ಶ್ರೀಮಂತರು ಅನುಸರಿಸುವ ಹತ್ತು ಸಾಮಾನ್ಯ ಅಭ್ಯಾಸಗಳಿವು, ನೀವೂ ರೂಢಿಸಿಕೊಳ್ಳಿ

ಜಗತ್ತಿನಲ್ಲಿ ತಮ್ಮ ಶ್ರಮದಿಂದ ಶ್ರೀಮಂತರಾದವರಲ್ಲಿ ಅವರ ವ್ಯಕ್ತಿತ್ವ, ದಿನಚರಿಗಳಲ್ಲಿ ಸಾಮ್ಯತೆ ಇದ್ದೇ ಇದೆ.

ಬಹುತೇಕ ಕೋಟ್ಯಧಿಪತಿಗಳು ಬೆಳಗಿನ ಜಾವ ಬೇಗ ಏಳುತ್ತಾರೆ. ಬೇಗ ಎದ್ದರೆ ಕೆಲಸ ಮಾಡಲು ಹೆಚ್ಚು ಸಮಯ ಸಿಗುತ್ತದೆ ಎಂಬುದು ಅವರ ಲೆಕ್ಕಾಚಾರ.

ಇತರೆ ವ್ಯಕ್ತಿಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಹೊಸ ಐಡಿಯಾ, ಹೊಸ ಬ್ಯುಸಿನೆಸ್, ಹೀಗೆ ವಿಚಾರ, ವಿಷಯಗಳ ಬಗ್ಗೆ ಮಾತನಾಡುತ್ತಾರೆ ವ್ಯಕ್ತಿಗಳ ಬಗ್ಗೆ ಅಲ್ಲ.

ಹಣವನ್ನು ಉಳಿಸಲು ನೋಡುವುದಿಲ್ಲ ಬದಲಿಗೆ ಹೂಡಿಕೆ ಮಾಡಲು ಯತ್ನಿಸುತ್ತಾರೆ. ಹಣ ಉಳಿತಾಯ ಮಾಡುವುದು ವ್ಯರ್ಥ ಎಂಬುದು ಬಹುತೇಕ ಕೋಟ್ಯಧಿಪತಿಗಳ ನಂಬಿಕೆ.

ಮಾತನಾಡಲು ಹಿಂಜರಿಯುವುದಿಲ್ಲ. ಸಣ್ಣ ಅನುಮಾನವಾದರೂ ಕೇಳಿ, ತಿಳಿದುಕೊಂಡು ಬಗೆಹರಿಸಿಕೊಳ್ಳುತ್ತಾರೆ. ಹೊಸ ವಿಷಯವನ್ನು ಕೇಳಿ ತಿಳಿದುಕೊಳ್ಳುತ್ತಾರೆ.

ಹಣವನ್ನು ಅತಿಯಾಗಿ ಖರ್ಚು ಮಾಡುವುದಿಲ್ಲ. ತಮ್ಮ ಬಳಿ ಇರುವ ಹಣದ 5% ಗಿಂತಲೂ ಕಡಿಮೆ ಹಣವನ್ನು ಕಾರು, ಮನೆಗಳ ಮೇಲೆ ಖರ್ಚು ಮಾಡುತ್ತಾರೆ.

ಸಾಮಾಜಿಕ ಜಾಲತಾಣ, ಮನರಂಜನೆಗಳಿಂದ ಸಾಧ್ಯವಾದಷ್ಟು ದೂರ ಇರುತ್ತಾರೆ. ಪ್ರತಿದಿನ ಸುದ್ದಿಗಳನ್ನು ನೋಡುತ್ತಾರೆ. ಅಪ್​ಡೇಟೆಡ್​ ಆಗಿರುತ್ತಾರೆ.

ಬಿಲ್ ಗೇಟ್ಸ್, ಎಲಾನ್ ಮಸ್ಕ್, ವಾರೆನ್ ಬಫೆಟ್, ಸ್ಟೀವ್ ಜಾಬ್ಸ್ ಯಾರನ್ನೇ ತೆಗೆದುಕೊಳ್ಳಿ ಇವರೆಲ್ಲರೂ ಒಳ್ಳೆಯ ಓದುಗಾರರು. ಬಹುತೇಕ ಶ್ರೀಮಂತರು ದಿನಕ್ಕೆ ಒಂದು ಗಂಟೆಯಾದರೂ ಓದುತ್ತಾರೆ.