Innovation: ಕನ್ನಡಕ ಧರಿಸುವವರಿಗೊಂದು ಶುಭ ಸುದ್ದಿ: ಬಂದಿದೆ ಐ ಡ್ರಾಪ್ಸ್

0
85
Innovation

Innovation

ದೃಷ್ಟಿ ದೋಷ ಸಮಸ್ಯೆ ಪ್ರಪಂಚದಲ್ಲಿ ಅತಿ ಹೆಚ್ಚು ಮಂದಿ ಎದುರಿಸುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಕನ್ನಡಕ ಹಾಗೂ ದುಬಾರಿ ಶಸ್ತ್ರಚಿಕಿತ್ಸೆಯ ಹೊರತಾಗಿ ಇನ್ಯಾವುದೇ ಚಿಕಿತ್ಸೆ ಇಲ್ಲ. ಅದರಲ್ಲೂ ಶಸ್ತ್ರ ಚಿಕಿತ್ಸೆ ಸಹ ಕೆಲವರಿಗಷ್ಟೆ ಮಾಡಲಾಗುತ್ತದೆ‌. ಆದರೆ ಈಗ ಕಣ್ಣಿಗೆ ಹಾಕುವ ಸರಳವಾದ ಡ್ರಾಪ್ ಅಥವಾ ಲಸಿಕೆಯೊಂದು ಮಾರುಕಟ್ಟೆಗೆ ಬಂದಿದ್ದು ಇದರಿಂದ ವಯೋ ಸಹಜ ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮುಕ್ತಿ ದೊರಕಲಿದೆ.

ಮುಂಬೈನ ಎಂಟೋಡ್ (ENTOD) ಫಾರ್ಮಾಸುಟಿಕಲ್ ಸಂಸ್ಥೆ ಐ ಡ್ರಾಪ್ ಒಂದನ್ನು ಕಂಡು ಹಿಡಿದಿದ್ದು ಈ ಐ ಡ್ರಾಪ್ ಬಳಸಿದರೆ ಕನ್ನಡಕ ಧರಿಸುವ ಅಗತ್ಯ ಇರುವುದಿಲ್ಲ. ಆದರೆ ಈ ಐ ಡ್ರಾಪ್, ಸನಿಹ ದೃಷ್ಟಿ ದೋಷ ಇರುವವರಿಗಷ್ಟೆ ಸೂಕ್ತ. ದೂರ ದೃಷ್ಟಿ ದೋಷ ಇರುವವರಿಗೆ ಇದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ.

40 ರ ವಯಸ್ಸು ದಾಟಿದವರಿಗೆ ಸಹಜವಾಗಿಯೇ ದೃಷ್ಟಿ ದೋಷದ ಸಮಸ್ಯೆ ಕಾಡಲು ಆರಂಭವಾಗುತ್ತದೆ. ಹತ್ತಿರದ ವಸ್ತುಗಳು ಸರಿಯಾಗಿ ಕಾಣುವುದಿಲ್ಲ‌. ವಿಶೇಷವಾಗಿ ಏನನ್ನಾದರೂ ಓದಬೇಕೆಂದರೆ ಕಷ್ಟ ಪಡಬೇಕಾಗುತ್ತದೆ. ಅಂಥಹವರಿಗೆ ಈ ಐ ಡ್ರಾಪ್ ವರದಾನವಾಗಲಿದೆ. ಐ ಡ್ರಾಪ್ ಬಳಸಿದರೆ ಓದುವ ಸಮಯದಲ್ಲಿ ಅಥವಾ ಮೊಬೈಲ್ ಬಳಸುವ ಸಮಯದಲ್ಲಿ ಕನ್ನಡ ಬಳಸಬೇಕಾದ ಅವಶ್ಯಕತೆ ಇರುವುದಿಲ್ಲ, ಮಾತ್ರವಲ್ಲದೆ ಈ ಐ ಡ್ರಾಪ್, ಕಣ್ಣಿಗೆ ಅಗತ್ಯ ತೇವಾಂಶವನ್ನು ಸಹ ನೀಡುವ ಕಾರಣ ಕಣ್ಣಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ.

Jeff Bezos: ವಿಶ್ವದ ಶ್ರೀಮಂತ ವ್ಯಕ್ತಿಯಿಂದ ಅತ್ಯಂತ ವೇಗದ ವಿಮಾನ ಖರೀದಿ ಇತರೆ ವಿಶೇಷತೆಗಳೇನು?

ಮುಂಬೈನ ಎಂಟೋಡ್ (ENTOD) ಫಾರ್ಮಾಸುಟಿಕಲ್ ಸಂಸ್ಥೆ ಐ ಡ್ರಾಪ್’ಗೆ ‘ಪ್ರೆಸ್ ವು ಐ ಡ್ರಾಪ್’ ಎಂದು ಹೆಸರಿಡಲಾಗಿದ್ದು, ಈ ಐ ಡ್ರಾಪ್, ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI), ಸೆಂಟ್ರಲ್ ಡ್ರಗ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO), ಸಬ್ಜೆಕ್ಟ್ ಎಕ್ಸ್’ಪರ್ಟ್ ಕಮಿಟಿ (SEC) ಗಳ ಅನುಮತಿಯನ್ನು ಪಡೆದಿದ್ದು, ಭಾರತದಲ್ಲಿ ಈ ಐ ಡ್ರಾಪ್ ಅನ್ನು ಬಳಸುವ ಪರವಾನಗಿ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here