ಆಹಾರಕ್ಕಾಗಿ ಚಲಿಸುವ ಜೀವಿಗಳನ್ನು ಅವಲಂಬಿಸದೇ ಇರುವವರು ಅಥವಾ ಸಸ್ಯಮೂಲವಾದ ವಸ್ತುಗಳನ್ನೇ ಬಳಸುವವರು ಸಸ್ಯಹಾರಿಗಳು.
ಸಸ್ಯಹಾರ ಎಂಬುವು ಒಂದು ಉತ್ತಮ, ಆರೋಗ್ಯಕರ ಆಹಾರ ಪದ್ಧತಿ ಆದರೆ ಇದರಲ್ಲಿ ಕೆಲವು ನ್ಯೂನ್ಯತೆಗಳು ಸಹ ಇವೆ.
ಸಸ್ಯಹಾರ ಸೇವನೆ ಮಾಡುವವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ವಿಟಮಿನ್ ಬಿ12 ಸಮಸ್ಯೆ. ಇದನ್ನು ಸಪ್ಲಿಮೆಂಟ್ಸ್ ಮೂಲಕ ಸರಿಪಡಿಸಬಹುದು.
ವಿಟಮಿನ್ ಡಿ3 ಸಮಸ್ಯೆ ಸಹ ಸಸ್ಯಾಹಾರಿಗಳನ್ನು ಕಾಡುತ್ತದೆ. ಈ ಕೊರತೆಗಳು ಸಾಮಾನ್ಯವಾಗಿ ಮಾಂಸಾಹಾರಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಮೀನುಗಳಲ್ಲಿ ಯಥೇಚ್ಛವಾಗಿ ಸಿಗುವ ಒಮೆಗಾ 3 ಫ್ಯಾಟಿ ಆಸಿಡ್ಗಳ ಕೊರತೆ ಸಹ ಸಸ್ಯಹಾರಿಗಳಲ್ಲಿ ಕಂಡು ಬರುತ್ತದೆ. ಇದನ್ನೂ ಸಹ ಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳಬೇಕು.
ಸಸ್ಯಹಾರಿಗಳಲ್ಲಿ ಹೀಮ್ ಐರನ್ ಕೊರತೆ ಸಹ ಹೆಚ್ಚಾಗಿ ಕಂಡು ಬರುತ್ತದೆ. ಸಸ್ಯಹಾರಿಗಳು ತಿನ್ನುವ ಆಹಾರ ಪದಾರ್ಥಗಳಲ್ಲಿ ಹೀಮ್ ಐರನ್ ಪ್ರಮಾಣ ಕಡಿಮೆ ಇರುತ್ತದೆ.
ಸಸ್ಯಹಾರವನ್ನು ನಿಯಮಿತವಾಗಿ ಸೇವಿಸುವವರಲ್ಲಿ ಜಿಂಕ್ ಪ್ರಮಾಣ ಸಹ ಕಡಿಮೆ ಇರುತ್ತದೆ. ಇದನ್ನು ಇಂಜೆಕ್ಷನ್ ಹಾಗೂ ಮಾತ್ರೆಗಳ ಮೂಲಕ ಸರಿಪಡಿಸಿಕೊಳ್ಳಬಹುದು.