weekly horoscope: ಆಗಸ್ಟ್ 19 ರಿಂದ 25: ಈ ವಾರ ಹೇಗಿರಲಿದೆ ನಿಮ್ಮ ಭವಿಷ್ಯ?

0
166
Weekly Horoscope

ಆಗಸ್ಟ್‌ ತಿಂಗಳ ಮೂರನೇ ವಾರ 19 ರಿಂದ 25 ರವರೆಗೆ ಇರಲಿದೆ. ಈ ವಾರ ಕೆಲ ಗ್ರಹಗಳ ಚಲನೆ ಆಗಲಿದೆ, ಕೆಲ ರಾಶಿಗಳಗೆ ಒಳಿತಾಗಲಿದೆ, ಕೆಲವಕ್ಕೆ ಕೆಡುಕು. ಈ ವಾರ ಯಾವ ರಾಶಿಗೆ ಒಳ್ಳೆಯದಾಗಲಿದೆ? ಯಾವ ರಾಶಿಗೆ ಕೆಡುಕಾಗಲಿದೆ? ಇಲ್ಲಿ ತಿಳಿಯಿರಿ.

ಮೇಷ ರಾಶಿ

ಈ ತಿಂಗಳ ಮೂರನೇ ವಾರದಲ್ಲಿ ಮೇಷ ರಾಶಿಗೆ ಶುಭವಿದೆ. ಗೆಳೆಯರು ನಿಮಗೆ ಸಹಾಯ ಮಾಡಲಿದ್ದಾರೆ. ಈ ವಾರ ಸಂಪೂರ್ಣ ಉತ್ಸಾಹದಿಂದ ಇರಲಿದ್ದೀರಿ. ಇದ್ದ ಚಿಂತೆಗಳು ದೂರ ಆಗಲಿವೆ. ಈ ವಾರ ನೀವು ಬಯಸಿದ್ದು ನಿಮಗೆ ಸಿಗಲಿದೆ. ಅತಿಯಾದ ಆಸೆ ಬೇಡ.

ವೃಷಭ ರಾಶಿ

ಈ ವಾರ ಮಿಶ್ರಫಲವಿದೆ. ಕೆಲವು ವ್ಯವಹಾರಗಳಲ್ಲಿ ಹಿನ್ನಡೆ ಆಗಲಿದೆ. ಹೊಂದಾಣಿಕೆ ಸಹ ಇರದು. ನಿರೀಕ್ಷೆ ಮಾಡಿದಷ್ಟು ಹಣ ಹರಿದು ಬರುವುದಿಲ್ಲ. ನಷ್ಟ ಉಂಟಾಗುವ ಭೀತಿಯೂ ಇದೆ. ನಿಮ್ಮತನವನ್ನು ಕಳೆದುಕೊಂಡು ನಾಟಕೀಯವಾಗಿ ವರ್ತಿಸಬೇಕಾದೀತು. ಅನವಶ್ಯಕವಾಗಿ ವಿರೋಧಿಸುವಿರಿ.

ಮಿಥುನ ರಾಶಿ

ಈ ವಾರ ನಿಮಗೆ ಶುಭವಾಗಿಲ್ಲ. ಆತ್ಮೀಯರ ಬಳಿ ನಂಬಿಕೆ ಕಳೆದುಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಬೆನ್ನ ಹಿಂದೆ ಮಾತನಾಡುವವರು ಹೆಚ್ಚಾಗಲಿದ್ದಾರೆ. ದಿನನತ್ಯದ ಖರ್ಚು-ವೆಚ್ಚ ಹೆಚ್ಚಳ ಆಗಲಿದೆ. ಹಿತಶತ್ರುಗಳು ಹೆಚ್ಚಾಗಲಿದ್ದಾರೆ, ಆದರೆ ಅದು ನಿಮಗೆ ಅರಿವಿಗೆ ಬಾರದು. ಬೇಸರದ ಮನಸ್ತಿತಿಯಿಂದ ನೀವು ಹೊರ ಬರಬೇಕು. ಇಲ್ಲವಾದರೆ ಜೀವನ ಕಷ್ಟವಾಗಲಿದೆ.

Weekly Horoscope: ಆಗಸ್ಟ್ ತಿಂಗಳ ಎರಡನೇ ವಾರ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿ ತಿಳಿಯಿರಿ

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಗೆ ಈ ವಾರ ಶುಭ ಆಗಲಿದೆ. ಕೆಲವು ಸಮಸ್ಯೆಗಳು ನಿವಾರಣೆ ಆಗಲಿವೆ. ನಿಮ್ಮ ಯೋಚನೆಗಳ ಮೇಲೆ ಕೆಲವರು ಸಕಾರಾತ್ಮಕ ಪರಿಣಾಮ ಬೀರಲಿದ್ದಾರೆ. ಈ ವಾರ ಯಾವುದೇ ನಿರ್ಧಾರ ಮಾಡುವ ಮುನ್ನ ತುಸು ಯೋಚಿಸಿ. ಮಕ್ಕಳ ಆರೋಗ್ಯದಲ್ಲಿ ತುಸು ಏರು-ಪೇರಾಗಬಹುದು, ಚಿಕಿತ್ಸೆ ಕೊಡಿಸಿ, ಗುರು-ಹಿರಿಯರ ಮಾತಿಗೆ ಗೌರವ ನೀಡಿ. ಇನ್ನೊಬ್ಬರನ್ನು ನಂಬಿ ಮುಂದೆ ಹೆಜ್ಜೆ ಇಡಬೇಡಿ, ಸ್ವಂತ ಕಾಲ ಮೇಲೆ ನಿಲ್ಲಿ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಗ್ರಹಗಳ ಚಲನೆ ಇದ್ದು, ಈ ವಾರ ಮಿಶ್ರಫಲವಿದೆ. ಕೆಲ ಒಳ್ಳೆಯ ಅವಕಾಶಗಳು ನಿಮ್ಮ ಕಡೆಗೆ ಬರಲಿವೆ. ನಿಮ್ಮ ಕೋಪವೇ ನಿಮಗೆ ಶತ್ರು ಆಗಲಿದೆ. ಕೋಪವನ್ನು ಕಡಿಮೆ ಮಾಡಿಕೊಳ್ಳದಿದ್ದಷ್ಟೆ ಕಷ್ಟವಾಗಲಿದೆ. ಬರುತ್ತಿರುವ ಆದಾಯ ನಿಂತು ಹೋಗಬಹುದು. ಸುಲಭವಾಗಿ ಆಗುವ ಕೆಲಸವನ್ನು ಕಠಿಣ ಮಾಡಿಕೊಳ್ಳುತ್ತೀರಿ. ಇತರರ ಮೇಲೆ ನಂಬಿಕೆ ಕಳೆದುಕೊಳ್ಳಲಿದ್ದೀರಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ಒಳಿತಾಗಲಿದೆ. ಕೆಲವು ವಿವಾದಗಳು ಇತ್ಯರ್ಥ ಆಗಲಿದೆ. ಶತ್ರು ಪೀಡೆ ಇರಲಿದೆ, ಸಾವಧಾನದಿಂದ ಎದುರಿಸಿ, ಇರುವ ಸಾಲವನ್ನು ನೀವು ಮರುಪಾವತಿ ಮಾಡಬೇಕು. ಇಲ್ಲವಾದರೆ ಸಮಸ್ಯೆ ಎದುರಿಸಲಿದ್ದೀರಿ. ಇತರರಿಗೆ ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡಿ. ಗಣ್ಯರ ಸಹವಾಸ ಸಿಗಲಿದೆ. ಅವರಿಂದ ಸಹಾಯ ತೆಗೆದುಕೊಳ್ಳಿ. ಜೀವನದ ಬಗ್ಗೆ ಯೋಜನೆ ಹಾಕಿಕೊಳ್ಳಿ, ಯೋಜನೆಯಂತೆ ನಡೆಯಿರಿ, ಒಳಿತಾಗಲಿದೆ.

ತುಲಾ ರಾಶಿ

ಈ ವಾರ ಮಿಶ್ರಫಲ ಇದೆ. ನಿಮ್ಮ ಪ್ರತಿಭೆಗೆ ಈ ವಾರ ಮನ್ನಣೆ ದೊರಕಲಿದೆ. ಕೆಲವರ ಹೊಗಳಿಕೆ ಪಾತ್ರರಾಗಲಿದ್ದೀರಿ. ಉದ್ಯೋಗದಲ್ಲಿ ನಿಮಗೆ ಅವಮಾನ ಉಂಟಾಗುವ ಸಾಧ್ಯತೆ ಇದೆ. ಹಳೆಯ ಸಾಲ ಮರು ಪಾವತಿ ಆಗಲಿದೆ. ಸಾವಧಾನದಿಂದ ಪ್ರಯತ್ನಿಸಿ. ಈ ವಾರ ನೀವು ಮಾತಿಗೆ ತಪ್ಪಿಲಿದ್ದೀರಿ, ಇದರಿಂದ ನಿಮ್ಮ ಗೌರವ ಕಡಿಮೆ ಆಗಲಿದೆ. ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೋಲುವಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಒಳಿತಾಗಲಿದೆ. ನಿಮಗೆ ವಹಿಸಲಾಗಿರುವ ಕೆಲಸವನ್ನು ನೀವು ಮುಗಿಸುವಿರಿ. ನಿಮಗೆ ನಿಯೋಜಿತವಾಗಿರುವ ಹುದ್ದೆಯನ್ನು ತ್ಯಜಿಸುವ ಮನಸಾಗುವುದು, ಆದರೆ ಹಾಗೆ ಮಾಡುವುದು ಬೇಡ. ಕೆಲವು ನೋವುಗಳಾಗುವ ಮಾತುಗಳು ನಿಮ್ಮ ಕಿವಿಗೆ ಬೀಳಲಿವೆ ನಿರ್ಲಕ್ಷಿಸಿ, ಈ ವಾರ ನಿಮಗೆ ಮನೊರಂಜನೆ ಸಿಗಲದೆ. ಮಕ್ಕಳೊಂದಿಗೆ, ಕುಟುಂಬದೊಂದಿಗೆ ಸಮಯ ಕಳೆಯಲದ್ದೀರಿ. ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರದಿಂದ ಇರಿ.

ಧನು ರಾಶಿ

ಈ ರಾಶಿಯವರಿಗೆ ಈ ವಾರ ಮಿಶ್ರ ಫಲ ಇದೆ. ನಿಮ್ಮ ಮೇಲೆ ನೀವು ವಿಶ್ವಾಸವಿಡಿ. ಬೇರೆಯವರ ನೋಡಿ ಅವರಂತೆ ಆಡುವುದು ಬೇಡ. ನಡೆ-ನುಡಿ ನೇರವಾಗಿರಲಿ. ಕೆಲಸ ಮಾಡುವಾಗ ಜವಾಬ್ದಾರಿಯಿಂದ ಮಾಡಿ. ಅಮುಖ್ಯರ ಸಲಹೆ ಕೇಳಬೇಡಿ, ಕುಟುಂಬದೊಂದಿಗೆ ಪ್ರವಾಸ ಹೋಗಿ ಬನ್ನಿ.

ಮಕರ ರಾಶಿ

ಮಕರ ರಾಶಿಯವರಿವೆ ಮಿಶ್ರಫಲವಿದೆ. ಆಡಿಕೊಳ್ಳುವವರ ಮಾತಿನಿಂದ ಬೇಸರ ಆಗಲಿದೆ. ಕೆಲವು ಒಳ್ಳೆಯವರ ಸಹವಾಸ ಸಿಗಲಿದೆ. ಭವಿಷ್ಯದ ಬಗ್ಗೆ ಯೋಚನೆ, ಯೋಜನೆ ಹಾಕಿಕೊಳ್ಳುವವರ ಜೊತೆಗೆ ಸ್ನೇಹ ಬೆಳೆಸಿ, ಯೋಜನೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಮಾತುಗಳನ್ನು ಕೆಲವರು ನಿರ್ಲಕ್ಷಿಸುವರು. ಹಣಕಾಸು ತೊಡಗಿಸುವ ಮುನ್ನ ಅಥವಾ ಉದ್ದಿಮೆ ಮೇಲೆ ಬಂಡವಾಳ ಹೂಡುವ ಮುನ್ನ ಎಚ್ಚರಿಕೆ ಇರಲಿ, ಪೂರ್ಣ ಮಾಹಿತಿ ಪಡೆದ ಮೇಲಷ್ಟೆ ಹಣ ತೊಡಗಿಸಿ. ಮಾತಿನಿಂದ ಕೆಲವು ಸಮಸ್ಯೆಗಳಿಗೆ ಗುರಿ ಆಗಲಿದ್ದೀರಿ.

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಶುಭ ಆಗಲಿದೆ. ಅತಿಯಾದ ಉದಾರ ಭಾವ ಬೇಡ, ಇದರಿಂದ ಸಮಸ್ಯೆ ಆಗಬಹುದು. ನಿಮ್ಮಿಂದ ಕೆಲವು ಒಳ್ಳೆಯ ಕೆಲಸ ಆಗಲಿದೆ. ಕೆಲವರಿಗೆ ಒಳಿತಾಗಲಿದೆ. ಬೇರೆಯವರ ಬಗ್ಗೆ ಆಲೋಚನೆ ಮಾಡಲು ನಮಗೆ ಸಮಯ ಸರಿಹೋಗುವುದಿಲ್ಲ. ಪತ್ನಿಗೆ ದುಃಖ ಆಗಲಿದೆ. ಪತ್ನಿಯ ಕಷ್ಟಗಳಲ್ಲಿ ಭಾಗಿ ಆಗುವಿರಿ. ದಾಂಪತ್ಯ ಸರಿ ಹೋಗಲಿದೆ.

ಮೀನ ರಾಶಿ

ಕೊನೆಯ ರಾಶಿಯವರಿಗೆ ಈ ವಾರ ಮಿಶ್ರ ಫಲ ಇರಲಿದೆ. ಕೆಲವು ಆತ್ಮೀಯರನ್ನು ಭೇಟಿ ಆಗಲಿದ್ದೀರಿ. ಮನ ಉಲ್ಲಾಸವಾಗುವಂತೆ ಸಮಯ ಕಳೆಯಲಿದ್ದೀರಿ. ಅನಿರೀಕ್ಷಿತವಾಗಿ ಹಣಕಾಸು ಹರಿದು ಬರಲಿದೆ. ಆ ಮೂಲಕ ನಿಮಗೆ ಬಂದಿರುವ ಸಮಸ್ಯೆ ಸರಿ ಹೋಗಲಿದೆ. ಈ ಆರ ದಾನ-ಧರ್ಮ ಮಾಡಲಿದ್ದೀರಿ. ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಇದು ನಿಮಗೆ ಹೊಸ ಅವಕಾಶಗಳನ್ನು ನೀಡಲಿದೆ. ನೀವು ಹಾಕಿಕೊಂಡಿರುವ ಯೋಜನೆಗಳು ಪೂರ್ಣವಾಗುತ್ತವೆ.

LEAVE A REPLY

Please enter your comment!
Please enter your name here