weekly Horoscope
ಇದು ಸಪ್ಟೆಂಬರ್ ತಿಂಗಳ ಎರಡನೇ ವಾರ. ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 15 ರವರೆಗೆ ಇರಲಿದೆ. ಕೆಲವು ಗ್ರಹಗಳಲ್ಲಿ ಚಲನೆ ಕಂಡು ಬರಲಿದೆ. ಗ್ರಹಗಳ ಈ ಚಲನೆಯಿಂದಾಗಿ ಹಲವು ರಾಶಿಗಳ ಭವಿಷ್ಯದಲ್ಲಿ ಬದಲಾವಣೆ ಆಗಲಿದೆ.
ಮೇಷ ರಾಶಿ
ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಮೇಷ ರಾಶಿಗೆ ಶುಭ ಫಲ ಇದೆ. ಎಲ್ಲ ದಿಕ್ಕುಗಳಿಂದಲೂ ಶುಭ, ಸುಖ ಲಭ್ಯವಾಗುವುದು. ಕೆಲವು ರಿಪೇರಿ ಕೆಲಸಗಳನ್ನು ಈ ವಾರ ಮಾಡಬೇಕಾದೀತು. ಹೊಸ ಆದಾಯ ಮೂಲಗಳು ಪ್ರಾರಂಭವಾಗುತ್ತವೆ. ನಿಮ್ಮ ಸಾಮರ್ಥ್ಯದ ಪರಿಚಯ ಇತರರಿಗೆ ಆಗಲಿದೆ. ದೇವರ ಸ್ಮರಣೆ ಮರೆಯಬೇಡಿ.
ವೃಷಭ ರಾಶಿ
ಮಿಶ್ರಫಲ ಈ ವಾರ ವೃಷಭ ರಾಶಿಗೆ ಇದೆ. ನಿಮ್ಮ ಆಲೋಚನೆಗಳು ದಿಕ್ಕು ತಪ್ಪಲಿವೆ. ನಂಬಿದವರ ಮೇಲೆ ಅನುಮಾನ ಮೂಡಲಿದೆ. ಸಂಗಾತಿ ಜೊತೆಗೆ ಭಿನ್ನಾಭಿಪ್ರಾಯ ಮೂಡಲಿದೆ. ಕುಟುಂಬದ ಮೇಲೆ ಬೇಸರ. ಉದ್ಯೋಗದಲ್ಲಿ ಸ್ಥಿರತೆ ಇದ್ದರೂ ನೆಮ್ಮದಿ ಇರದು, ಕಾಲು ನೋವು ನಿಮ್ಮನ್ನು ಕಾಡಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಅಶುಭ ಶಖೆ ಮುಂದುವರೆದಿದೆ. ಕೆಲಸದಲ್ಲಿ ಹೆಚ್ಚು ಕಷ್ಟಪಡಲಿದ್ದೀರಿ, ಆದರೆ ಅದರ ಫಲ ದೊರಕುವುದಿಲ್ಲ. ಪತ್ನಿಯೊಟ್ಟಿಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಕುಟುಂಬದಲ್ಲಿ ಹೊಂದಾಣಿಕೆ ಕಷ್ಟ ಆಗಲಿದೆ. ಪೋಷಕರ ಮೇಲೆ ಮುನಿಸು ಮೂಡಲಿದೆ. ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಕೃಷದಿಂದ ಕಾಣುವರು. ನಿಮ್ಮ ಯೋಚನೆಗಳಲ್ಲಿ ಸಾಕಷ್ಟು ನಕಾರಾತ್ಮಕತೆ ಇರಲಿದೆ. ಧ್ಯಾನದ ಮೊರೆ ಹೋಗಿ. ಸಾಧ್ಯವಾದಷ್ಟು ಬ್ಯುಸಿಯಾಗಿರಿ.
ಕರ್ಕಾಟಕ ರಾಶಿ
ಈ ವಾರ ಕರ್ನಾಟಕಕ್ಕೆ ಮಿಶ್ರ ಫಲ ಇದೆ. ಕೆಲವು ಕೆಲಸಗಳಲ್ಲಿ ನಿಮಗೆ ನಷ್ಟ ಆಗಲಿದೆ. ಮದುವೆ ಯೋಗ ಸದ್ಯಕ್ಕೆ ಇಲ್ಲ, ಪ್ರಯತ್ನ ನಿಲ್ಲಿಸದಿರಿ, ಶತ್ರುಗಳ ಕಾಟ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ವಿರೋಧ ಎದುರಿಸಬೇಕಾಗುತ್ತದೆ. ಪ್ರತಿಭೆ ತೋರಿಸಲು ಅವಕಾಶ ಸಿಗುವುದಿಲ್ಲ. ಮನೊರಂಜನಾ ಕ್ಷೇತ್ರದಲ್ಲಿರುವವರಿಗೆ ಕೆಲಸದ ಕೊರತೆ ಉಂಟಾಗಲಿದೆ. ದೇವರ ಪೂಜೆ ಮಾಡಿ.
ಸಿಂಹ ರಾಶಿ
ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಸಿಂಹ ರಾಶಿಗೆ ಮಿಶ್ರಫಲ ಇದೆ. ಈ ವಾರ ಆಯಾಸ ಕಾಣಿಸಿಕೊಳ್ಳಲಿದೆ. ಅನಾರೋಗ್ಯ ಕಾಣಿಸಿಕೊಂಡರೂ ನಂತರ ಸರಿ ಹೋಗಲಿದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಲಿದೆ. ಅಲೆದಾಡಿದರೂ ನಿಗದಿತ ಕೆಲಸ ಸಿಗಲು, ಹಾಗೆಂದು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ಕೆಲಸದ ಮೇಲೆ ಹೊರ ಊರಿಗೆ ಹೋಗಬೇಕಾದೀತು. ಕುಟುಂಬದಿಂದ ದೂರ ಇರಲಿದ್ದೀರಿ.
ಕನ್ಯಾ ರಾಶಿ
ಈ ವಾರ ಮಿಶ್ರಫಲಗಳಿವೆ. ವಾರದ ಆರಂಭದಲ್ಲಿ ಶುಭ ಸುದ್ದಿಗಳು ಸಿಗಲಿವೆ. ವಿವಾಹ ಮಾತುಕತೆಗೆ ಕೆಲವರು ಅಡ್ಡಿ ಆಗುವರು. ಕೆಲವು ವ್ಯಾಪಾರದಲ್ಲಿ ಲಾಭ ಸಿಗದು. ಕಾರ್ಯಕ್ರಮಗಳಲ್ಲಿ ಗೌರವ ಸಿಗುತ್ತದೆ, ಸನ್ಮಾನ ಸಹ ಮಾಡುತ್ತಾರೆ. ಶತ್ರುಕಾಟ ಈ ವಾರ ಇರದು. ಸಂಬಂಧಿಕರ ಬಗ್ಗೆ ಬೇಸರ ಮೂಡಲಿದೆ. ಮನೆ ದೇವರ ಪೂಜೆ ಸಲ್ಲಿಸಿ.
ತುಲಾ ರಾಶಿ
ಈ ವಾರ ತುಲಾ ರಾಶಿಗೆ ಅಶುಭ ಫಲಗಳೇ ಹೆಚ್ಚಾಗಿದೆ. ಮಾಡಿದ ಕೆಲಸಕ್ಕೆ ಫಲ ಸಿಗುವುದಿಲ್ಲ, ಅಂದುಕೊಂಡ ಫಲಿತಾಂಶ ಬರುವುದಿಲ್ಲ. ಶ್ರಮ ವ್ಯಯವಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ, ಸುಸ್ತಾದ ಅನುಭವ ಆಗಲಿದೆ. ಆತ್ಮೀಯರೊಟ್ಟಿಗೆ ವಾಗ್ವಾದ ನಡೆಸಲಿದ್ದೀರಿ. ವ್ಯಾಪಾರದಲ್ಲಿ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದೀರಿ. ಹಣವನ್ನು ಕಳೆದುಕೊಳ್ಳಲಿದ್ದೀರಿ.
ವೃಶ್ಚಿಕ ರಾಶಿ
ಸೆಪ್ಟೆಂಬರ್ ತಿಂಗಳ ಎರಡನೇ ವಾರ ವೃಶ್ಚಿಕ ರಾಶಿಗೆ ಶುಭ ಫಲ ಸಿಗಲಿದೆ. ಕಂಡ ಕನಸುಗಳು ಕೆಲವು ನನಸಾಗಲಿವೆ. ಅಂದುಕೊಂಡಿದ್ದ ಕೆಲಸಗಳು ಸುಲಭವಾಗಿ ಆಗಲಿವೆ. ಐಶಾರಾಮಿ ಜೀವನ ನಡೆಸಲಿದ್ದೀರಿ, ಭೋಗ ವಸ್ತುಗಳನ್ನು ಅನುಭವಿಸಲಿದ್ದೀರಿ. ವಿದೇಶಕ್ಕೆ ಪ್ರಯಾಣ ಬೆಳೆಸುವ ಯೋಚನೆ ಮಾಡಲಿದ್ದೀರಿ. ಸರ್ಕಾರಿ ಕೆಲಸಗಳು ಸುಲಭವಾಗಿ ನಡೆಯಲಿವೆ. ತುಸು ಹಣ ಖರ್ಚಾಗುತ್ತದೆಯಾದರೂ ಮನಸ್ಸು ಆಹ್ಲಾದವಾಗಿ ಇರಲಿದೆ.
ಧನಸ್ಸು ರಾಶಿ
ಸಪ್ಟೆಂಬರ್ ತಿಂಗಳ ಎರಡನೇ ವಾರ ಧನಸ್ಸು ರಾಶಿಗೆ ಅಶುಭ ಇರಲಿದೆ. ಎಲ್ಲರ ಬಗ್ಗೆ ಬೇಸರ ಆಗಲಿದೆ. ಕೆಲಸದ ಬಗ್ಗೆ ಬೇಸರ ಮೂಡಲಿದೆ. ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕರಿದ್ದೀರಿ. ಯಾವುದು ಬೇಕು, ಬೇಡವಾದುದು ಯಾವುದು ಎಂಬುದು ನಿಮಗೆ ತಿಳಿಯದೇ ಆಗಲಿದೆ. ಮನೆಯ ಪರಿಸ್ಥಿತಿ ಹದಗೆಡಲಿದೆ. ಮನೆಯಲ್ಲಿ ಸತತ ಜಗಳ-ಗಲಾಟೆ ಮುನಿಸುಗಳು ನಡೆಯಲಿವೆ. ರಾಜಕಾರಣಿಗಳಿಗೆ ಸ್ಥಾನ ಪಲ್ಲಟ ಆಗಲಿದೆ. ಮಾತಿನಿಂದ ಸಮಸ್ಯೆಗೆ ಸಿಲುಕಲಿದ್ದೀರಿ.
ಮಕರ ರಾಶಿ
ಮಕರ ರಾಶಿಗೆ ಈ ವಾರ ಮಿಶ್ರಫಲ ಸಿಗಲಿದೆ. ಅಂದುಕೊಂಡ ಮಟ್ಟದಲ್ಲಿ ಪ್ರಗತಿ ಸಿಗದು. ಕೆಲವರ ಮೇಲೆ ಮುನಿಸು ಮುಂದುವರೆಸಲಿದ್ದೀರಿ. ಮನಸ್ಸಿಗೆ ಸತತವಾಗಿ ಬೇಸರ ಆಗಲಿದೆ. ಉತ್ಸಾಹವನ್ನು ಕಳೆದುಕೊಳ್ಳಲಿದ್ದೀರಿ. ವಿವಾಹ ಮಾತುಕತೆಯಲ್ಲಿ ಪ್ರಗತಿ ಕಾಣಿಸುವುದು. ಯಾವುದೇ ದೊಡ್ಡ ನಿರ್ಣಯ ಮಾಡುವ ಮುನ್ನ ಯೋಚಿಸಿ ಮಾಡಿ. ಅದೃಷ್ಟ-ದುರಾದೃಷ್ಟ ಒಟ್ಟಿಗೆ ಇರಲಿದೆ ಎಚ್ಚರ.
ಕುಂಭ ರಾಶಿ
ಕುಂಭ ರಾಶಿಗೆ ಈ ವಾರ ಅಶುಭ ಫಲ ಇದೆ. ವಾಹನ ಓಡಿಸುವಾಗ, ವಾಹನದಲ್ಲಿ ಕೂತಿರುವಾಗ ಎಚ್ಚರವಾಗಿರಿ. ಕೆಲವು ಕ್ಷೇತ್ರದವರಿಗೆ ಅವಕಾಶ ಇಲ್ಲದೇ ಆಗಲಿದೆ. ಕಲಾವಿದರಿಗೆ ಬಹಳ ಕಷ್ಟದ ಸಮಯ. ಅನಾರೋಗ್ಯ ಕಾಡಲಿದೆ. ವೈದ್ಯರ ಸಲಹೆ ಬೇಕೇ ಬೇಕಾಗುತ್ತದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಅಸಮಾಧಾನ ಮೂಡಲಿದೆ. ರಾಜಕೀಯ ನಾಯಕರಿಗೆ ಒತ್ತಡಗಳು ಎದುರಾಗುತ್ತವೆ. ಕೆಲವರ ಬಗ್ಗೆ ಬೇಸರ ಮೂಡಲಿದೆ. ನಿಂದನೆಗೆ ಸಹ ಗುರಿಯಾಗಲಿದ್ದೀರಿ.
ಮೀನ ರಾಶಿ
ಮೀನ ರಾಶಿಗೆ ಮಿಶ್ರಫಲ ಮುಂದುವರೆದಿದೆ. ಕೆಲಸದಲ್ಲಿ ಬದಲಾವಣೆ ಆಗಲಿದೆ. ಕೆಲವರ ಬಗ್ಗೆ ಅನುಮಾನ ಮೂಡಲಿದೆ, ನಿಮ್ಮ ಬಗ್ಗೆಯೂ ಬೇಸರ ಆಗಲಿದೆ. ಹಣಕಾಸಿನ ತೊಂದರೆ ಅನುಭವಿಸಲಿದ್ದೀರಿ, ಇದರಿಂದ ಬೇಸರ ಅನುಭವಿಸಲಿದ್ದೀರಿ. ಅಡ್ಡ ದಾರಿ ಹಿಡಿಯುವ ಆಲೋಚನೆ ಬೇಡ. ಹಣಕಾಸಿನ ಸಮಸ್ಯೆ ನೀಗಿಸುವ ಕಡೆ ಕೆಲಸ ಮಾಡಿ.