Weekly Horoscope: ಆಗಸ್ಟ್ ತಿಂಗಳ ಎರಡನೇ ವಾರ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿ ತಿಳಿಯಿರಿ

0
135
Weekly Horoscope

Weekly Horoscope

ಆಗಸ್ಟ್‌ ತಿಂಗಳ ಎರಡನೇ ವಾರ ಆಗಸ್ಟ್ 12 ರಿಂದ ಆಗಸ್ಟ್ 18ರ ವರೆಗೆ ಇರಲಿದೆ. ಈ ವಾರದಲ್ಲಿ ಗ್ರಹಗಳ ಚಲನೆ ನಡೆಯಲಿದ್ದು, ಕೆಲವು ರಾಶಿಗಳಿಗೆ ಶುಭ-ಕೆಲವಕ್ಕೆ ಅಶುಭ ಸಂಭವಿಸಲಿದೆ. ಕೆಲವು ರಾಶಿಗಳ ದಶೆಗಳು ಪ್ರಾರಂಭವಾಗಲಿದೆ. ಆಗಸ್ಟ್ 12 ರಿಂದ ಆಗಸ್ಟ್ 18ರ ವರೆಗೆ ನಿಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ:

ಆಗಸ್ಟ್ ತಿಂಗಳ ಎರಡನೇ ವಾರ ಮೇಷ ರಾಶಿಗೆ ಮಿಶ್ರಫಲವಿದೆ. ವಿದ್ಯಾರ್ಥಿಗಳಿಗೆ ಇದು ಶುಭ ಕಾಲ. ಉತ್ತಮ ವಾಗ್ಮಿಗಳೆಂಬ ಹೆಸರು ಗಳಿಸುವಿರಿ, ಮಾತಿನಿಂದ ಗೌರವ, ಧನ ಪ್ರಾಪ್ತಿಯೂ ಆಗಲಿದೆ. ಬೇರೆ ಮೂಲಗಳಿಂದ ಧನಾಗಮ ಆಗಲಿದೆ. ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ. ಆದರೆ ಪತ್ನಿಯೊಟ್ಟಿಗೆ ವಿರಸ ಮೂಡಲಿದೆ. ಅನವಶ್ಯಕವಾಗಿ ಮೂದಲಿಕೆ ಬೇಡ, ನೀವೂ ಅನುಭವಿಸಬೇಕಾದೀತು.

ವೃಷಭ ರಾಶಿ :

ವೃಷಭ ರಾಶಿಗೆ ಸಹ ಈ ವಾರ ಮಿಶ್ರಫಲವೇ. ಕೆಲಸದಲ್ಲಿ ಅತಿಯಾದ ಶ್ರಮ, ಕೆಲಸಗಳು ಆಯಾಸ ತರಲಿವೆ. ಕೆಲವು ಒಳ್ಳೆಯ ಸ್ನೇಹಿತರು ಸಿಗಲಿದ್ದಾರೆ. ವಸ್ತುಗಳು ಕಳೆದು ಹೋಗುವುವು ಎಚ್ಚರ ಇರಲಿ. ಅನ್ಯತಾ ಯಾರನ್ನೂ ಅವಮಾನಿಸಬೇಡಿ. ಪ್ರಯಾಣ ಯೋಗವಿದೆ. ಹತ್ತಿರದವರಿಂದ ಬೇಸರ ಆಗಲಿದೆ. ದೇವರ ಪೂಜೆ ಮರೆಯದಿರಿ.

ಮಿಥುನ ರಾಶಿ :

ಮಿಥುನ ರಾಶಿಗೆ ಇನ್ನೂ ಈ ವಾರವೂ ಅಶುಭ ಮುಂದುವರೆದಿದೆ. ಒಳ್ಳೆಯದು ಮಾಡಲು ಹೋದರೂ ನಿಮಗೆ ಕೆಡುಕು ಆಗಲಿದೆ. ಕೆಟ್ಟ ಆಲೋಚನೆಗಳು ತಲೆಗೆ ಬರಲಿವೆ. ಬೇಗನೆ ಸಿಟ್ಟು ಬರುವುದು, ತಾಳ್ಮೆ ಕೈಕೊಡುವುದು, ನಂಬಿದ ಕುಟುಂಬದಿಂದಲೇ ನಿಮಗೆ ಅಗೌರವ ನಡೆಯಲಿದೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಕುಂಠಿತ ಆಗುವುದು. ಮಾಡುವ ನೌಕರಿಯಲ್ಲಿ ತೃಪ್ತಿ ಇರದು, ಮಾತುಗಳಿಂದ ಕೆಲವು ಸಂಬಂಧಗಳು ಒಡೆಯಲಿವೆ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳಲಿದ್ದೀರಿ. ಆದರೆ ಮುಂದೆ ಒಳ್ಳೆಯ ದಿನಗಳಿವೆ.

ಕರ್ಕಾಟಕ ರಾಶಿ :

ಕರ್ನಾಟಕ ರಾಶಿಗೆ ಶುಭವಾರ ಇದು. ಈ ವಾರ ಆದಾಯದಲ್ಲಿ ಹೆಚ್ಚಳ ಆಗಲಿದೆ. ನೆಮ್ಮದಿಯೂ ಇರಲಿದೆ. ಶತ್ರುಗಳು ನಿಮ್ಮಿಂದ ದೂರ ಇರಲಿದ್ದಾರೆ. ಅಂದುಕೊಂಡ ಕೆಲಸ ಮುಗಿಸಲಿದ್ದೀರಿ. ಹಿರಿಯರಿಂದ ಹಣಕಾಸು ನೆರವು ಸಿಗಲಿದೆ. ಮಾಸಿಕವಾಗಿ ತುಸು ಕುಗ್ಗಲಿದ್ದೀರಿ. ಆದರೆ ಕೆಲವು ಒಳ್ಳೆಯ ಘಟನೆಗಳಿಂದ ಬೇಸರ ದೂರಾಗಲಿದೆ.

ಸಿಂಹ ರಾಶಿ :

ಸಿಂಹ ರಾಶಿಗೆ ಮಿಶ್ರ ಫಲ ಇರಲಿದೆ. ಅನಾರೋಗ್ಯ ಉಂಟಾಗಲಿದೆ, ಕಾಳಜಿ ಇರಲಿ. ಕುಟುಂಬದ ವಿಷಯಗಳಿಗೆ ಗಮನ ಹರಿಸುವುದಿಲ್ಲ. ಒಳ್ಳೆಯ ವಸ್ತುವೊಂದನ್ನು ಕಳೆದುಕೊಳ್ಳಲಿದ್ದೀರಿ. ಪಶ್ಚಾತ್ತಾಪ ಪಡಲಿದ್ದೀರಿ, ಪ್ರವಾಸ ಹೋಗುವ ಯೋಗ ಈ ವಾರ ಇದೆ. ವಿನಾಕಾರಣ ಸುಳ್ಳಾಡಬೇಡಿ, ಸುಳ್ಳಾಡಿ ಕೆಲವರಿಂದ ದೂರಾಗಲಿದ್ದೀರಿ.

ಕನ್ಯಾ ರಾಶಿ:

ಕನ್ಯಾ ರಾಶಿಗೆ ಈ ವಾರ ಮಿಶ್ರಫಲ ಇರಲಿದೆ. ಆತ್ಮವಿಶ್ವಾಸದ ಕೊರತೆ ಎದುರಾಗಲಿದೆ. ಆದರೆ ಭವಿಷ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳುವುದಿಲ್ಲ. ವೈವಾಹಿಕ ಜೀವನದಲ್ಲಿ ಸಮಸ್ಯೆ ಬರಲಿದೆ. ಸಂಗಾತಿಯಿಂದ ದೂರಾಗುವ ಆಲೋಚನೆ ಬರಬಹುದು. ದೂರಾಗಿರುವವರನ್ನು ಹತ್ತಿರ ತರಲಿದ್ದೀರಿ. ಉದ್ದಿಮೆದಾರರಿಗೆ ನಷ್ಟ ಆಗಲಿದೆ. ರಿಯಲ್ ಎಸ್ಟೇಟ್ ಉದ್ದಿಮೆಯವರಿಗೆ ಲಾಭ. ಹೊಸ ವಾಹನ ಖರೀದಿ ಮುಂದೂಡಿ.

ತುಲಾ ರಾಶಿ :

ತುಲಾ ರಾಶಿಗೆ ಈ ವಾರ ಅಷ್ಟೇನು ಒಳಿತಲ್ಲ. ಕ್ಷುಲ್ಲಕ ಕಾರಣಕ್ಕೆ ಗೌರವ ಕಳೆದುಕೊಳ್ಳಲಿದ್ದೀರಿ, ಕೆಲವರಿಂದ ಬೇಸರ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಅವಮಾನ ಆಗುವ ಸಾಧ್ಯತೆ. ಮಾನಸಿಕ ಕ್ಷೋಭೆ ಕಾಡಲಿದೆ. ನಿಮ್ಮನ್ನು ಎಲ್ಲರೂ ನಿಂದಿಸುತ್ತಿದ್ದಾರೆ ಅನಿಸುತ್ತದೆ. ಯಾರೊಂದಿಗೂ ಜಗಳ ಬೇಡ. ಸತ್ಕಾರ್ಯವನ್ನೂ ಮಾಡಲಿದ್ದೀರಿ. ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಹರಿದಾಡಲಿದೆ.

ವೃಶ್ಚಿಕ ರಾಶಿ:

ಉದ್ಯೋಗದಲ್ಲಿ ಕೆಲ ಸಮಸ್ಯೆ ಬರಲಿವೆ. ಆರ್ಥಿಕತೆಗೆ ಹೊಡೆತ ಬೀಳಲಿದೆ. ಅನ್ಯ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ. ಚಿತ್ತ ಚಾಂಚಲ್ಯ ಕಾಡಲಿದೆ. ಹೆಂಡತಿ ಮಾತಿಗೆ ಗೌರವ ಸಿಗಲಿದೆ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಸಿಗಲಿದೆ. ಹಾಕಿಕೊಂಡ ಯೋಜನೆಗಳು ಸಫಲ ಆಗುವ ಸಾಧ್ಯತೆ ಇದೆ. ಕುಟುಂಬದ ಬಗ್ಗೆ ಕಾಳಜಿ ಇರಲಿ. ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ಧನು ರಾಶಿ :

ಧನು ರಾಶಿಗೆ ಈ ವಾರ ಅಶುಭ. ನೆಮ್ಮದಿ ಹಾಳಾಗಲಿದೆ. ಬೇಡವಾದರೂ ಕೆಟ್ಟ ಮಾತುಗಳನ್ನು ಆಡಬೇಕಾಗುತ್ತದೆ. ಹಿತ ಶತ್ರುಗಳಿಂದ ಹಾನಿ ಆಗಲಿದೆ. ಮದುವೆ ಮಾತುಕತೆ ಮುರಿದು ಬೀಳಲಿದೆ. ಉದ್ಯೋಗದಲ್ಲಿ ಗೊಂದಲ ಕಾಡಲಿದೆ. ಮಕ್ಕಳಿಂದ ಕಿರಿ-ಕಿರಿ ಆಗಲಿದೆ. ಕೈ ಹಿಡಿದ ಕೆಲಸಗಳು ಪೂರ್ತಿ ಆಗುವುದಿಲ್ಲ. ತಾಳ್ಮೆ ಕಳೆದುಕೊಳ್ಳದಿರಿ.

ಮಕರ ರಾಶಿ :

ಮಕರ ರಾಶಿಗೆ ಈ ವಾರ ಶುಭ. ಹಣಕಾಸಿನ ಸಮಸ್ಯೆ ಕಾಡಲಿದೆ. ಸರ್ಕಾರದಿಂದ ಹಣ ಬರಲಿದೆ. ಗೆಳತಿ/ಪತ್ನಿಯ ಜೊತೆಗೆ ಜಗಳ ಆಗಲಿದೆ. ಕೆಲಸ ಮಾಡುವಲ್ಲಿ ಆಲಸ್ಯ ಕಾಡಲಿದೆ. ಮಾಡುವ ಕೆಲಸದಲ್ಲಿ ಕಿರಿ-ಕಿರಿ ಇರಲಿದೆ. ಇತರರಿಂದ ಆರ್ಥಿಕ ನೆರವು ಪಡೆಯಲಿದ್ದೀರಿ. ನೀವು ನಿರೀಕ್ಷಿಸಿದಷ್ಟು ಪ್ರೀತಿ-ಗೌರವ ಸಿಗುವುದಿಲ್ಲ.

ಕುಂಭ ರಾಶಿ :

ಕುಂಭ ರಾಶಿಗೆ ಈ ವಾರ ಮಿಶ್ರಫಲ. ನಿಮ್ಮ ಅಹಂಕಾರದಿಂದ ಕೆಲವರನ್ನು ದೂರ ಮಾಡಿಕೊಳ್ಳಲಿದ್ದೀರಿ, ತಂದೆಯೊಂದಿಗೆ ಮನಸ್ತಾಪ ಮೂಡಲಿದೆ. ಅದೃಷ್ಟದ ಕೊರತೆ ಇದೆ. ಮನದಲ್ಲಿ ನಕಾರತ್ಮಕತೆ ತುಂಬಲಿದೆ. ಕೆಟ್ಟ ಆಲೋಚನೆಗಳು ಕಾಡಲಿವೆ. ಕುಟುಂಬದಲ್ಲಿ ಮನಸ್ತಾಪ ಮೂಡಲಿದೆ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ಅನವಶ್ಯಕ ಸಿಟ್ಟು ಬೇಡ.

ಮೀನ ರಾಶಿ :

ಆಗಸ್ಟ್ ತಿಂಗಳ ಎರಡನೇ ವಾರ ಮೀನ ರಾಶಿಗೆ ಮಿಶ್ರಫಲ. ಸಂಗಾತಿಯೊಂದಿಗೆ ಜಗಳ ನಡೆಯಲಿದೆ. ತಾಳ್ಮೆಯಿಂದ ವ್ಯವಹರಿಸಿ. ಯಾವುದೇ ಜಗಳವನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬೇಕಿದೆ. ಕೆಟ್ಟ ಆಲೋಚನೆಗಳು ಕಾಡಿದರೆ ಧ್ಯಾನದ ಮೊರೆ ಹೋಗಿ, ಜಮೀನು ವಿವಾದದಲ್ಲಿ ಗೆಲುವು ನಿಮ್ಮದಾಗಲಿದೆ. ಒಳ್ಳೆಯ ಸ್ನೇಹಿತರಿಂದ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here