Biriyani: ಬೆಳ್ಳಂಬೆಳಿಗ್ಗೆ ಬಿರಿಯಾನಿ ಹೋಟೆಲ್ ಗಳಿಗೆ ಕಾದಿದೆ ಸರ್ಕಾರದ ಏಟು

0
130
Biriyani
ಸಾಂದರ್ಭಿಕ ಚಿತ್ರ

Biriyani

ಕೋವಿಡ್ ಬಳಿಕ ಹಲವು ಹೊಸ ಟ್ರೆಂಡ್ ಗಳು ಹುಟ್ಟಿಕೊಂಡಿವೆ. ಯೂಟ್ಯೂಬ್, ಇನ್ಸ್ಟಾಗ್ರಾಂ ರೀಲ್ಸ್ ಗಳಂತೂ ಮೇರೆ ಮೀರಿವೆ. ಒದರ ಜೊತೆಗೆ ಊಟದ ಟ್ರೆಂಡ್ ಹಿಂದೆಂದಿಗಿಂತಲೂ ಜೋರಾಗಿದೆ. ಅಡುಗೆ ತಯಾರಿಸುವ ವಿಡಿಯೋಗಳು, ಹೋಟೆಲ್ ವಿಡಿಯೋಗಳು, ಫುಡ್ ರಿವ್ಯೂಗಳು ಹೆಚ್ಚಾಗಿವೆ‌. ಇದರಿಂದಾಗಿ ಹೋಟೆಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೆದೊಲೆಲ್ಲ‌ ಒಂದೋ-ಎರಡೊ ಇದ್ದ ಅರ್ಲಿ ಮಾರ್ನಿಂಗ್ ಬಿರಿಯಾನಿಗಳು ಈಗ ಊರಿಗೆ ಮೂರಾಗಿವೆ. ಆದರೆ ಇವಕ್ಕೆ ಶಾಕ್ ನೀಡಲು ಸರ್ಕಾರ ಸಜ್ಜಾಗಿದೆ.

ಮುಂಚೆ ಹೊಸಕೋಟೆಯಲ್ಲಿ ಎರಡು ಹೋಟೆಲ್ ಗಳಲ್ಲಿ ಮಾತ್ರವೇ ಅರ್ಲಿ ಮಾರ್ನಿಂಗ್ ಬಿರಿಯಾನಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ರೀಲ್ಸ್ ಟ್ರೆಂಡ್ ನಿಂದಾಗಿ ಬೆಂಗಳೂರಿನಲ್ಲೇ ಹಲವು ಅರ್ಲಿ ಮಾರ್ನಿಂಗ್ ಬಿರಿಯಾನಿ ಹೋಟೆಲ್ ಗಳು ಪ್ರಾರಂಭವಾಗಿವೆ. ಹೊಸಕೋಟೆ ಬಿರಿಯಾನಿ ಹೆಸರಲ್ಲಿ ಬೆಂಗಳೂರಿನಲ್ಲೇ ಕೆಲವು ಬಿರಿಯಾನಿ ಹೋಟೆಲ್ ಗಳನ್ನು ತೆರೆದಿದ್ದಾರೆ. ಪ್ರತಿ ಸಣ್ಣ-ಪುಟ್ಟ ಪಟ್ಟಣಗಳಲ್ಲಿಯೂ ಈಗ ಬಿರಿಯಾನಿ ಹೋಟೆಲ್ ಗಳು ಪ್ರಾರಂಭ ಆಗಿವೆ‌‌.

Indian Foods: ವಿದೇಶಗಳಲ್ಲಿ ನಿಷೇಧವಾಗಿದೆ ಭಾರತದ ಈ ಜನಪ್ರಿಯ ಆಹಾರಗಳು

ಆದರೆ ಈ ಅರ್ಲಿ ಮಾರ್ನಿಂಗ್ ಬಿರಿಯಾನಿ ಹೋಟೆಲ್ ಗಳಿಗೆ ಶಾಕ್ ಬೀಡಲು ಸರ್ಕಾರ ಸಜ್ಜಾಗಿದೆ. ಅರ್ಲಿ ಮಾರ್ನಿಂಗ್ ಬಿರಿಯಾನಿ ಹೋಟೆಲ್ ಗಳ ಪ್ರತ್ಯೇಕ ಪರೀಕ್ಷೆಗೆ ಆಹಾರ ಇಲಾಖೆಗೆ ಸೂಚನೆ ನೀಡಲಾಗಿದೆ‌. ಹಲವಾರು ಅರ್ಲಿ ಮಾರ್ನಿಂಗ್ ಹೋಟೆಲ್ ಗಳು ಆಹಾರ ಇಲಾಖೆಗೆ ನೊಂದಣಿಯೇ ಆಗಿಲ್ಲ, ಮಾತ್ರವಲ್ಲದೆ ಆಹಾರ ಸಾಮಗ್ರಿ ಮಾರಾಟ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ದೂರುಗಳು ಬಂದ ಕಾರಣ ಸರ್ಕಾರ ಈ ರೀತಿಯ ಸೂಚನೆಯೊಂದನ್ನು ನೀಡಿದೆ.

ಹೈದರಾಬಾದ್ ನಲ್ಲಿ ಹೋಟೆಲ್ ಒಂದು ಬಿರಿಯಾನಿಯಲ್ಲಿ ಮಾದಕ ವಸ್ತು ಸೇರಿಸಿದ್ದು ಸುದ್ದಿಯಾಗಿತ್ತು. ಇದೇ ರೀತಿ ಕರ್ನಾಟದ ಕೆಲವು ಅರ್ಲಿ ಮಾರ್ನಿಂಗ್ ಹೋಟೆಲ್ ಗಳು ಜನಪ್ರಿಯಗೊಳ್ಳಲು ನ್ಯಾಯಸಮ್ಮತವಲ್ಲದ ರೀತಿ ಆಹಾರ ತಯಾರು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅತಿಯಾದ ದಾಲ್ಡಾ‌ ಬಳಕೆ, ರಾಸಾಯನಿಕ ತುಪ್ಪದ ಬಳಕೆ ಪ್ರಕರಣಗಳು‌ ಅಲ್ಲಲ್ಲಿ ಕಂಡು ಬಂದಿವೆ. ಇದು ಮಾತ್ರವೇ ಅಲ್ಲದೆ ಕೆಲವೆಡೆ ನೈರ್ಮಲ್ಯ ಕಾಪಾಡದೇ ಇರುವ ಬಗ್ಗೆ, ಶುದ್ಧ ಕುಡಿಯುವ ನೀರು ನೀಡದೇ ಇರುವ ಬಗ್ಗೆ ಸಹ ದೂರುಗಳು ದಾಖಲಾಗಿವೆ. ಹಾಗಾಗಿ ಸರ್ಕಾರವು ಅಂಥಹಾ ಹೋಟೆಲ್ ಗಳ‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರೆಂದು ಅಧಿಕಾರಿಗಳಿಗೆ ಸೂಚಿಸಿದೆ.

LEAVE A REPLY

Please enter your comment!
Please enter your name here