Sachin Tendulkar
ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಗೆ ವಿದಾಯ ಹೇಳಿ ವರ್ಷಗಳಾಗಿವೆ. ಇದೀಗ ಕ್ರಿಕೆಟ್ ನಿಂದ ದೂರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕ್ರಿಕೆಟ್ ಆಡುತ್ತಿರುವ ಸಮಯದಲ್ಲಿ ವರ್ಷಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಜಾಹೀರಾತು ಹಾಗೂ ಸಂಬಳದ ರೂಪದಲ್ಲಿ ಸಚಿನ್ ಗಳಿಸುತ್ತಿದ್ದರು. ಆದರೆ ಈಗಲೂ ಸಹ ಸಚಿನ್ ಆದಾಯ ಕಡಿಮೆ ಏನೂ ಆಗಿಲ್ಲ. ಇಂದು (ಆಗಸ್ಟ್ 12) ಕೆಲವೇ ಗಂಟೆಗಳಲ್ಲಿ ಸಚಿನ್ ಕೋಟ್ಯಂತರ ಹಣ ಗಳಿಸಿದ್ದಾರೆ.
ಸಚಿನ್ ಕ್ರಿಕೆಟ್ ನಿಂದ ನಿವೃತ್ತರಾಗುವ ಮುಂಚೆಯೇ ಒಳ್ಳೆಯ ಹೂಡಿಕೆದಾರರೂ ಆಗಿದ್ದರು. ರಿಯಲ್ ಎಸ್ಟೇಟ್ ಸೇರಿದಂತೆ ಕೆಲವು ಕಂಪೆನಿಗಳ ಮೇಲೆ ಹೂಡಿಕೆಯನ್ನೂ ಸಹ ಮಾಡಿದ್ದರು. ಅಂಥಹಾ ಕಂಪೆನಿಗಳಲ್ಲಿ ಒಂದು ‘ಫಸ್ಟ್ ಕ್ರೈ’. ಮಕ್ಕಳು ಮತ್ತು ತಾಯಂದಿರಿಗೆ ಬೇಕಾದ ಬಟ್ಟೆಯಿಂದ ಹಿಡಿದು ಹಲವಾರು ಅವಶ್ಯಕ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆ ಇದು.
ಫಸ್ಟ್ ಕ್ರೈ ಸಂಸ್ಥೆ ಆಗಸ್ಟ್ 12 ರಂದು ಷೇರು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಇದರ ಐಪಿಓ ಹೊರತಂದಾಗ ಪ್ರತಿ ಷೇರಿಗೆ 445-465 ರೂಪಾಯಿಗಳಿಗೆ ಷೇರು ಹಂಚಿಕೆ ಮಾಡಲಾಗಿತ್ತು. ಆದರೆ ನಿನ್ನೆ ಮಾರುಕಟ್ಟೆಯಲ್ಲಿ ಲಿಸ್ಟ್ ಆದ ದಿನವೇ ಕಂಪೆನಿಯ ಷೇರಿನ ಮೌಲ್ಯ 200 ರೂಪಾಯಿಗಳಿಗಿಂತಲೂ ಹೆಚ್ಚಾಗಿದ್ದು 651 ರೂಪಾಯಿಗೆ ಅಂತ್ಯಗೊಂಡಿತು. ಇಂದೂ ಸಹ ಷೇರು ಮೌಲ್ಯ ಏರಿಕೆ ಆಗಿದ್ದು, ಇಂದಿನ ಷೇರು ಮಾರುಕಟ್ಟೆ ದಿನದ ಅಂತ್ಯಕ್ಕೆ 679 ರೂಪಾಯಿ ತಲುಪಿದೆ.
ಸಚಿನ್ ತೆಂಡೂಲ್ಕರ್ ಬಹಳ ಮುಂಚೆಯೇ ಫಸ್ಟ್ ಕ್ರೈ ಸಂಸ್ಥೆಯಲ್ಲಿ 9.99 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಈಗ ಕಂಪೆನಿಯ ಷೇರು ಮೌಲ್ಯ ಹೆಚ್ಚಾದ ಕಾರಣ ಸಚಿನ್ ರ ಹೂಡಿಕೆಯ ಮೊತ್ತ ಒಂದೇ ದಿನದಲ್ಲಿ 13.82 ಕೋಟಿ ರೂಪಾಯಿ ತಲುಪಿದೆ. ಕೇವಲ ಕೆಲವೇ ಗಂಟೆಗಳಲ್ಲಿ ಸಚಿನ್ ರಿಗೆ ಸುಮಾರು ನಾಲ್ಕು ಕೋಟಿ ರೂಪಾಯಿ ಲಾಭವಾಗಿದೆ. ಅಂದಹಾಗೆ ಫಸ್ಟ್ ಕ್ರೈ ಷೇರು ಮಾರುಕಟ್ಟೆಗೆ ಬರಯವ ಮುಂಚೆ ಸಚಿನ್ ಅವರ ಹೂಡಿಕೆ ನಷ್ಟದಲ್ಲಿತ್ತು. ಆದರೆ ಈಗ ಅವರು ಲಾಭ ಪಡೆದುಕೊಂಡಿದ್ದಾರೆ.
Former Cricketer: ಸಿಎಸ್ ಕೆ ಪರ ಆಡಿದ್ದ ಸ್ಟಾರ್ ಕ್ರಿಕೆಟಿಗ ಇಒಗ ಬಸ್ ಡ್ರೈವರ್
ಇದೇ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದ ರತನ್ ಟಾಟಾ ಮತ್ತು ಮಹೀಂದ್ರಾ ಸಂಸ್ಥೆಯವರು ಭಾರಿ ದೊಡ್ಡ ಲಾಭವನ್ನೇ ಮಾಡಿದ್ದಾರೆ. ರತನ್ ಟಾಟಾ ಅವರ ಹೂಡಿಕೆಯ ಮೊತ್ತದ ಸುಮಾರು 7 ಪಟ್ಟು ಹಣ ಅವರಿಗೆ ಮರಳಿದೆ. ಪ್ರತಿ ಷೇರಿಗೆ 77 ರೂಪಾಯಿಯಂತೆ ರತನ್ ಟಾಟಾ ಹೂಡಿಕೆ ಮಾಡಿದ್ದರು. ಈಗ ಪ್ರತಿ ಷೇರಿನ ಮೌಲ್ಯ 669 ಆಗಿದ್ದು, ರತನ್ ಅವರ ಬಳಿ 77,900 ಷೇರುಗಳಿವೆ. ಇನ್ನು ಮಹಿಂದ್ರಾ ಸಂಸ್ಥೆಯು ಸಹ 77 ರೂಪಾಯಿಗೆ ಷೇರು ಖರೀದಿ ಮಾಡಿತ್ತು. ಈಗ ಮಹೀಂದ್ರಾ ಬಳಿ ಫಸ್ಟ್ ಕ್ರೈ ಸಂಸ್ಥೆಯ5 ಕೋಟಿ ಷೇರುಗಳಿವೆ.