National Award
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಇಂದು (ಆಗಸ್ಟ್ 16) 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಕನ್ನಡಕ್ಕೆ ಮೊದಲ ಬಾರಿಗೆ ಏಳು ಪ್ರಶಸ್ತಿಗಳು ದೊರೆತಿವೆ. ಈ ಏಳು ಪ್ರಶಸ್ತಿಗಳು ಫೀಚರ್ ಮತ್ತು ನಾನ್ ಫೀಚರ್ ಎರಡೂ ಸೇರಿ ಬಂದಿವೆ. ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳೇ ಮೇಲುಗೈ ಸಾಧಿಸಿವೆ. ‘ಕಾಂತಾರ’, ‘ಕೆಜಿಎಫ್ 2’ ಜೊತೆಗೆ ಇನ್ನೂ ಕೆಲ ಪರಭಾಷೆಯ ಸಿನಿಮಾಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಇಂದು ಪ್ರಶಸ್ತಿ ಪಡೆದ ಪ್ರಮುಖ ಸಿನಿಮಾಗಳನ್ನು ಎಲ್ಲಿ ವೀಕ್ಷಿಸಬಹುದು? ಯಾವ ಒಟಿಟಿಯಲ್ಲಿ ಲಭ್ಯವಿದೆ? ಇಲ್ಲಿದೆ ಮಾಹಿತಿ.
ಕಾಂತಾರ, ಕೆಜಿಎಫ್ 2
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಮನೊರಂಜನಾ ಸಿನಿಮಾ ಹಾಗೂ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದ್ದು, ಈ ಸಿನಿಮಾವನ್ನು ಅಮೆಜಾನ್ ಪ್ರೈಂ ನಲ್ಲಿ ಉಚಿತವಾಗಿ ನೋಡಬಹುದು. ಇನ್ನು ‘ಕೆಜಿಎಫ್ 2’ ಸಿನಿಮಾಕ್ಕೂ ಎರಡು ಪ್ರಶಸ್ತಿ ಲಭಿಸಿದೆ. ಈ ಸಿನಿಮಾ ಸಹ ಅಮೆಜಾನ್ನಲ್ಲಿ ವೀಕ್ಷಿಸಬಹುದು.
ಆಟ್ಟಂ
ಮಲಯಾಳಂನ ‘ಆಟ್ಟಂ’ ಸಿನಿಮಾ ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ಮಾತ್ರವಲ್ಲದೆ ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ಸಂಕಲನ ಪ್ರಶಸ್ತಿಗಳು ಸಹ ಇದೇ ಸಿನಿಮಾದ ಪಾಲಾಗಿದೆ. ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಉಚಿತವಾಗಿ ನೋಡಬೇಕು.
Rishab Shetty: ರಿಷಬ್ ಶೆಟ್ಟರ ಬಾಲಿವುಡ್ ಸಿನಿಮಾ ಪ್ರಾರಂಭ ಯಾವಾಗ?
ಸೌದಿ ವೆಲ್ಲಕ
ಮಲಯಾಳಂನ ‘ಸೌದಿ ವೆಲ್ಲಕ’ ಸಿನಿಮಾ ಸಹ ಈ ವರ್ಷ ಕೆಲವು ಒಳ್ಳೆಯ ಪ್ರಶಸ್ತಿಗೆ ಭಾಜನವಾಗಿದೆ. ಸೌದೆ ಕಟ್ಟಿಗೆ ಕುರಿತಾದ ಕೇಸೊಂದರ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು ಸಿನಿಮಾ ಸೋನಿ ಲಿವ್ ಒಟಿಟಿಯಲ್ಲಿದೆ.
ಗುಲ್ಮೊಹರ್
ಜ್ಯೂರಿಗಳ ವಿಶೇಷ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿಗೆ ಭಾಜನವಾಗಿರುವ ಹಿಂದಿಯ ‘ಗುಲ್ಮೊಹರ್’ ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ಲಭ್ಯವಿದೆ. ಅಲ್ಲಿ ಉಚಿತವಾಗಿ ನೋಡಬಹುದಾಗಿದೆ.
ಕಚ್ ಎಕ್ಸ್ಪ್ರೆಸ್
ಗುಜರಾತಿ ಸಿನಿಮಾ ‘ಕಚ್ ಎಕ್ಸ್ಪ್ರೆಸ್’ ಸಹ ಅತ್ಯುತ್ತಮ ನಟಿ ಸೇರಿ ವಿವಿಧ ಪ್ರಶಸ್ತಿ ಬಾಚಿಕೊಂಡಿದೆ. ಈ ಸಿನಿಮಾ ಶೆಮಾರೊ ನಲ್ಲಿ ವೀಕ್ಷಣೆಗೆ ಲಭ್ಯವಿದೆ.