Spin Mop
ಮನೆ ಕೆಲಸಗಳಲ್ಲಿಯೇ ಮನೆ ಒರೆಸುವ ಅತ್ಯಂತ ಕಷ್ಟದ್ದು ಎನ್ನಬಹುದು. ಏಕೆಂದರೆ ಬಟ್ಟೆ ಒಗೆಯುವ ವಾಷಿಂಗ್ ಮಷಿನ್ ಬಹುತೇಕ ಎಲ್ಲರ ಮನೆಯಲ್ಲಿದೆ. ಆದರೆ ಮನೆ ಒರೆಸುವ ಯಂತ್ರ ಅಂದರೆ ರೋಬೋಟ್ ಮಾಪ್ ಬಹಳ ದುಬಾರಿ, ಮಾತ್ರವೇ ಅಲ್ಲದೆ ತೃಪ್ತಿಕರವಾಗಿ ಮನೆ ಒರೆಸುವುದಿಲ್ಲ ಅದು. ನಾವೇ ಕೈಯಿಂದ ಒರೆಸಿದರೆ ಬರುವ ಹೊಳಪಿಗೂ, ರೋಬೋಟ್ ಮಾಪ್ ಒರೆಸಿದಾಗ ಬರುವ ಹೊಳಪಿಗೂ ಬಹಳ ಅಂತರ ಇದೆ.
ಅಲ್ಲದೆ ರೋಬೋಟ್ ಮಾಪ್ನದ್ದು ಹಲವು ಸಮಸ್ಯೆ ಇದೆ. ಮನೆಯಲ್ಲಿ ಕುರ್ಚಿಗಳು ಸೋಫಾಗಳು ಇದ್ದರೆ ಅದು ಸರಿಯಾಗಿ ಒರೆಸುವುದಿಲ್ಲ ಮಾತ್ರವಲ್ಲದೆ ಗೋಡೆಯ ಪಕ್ಕದಲ್ಲಿ, ಮನೆಯ ಮೂಲೆಗಳಲ್ಲಿ ಸರಿಯಾಗಿ ಒರೆಸುವುದಿಲ್ಲ. ಇದೆಲ್ಲದರ ಜೊತೆಗೆ ರೋಬೋಟ್ ಮಾಪ್ಗಳು ಬಹಳ ದುಬಾರಿ. ಕಡಿಮೆ ಬೆಲೆಯ ರೋಬೋಟಿಕ್ ಮಾಪ್ ಖರೀದಿಸಲು 30 ಸಾವಿರ ರೂಪಾಯಿ ನೀಡಬೇಕು. ಒಳ್ಳೆಯ ರೋಬೊಟಿಕ್ ಮಾಪ್ ಬೇಕೆಂದರೆ 50 ಸಾವಿರ ಕೊಡಬೇಕು.
ಆದರೆ ರೋಬೋಟಿಕ್ ಮಾಪ್ಗಿಂತಲೂ ಬಹಳ ಉತ್ತಮವಾಗಿ ಕೆಲಸ ಮಾಡುವ, ಬೆಲೆಯಲ್ಲಿ ಬಹಳ ಕಡಿಮೆ ಇರುವ ಆಟೊಮ್ಯಾಟಿಕ್ ಮಾಪ್ ಮಾರುಕಟ್ಟೆಗೆ ಬಂದಿದೆ. ಬಡ ಮಧ್ಯಮ ವರ್ಗದವರು ಸಹ ಸುಲಭವಾಗಿ ಖರೀದಿ ಮಾಡಬಹುದಾದ ಈ ಮಾಪ್ ಅನ್ನು ಅನುಭವಿ ಮತ್ತು ಖ್ಯಾತ ಅಗಾರೊ ರಿಗೆನ್ಸಿ ಸಂಸ್ಥೆ ಈ ಆಟೊಮ್ಯಾಟಿಕ್ ಮಾಪರ್ ಅನ್ನು ನಿರ್ಮಾಣ ಮಾಡಿದೆ.
ಚಾರ್ಜ್ ಮಾಡುವ ಈ ಆಟೊಮ್ಯಾಟಿಕ್ ಮಾಪ್, ಬ್ಯಾಟರಿ ಮೂಲಕ ಕೆಲಸ ಮಾಡುತ್ತದೆ. ಈ ಮಾಪ್ಗೆ ಅಳವಡಿಸಿರುವ ಸಣ್ಣ ಹ್ಯಾಂಡಲ್ ಅನ್ನು ಹಿಡಿದುಕೊಂಡು ಮನೆಯಲ್ಲಿ ಓಡಾಡಿದರೆ ಸಾಕು ಇಡೀ ಮನೆ ಚಕಾಚಕ್ ಎಂದು ಹೊಳೆಯುತ್ತದೆ. ಟೇಬಲ್, ಸೋಫಾಗಳ ಕೆಳಗೆ, ಯಾವ ಮೂಲೆಗಳಾದರೂ ಸರಿ ಸುಲಭವಾಗಿ ಹೋಗಿ ಕ್ಲೀನ್ ಮಾಡಬಹುದು. ಇದರ ಮೇಂಟೆನೆನ್ಸ್ ಸಹ ಬಹಳ ಸುಲಭ. ಅರ್ಧ ಲೀಟರ್ ನೀರಿನಲ್ಲಿ ಡ್ಯೂಪ್ಲೆಕ್ಸ್ ಮನೆಯಲ್ಲಿ ಸ್ವಚ್ಛವಾಗಿ ಒರೆಸಿ ಓರಣ ಮಾಡುತ್ತದೆ.
ರೊಬೊಟಿಕ್ ಮಾಪ್ಗೆ 30 ರಿಂದ 50 ಸಾವಿರ ಬೆಲೆ ಇದೆ. ಆದರೆ ಅಗಾರೊ ರಿಗೆನ್ಸಿಯ ಆಟೊಮ್ಯಾಟಿಕ್ ಮಾಪ್ನ ಬೆಲೆ ಕೇವಲ 4 ಸಾವಿರ ರೂಪಾಯಿ. ಇದರ ಅಸಲಿ ಬೆಲೆ ಸುಮಾರು 9500 ಆದರೆ ಈಗ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮರೆ ಒರೆಸುವ ಹೆಣ್ಣು ಮಕ್ಕಳ ಶ್ರಮವನ್ನು 90% ಕಡಿಮೆ ಮಾಡುವ ಈ ಆಟೊಮ್ಯಾಟಿಕ್ ಮಾಪ್ ಅನ್ನು ಮನೆ ಒಡೆತಿಯರಿಗೆ ಉಡುಗೊರೆಯಾಗಿ ನೀಡಬಹುದು. ಅಗಾರೊ ರಿಗೆನ್ಸಿಯ ಆಟೊಮ್ಯಾಟಿಕ್ ಮಾಪ್ ನ ಲಿಂಕ್ ಇಲ್ಲಿದೆ. ಈ ಲಿಂಕ್ನಿಂದ ಖರೀದಿಸಿದರೆ ರಿಯಾಯಿತಿ ಸಹ ದೊರೆಯಲಿದೆ.