Smartphone
ಆಗಸ್ಟ್ ಮುಗಿದು ಸೆಪ್ಟೆಂಬರ್ ಪ್ರಾರಂಭವಾಗಿದೆ. ವರ್ಷದ ಅಂತ್ಯಕ್ಕೆ ಕೆಲವೇ ತಿಂಗಳುಗಳು ಬಾಕಿ ಇದೆ. ಗಣೇಶ ಚತುರ್ಥಿ ಹತ್ತಿರದಲ್ಲಿದೆ, ಅದಾದ ಬಳಿಕ ದಸರಾ, ದೀಪಾವಳಿ ಹಬ್ಬಗಳು ಬರುತ್ತಿವೆ. ಕೆಲವು ಮೊಬೈಲ್ ಕಂಪೆನಿಗಳು ಕೆಲ ಶಕ್ತಿಶಾಲಿ ಮೊಬೈಲ್ ಬಿಡುಗಡೆಗೆ ಸಜ್ಜಾಗಿದ್ದು, ಸಾಲು-ಸಾಲು ಹಬ್ಬಗಳ ಲಾಭ ಪಡೆಯುವ ಹುನ್ನಾರದಲ್ಲಿವೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪ್ರಮುಖ ಮೊಬೈಲ್ ಸಂಸ್ಥೆಗಳು ತಮ್ಮ ಹೊ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿವೆ. ಇಲ್ಲಿದೆ ನೋಡಿ ಪಟ್ಟಿ.
ಆಪಲ್ 16
ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಬೇಡಿಕೆಯ ಮೊಬೈಲ್ ಆದ ಆಪಲ್ ಐಫೋನ್ 16 ಬಿಡುಗಡೆ ಆಗುತ್ತದೆ. ಸೆಪ್ಟೆಂಬರ್ ತಿಂಗಳ 9ನೇ ತಾರೀಖಿನಂದು ಆಪಲ್ ಪಾರ್ಕ್ನಲ್ಲಿ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರತಿಬಾರಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆಪನ್ ಸಂಸ್ಥೆ ತನ್ನ ಹೊಸ ಐಫೋನನ್ನು ಬಿಡುಗಡೆ ಮಾಡುತ್ತದೆ.
ಸ್ಯಾಮ್ಸಂಗ್ ಎಸ್ 24 ಎಫ್ಇ
ಸ್ಯಾಮ್ಸಂಗ್ ಸಂಸ್ಥೆ ಇದೇ ವರ್ಷಾರಂಭದಲ್ಲಿ ಸ್ಯಾಮ್ಸಂಗ್ ಎಸ್ 24 ಬಿಡುಗಡೆ ಮಾಡಿತ್ತು. ಅದಾದ ಬಳಿಕ ಫ್ಲಿಪ್ ಫೋನನ್ನು ಹೊರತಂತು. ಈಗ ಇದೇ ವರ್ಷ ಇನ್ನೊಂದು ಶಕ್ತಿಯುತ ಹಾಗೂ ಸ್ಟೈಲಿಷ್ ಫೋನನ್ನು ಬಿಡುಗಡೆ ಮಾಡುತ್ತಿದೆ. ಸ್ಯಾಮ್ಸಂಗ್ ಎಸ್ 24 ಎಫ್ಇ ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ 24 ಮೊಬೈಲ್ನ ದ್ವಿತೀಯ ದರ್ಜೆ ಫೋನಿದು.
ಮೊಟೊರೋಲಾ ರೇಜರ್ 50
ಆಪಲ್, ಸ್ಯಾಮ್ಸಂಗ್ ಇನ್ನಿತರೆ ಗಟ್ಟಿ ಆಟಗಾರರ ನಡುವೆ ಮೊಟೊರೋಲಾ ಸಂಸ್ಥೆ ಸ್ಪರ್ಧೆ ಕೊಡುತ್ತಾ ಸರ್ವೈವ್ ಆಗುತ್ತಲೇ ಬಂದಿದೆ. ಸ್ಯಾಮ್ಸಂಗ್ನ ಫೋನುಗಳಿಗೆ ಪ್ರತಿಸ್ಪರ್ಧೆ ಒಡ್ಡುತ್ತಾ ಬರುತ್ತಿರುವ ಮೊಟೊರೊಲಾ ಸಂಸ್ಥೆ ಇದೀಗ ಸ್ಯಾಮ್ಸಂಗ್ನ ಫ್ಲಿಪ್ಗೆ ಎದುರಾಗಿ ಮೊಟೊರೋಲಾ ರೇಜರ್ 50 ಮೊಬೈಲ್ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿದೆ.
ವಿವೊ ಟಿ3 ಅಲ್ಟ್ರಾ
ವಿವೋ ಸಂಸ್ಥೆ ಭಾರತದ ಬಡ ಜನರ ಫೋನು ಕಂಪೆನಿ. ಕಡಿಮೆ ಬೆಲೆ ಗುಣಮಟ್ಟದ ಫೋನನ್ನು ವಿವೋ ತಯಾರಿಸುತ್ತಾ ಬರುತ್ತಿದೆ. ಇದೀಗ ವಿವೋ ಟಿ3 ಅಲ್ಟ್ರಾ ಮೊಬೈಲ್ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿದೆ. 30 ಸಾವಿರ ರೂಪಾಯಿ ಬೆಲೆಯ ಈ ಫೋನು ವಿವೋದ ಶಕ್ತಿಯುತ ಫೋನುಗಳಲ್ಲಿ ಒಂದು.
Samsung: ಕಡಿಮೆ ಬೆಲೆಗೆ ಲಭ್ಯವಿದೆ ಸ್ಯಾಮ್ ಸಂಗ್ ನ ಈ ಶಕ್ತಿಶಾಲಿ ಫೋನು
ಇನ್ಫಿನಿಕ್ಸ್ ಹಾಟ್ 50
ಇನ್ಫಿನಿಕ್ಸ್ ಸಂಸ್ಥೆ ತನ್ನ ಗಟ್ಟಿ ಬಾಡಿ ಹಾಗೂ ಗುಣಮಟ್ಟದ ಸಾಫ್ಟ್ವೇರ್ ಹೊಂದಿರುವ ಮೊಬೈಲ್ಗಳನ್ನು ಇನ್ಫಿನಿಕ್ಸ್ ಬಿಡುಗಡೆ ಮಾಡುತ್ತಾ ಬಂದಿದೆ. ಭಾರಿ ದೊಡ್ಡ ಮಾರುಕಟ್ಟೆ ಷೇರನ್ನು ಈ ಸಂಸ್ಥೆ ಹೊಂದಿಲ್ಲವಾದರೂ ಕೆಲ ವರ್ಷಗಳಿಂದಲೂ ಮಾರುಕಟ್ಟೆಯಲ್ಲದೆ. ಇದೀಗ ಈ ಸಂಸ್ಥೆ ಇನ್ಫಿನಿಕ್ಸ್ 50 ಮೊಬೈಲ್ ಅನ್ನು ಬಿಡುಗಡೆ ಮಾಡುತ್ತಿದೆ.