Insta Influencer
ಎಷ್ಟೇ ದೊಡ್ಡ ಹಣವಂತನಾದರೂ ರಸ್ತೆಯಲ್ಲಿ ಹಣ ಎಸೆಯುವುದಿಲ್ಲ. ಆದರೆ ತೆಲಂಗಾಣದ ಯುವಕನೊಬ್ಬ ಸುಮಾರು 50 ಸಾವಿರ ರೂಪಾಯಿ ಹಣವನ್ನು ರಸ್ತೆಯಲ್ಲಿ ಚೆಲ್ಲಾಡಿದ್ದಾನೆ. ಯುವಕನ ವಿಡಿಯೋ ಏನೋ ವೈರಲ್ ಆಗಿದೆ. ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಹೈದರಾಬಾದ್ ನ ಕೂಕಟಪಲ್ಲಿ ಪ್ರದೇಶದಲ್ಲಿ ಇನ್ ಸ್ಟಾಗ್ರಾಂ ಇನ್ ಫ್ಲಯುಯೆನ್ಸರ್ ಒಬ್ಬಾತ ಜನ ಓಡಾಡುತ್ತಿರುವ ರಸ್ತೆಯಲ್ಲಿ, ನೂರು-500 ರೂಪಾಯಿ ನೋಟುಗಳನ್ನು ಎಸೆದಿದ್ದಾನೆ. ಅಲ್ಲದೆ ಆತ ಚೆಲ್ಲಿದ ನೋಟುಗಳನ್ನು ಜನ ಆಯ್ದುಕೊಳ್ಳುವ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ.
Its_me_power ಹೆಸರಿನ ಇನ್ ಸ್ಟಾಗ್ರಾಂ ಖಾತೆ ಹೊಂದಿರುವ ಯುವಕನೊಬ್ಬ ಹೀಗೆ ರಸ್ತೆಯಲ್ಲಿ ಹಣ ಎಸೆದಿದ್ದಾನೆ. ವಿಡಿಯೋ ಅನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಆತ, ಇಂದು 50 ಸಾವಿರ ರೂಪಾಯಿ ಹಣವನ್ನು ರಸ್ತೆಯಲ್ಲಿ ಎಸೆದಿದ್ದೇನೆ. ಆ ಬಗ್ಗೆ ನನಗೇನೂ ಬೇಜಾರಿಲ್ಲ ಏಕೆಂದರೆ ಆ ಹಣ ಕೇವಲ ನನ್ನ ಎರಡು ಗಂಟೆಯ ಸಂಪಾದನೆ ಎಂದಿದ್ದಾನೆ.
ಅಲ್ಲದೆ ತಾನು ಹಣ ಎಸೆಯುತ್ತಿರುವ ವಿಡಿಯೋ ಅನ್ನು ಮಾರುಕಟ್ಟೆ ತಂತ್ರವನ್ನಾಗಿ ಬಳಸಿಕೊಂಡಿರುವ ಆ ಯುವಕ, ನಾನು ಸಾಕಷ್ಟು ಹಣ ಗಳಿಸಿದ್ದೀನಿ ನೀವೂ ಸಹ ನನ್ನಂತೆ ಹಣ ಗಳಿಸಬಹುದು. ನನ್ನ ಟೆಲಿಗ್ರಾಂ ಚಾನೆಲ್ ಇದೆ ಆ ಚಾನೆಲ್ ಸೇರಿಕೊಳ್ಳಿ ಗಂಟೆಯಲ್ಲಿ 10 ಸಾವಿರ ರೂಪಾಯಿ ಹಣ ಸಂಪಾದಿಸಿ ಎಂದಿದ್ದಾನೆ.
Vegetable: ಎಚ್ಚರ! ಮಾರುಕಟ್ಟೆಗೆ ಬಂದಿವೆ ನಕಲಿ ಬೆಳ್ಳುಳ್ಳಿ
ಆತನ ಇನ್ ಸ್ಟಾಗ್ರಾಂ ಫೀಡ್ ನಲ್ಲಿ ಇಂಥಹ ಹುಚ್ಚಾಟದ ವಿಡಿಯೋಗಳು ಸಾಕಷ್ಟಿವೆ. ಬಾರ್ ಗೆ ಹೋಗಿ ಕುಡುಕರಿಗೆ ಉಚಿತವಾಗಿ ಮದ್ಯ ಕೊಡಿಸುವುದು, ಸಿಗರೇಟು ಸೇದುತ್ತಾ ಜೀವನ ಪಾಠ ಹೇಳುವ ವಿಡಿಯೋಗಳು, ಡ್ಯಾನ್ಸ್- ಹಾಡಿನ ವಿಡಿಯೋಗಳು ಸಹ ಇವೆ.
ಇದೀಗ ಈತ ಹಣ ಎಸೆದಿರುವ ವಿಡಿಯೋ ವೈರಲ್ ಆಗಿದ್ದು, ಯುವಕನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.