ ದಿನಗಳು

2026 ರ ವೇಳೆಗೆ ಐಪಿಒ ಸಹ ಬಿಡುಗಡೆ ಮಾಡಲಿದೆ ಬಿ9 ಬಿವರೇಜಸ್‌ ಲಿಮಿಟೆಡ್ ಮಾರ್ಗಮ್ ಆಂಡ್ ಸ್ಟಾನ್ಲಿಯಿಂದ ತಂದಿರುವ ಹೂಡಿಕೆಯ ಜೊತೆಗೆ ಜನರಿಂದಲೂ ಹಣ ಪಡೆದು ಅದನ್ನು ಸಹ ಕಾರ್ಖಾನೆ ಮೇಲೆ, ಕಂಪೆನಿಯ ಕಾರ್ಯ‌ ಚಟುವಟಿಕೆ ಮೇಲೆ ತೊಡಗಿಸಲಿದೆ.

LEAVE A REPLY

Please enter your comment!
Please enter your name here