Radhika Kumaraswamy: ರಾಧಿಕಾ ಕುಮಾರಸ್ವಾಮಿ ಮಗಳನ್ನು ಕ್ರೀಡಾಪಟು ಮಾಡುವ ಆಸೆಯಂತೆ ಅಪ್ಪನಿಗೆ

0
136
Radhika Kumaraswamy

Radhika Kumaraswamy

ನಟಿ ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನಟಿಸುತ್ತಿದ್ದಾರೆ. ಈಗಲೂ ಸಹ ಬೇಡಿಕೆ ಉಳಿಸಿಕೊಂಡಿರುವ ನಟಿ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೃತ್ತಿ ಜೀವನ ವೈಕ್ತಿಕ ಜೀವನ ಎರಡಲ್ಲೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. ಅಂದಹಾಗೆ ರಾಧಿಕಾ ಕುಮಾರಸ್ವಾಮಿಗೆ ಮಗಳೊಬ್ಬಳು ಇದ್ದು, ಒಬ್ಬರೇ ಮಗಳನ್ನು ಬೆಳೆಸುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಟನೆಯ ‘ಬೈರಾದೇವಿ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ತಯಾರಾಗಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಾಧಿಕಾ ಕುಮಾರಸ್ವಾಮಿ ಬ್ಯುಸಿಯಾಗಿದ್ದು, ಟಿವಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನಗಳನ್ನು ಸಹ ರಾಧಿಕಾ ಕುಮಾರಸ್ವಾಮಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವೈಕ್ತಿಕ ಜೀವನದ ಬಗ್ಗೆಯೂ ರಾಧಿಕಾ ಮಾತನಾಡಿದ್ದಾರೆ.

ರಾಧಿಕಾ ಕುಮಾರಸ್ವಾಮಿಯ ಮಗಳನ್ನು ಒಳ್ಳೆಯ ಟೆನ್ನಿಸ್ ಆಟಗಾರ್ತಿಯನ್ನಾಗಿ ಮಾಡಬೇಕು ಎಂಬ ಆಸೆಯನ್ನು ಅವರ ತಂದೆ ಹೊಂದಿದ್ದಾರಂತೆ. ಮಗಳಿಗೆ ಒಳ್ಳೆಯ ಕಡೆ ತರಬೇತಿಯನ್ನು ಸಹ ಕೊಡಿಸುತ್ತಿದ್ದಾರಂತೆ. ಹೀಗೆಂದು ಸ್ವತಃ ರಾಧಿಕಾ ಕುಮಾರಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ‌

ರಾಧಿಕಾ ಕುಮಾರಸ್ವಾಮಿ ಬಿಡುವಿನ ಸಮಯವನ್ನು ತಮ್ಮ ಮಗಳು ಹಾಗೂ ಕುಟುಂಬದ ಜೊತೆಗೆ ಕಳೆಯಲು ಹೆಚ್ಚು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. ನಾನು ಕುಟುಂಬದ ಜೊತೆಗೆ ಹೆಚ್ಚು ಕಾಲ ಕಳೆಯುತ್ತೇವ ನಾವು ದೇವಸ್ಥಾನ, ಪ್ರವಾಸ, ಹೊರ ದೇಶಕ್ಕೆ ಪ್ರವಾಸ ಹೋಗುತ್ತಿರುತ್ತೇವೆ ಎಂದಿದ್ದಾರೆ. ಅದರಲ್ಲೂ ಮಗಳೊಂದಿಗೆ ಸಮಯ ಕಳೆಯುವುದೆಂದರೆ ರಾಧಿಕಾಗೆ ಬಹ ಇಷ್ಟವಂತೆ.

ಮಗಳ ಬಗ್ಗೆ ಇರುವ ಆಸೆ ಕನಸಿನ ಬಗ್ಗೆ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, ಆಕೆ ಕ್ರೀಡಾಪಟು ಆಗಲಿ ಎಂಬ ಕನಸು ಆಗಬೇಕು ಎಂಬ ಆಸೆ ಅವರ ಅಪ್ಪನವರದ್ದು, ಮಗಳನ್ನು ಒಳ್ಳೆಯ ಟೆನ್ನಿಸ್ ಪ್ಲೇಯರ್ ಮಾಡಬೇಕು ಎಂಬ ಆಸೆ ಅವರದ್ದು, ಅದೇ ರೀತಿ ಮಗಳು ಟೆನ್ನಿಸ್ ತರಬೇತಿ ಪಡೆಯುತ್ತಿದ್ದು, ಟೆನ್ನಿಸ್ ಆಟಗಾರ್ತಿ ಆಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾಳೆ ಎಂದಿದ್ದಾರೆ.

Gautam Adani: ಭಾರತೀಯ ಉದ್ಯಮಿ ಅದಾನಿ ವಿರುದ್ಧ ವಿದೇಶದಲ್ಲಿ‌ ತೀವ್ರ ಪ್ರತಿಭಟನೆ

ಅಂದಹಾಗೆ ರಾಧಿಕಾ ಕುಮಾರಸ್ವಾಮಿ ಖಾಸಗಿ ಜೀವನದ ಬಗ್ಗೆ ರಾಜ್ಯದ ಜನರಿಗೆ ಬಹುತೇಕ ಗೊತ್ತಿರುವ ಸಂಗತಿಯೇ. ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಕುಮಾಸ್ವಾಮಿ ಅವರೊಟ್ಟಿಗೆ ಸಹಬಾಳ್ವೆ ನಡೆಸಿದ್ದರು. ಇಬ್ಬರ ಪ್ರೀತಿಯ ಫಲವಾಗಿ ಒಂದು ಹೆಣ್ಣು ಮಗು ಅವರಿಗಿದೆ. ಅದೇ ಮಗುವಿನ ವಿಚಾರವನ್ನು ರಾಧಿಕಾ ಕುಮಾರಸ್ವಾಮಿ ಇದೀಗ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here