Health: ಬೆಳಿಗ್ಗೆ ಏಳಲು ಅಲಾರಾಮ್ ಇಟ್ಟುಕೊಳ್ಳುತ್ತೀರ? ಯಾವುದು ಆರೋಗ್ಯಕ್ಕೆ ಸೂಕ್ತ?

0
287
Health

Health

ವಾಚುಗಳು ಪ್ರಾರಂಭವಾಗಿ ಅದೆಷ್ಟೋ ವರ್ಷಗಳ ಬಳಿಕ ಅಲಾರಾಂಗಳು ಪ್ರಾರಂಭವಾದವು. ಮನುಷ್ಯ ಯಾವಾಗ ಸೋಮಾರಿತನ ರೂಢಿಸಿಕೊಂಡನೋ ಬಹುಷಃ ಆವಾಗ ಅಲಾರಾಮ್​ಗಳನ್ನು ಕಂಡು ಹಿಡಿದಿದ್ದರಬಹುದೇನೋ. ಏನೇ ಆಗಲಿ, ಈಗಂತೂ ಅಲಾರಾಂಗಳು ಬಹಳ ಉಪಯೋಗಕಾರಿ, ಈ ವೇಗದ ಜೀವನ ಶೈಲಿಯಲ್ಲಿ ನಿದ್ದೆಯಿಂದ ಏಳಲು ಅಲಾರಾಂ ಬೇಕು, ನಿಗದಿತ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು, ಜ್ಞಾಪಿಸಲು ಅಲಾರಾಂಗಳು ಬೇಕು. ಅಲಾರಾಂಗಳ ಪ್ರಮುಖ ಬಳಕೆ ನಿದ್ದೆಯಿಂದ ಎಚ್ಚರಿಸಲು ಆದರೆ ಹೀಗೆ ನಿದ್ದೆಯಿಂದ ಎಚ್ಚರಿಸುವ ಅಲಾರಾಂಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಆದರೆ ಅಲಾರಂ ಬದಲಿಗೆ ಯಾವುದನ್ನು ಬಳಸುವುದು ಸೂಕ್ತ ಎಂದು ಸಹ ವಿಜ್ಞಾನಿಗಳು ವಿವರಿಸಿದ್ದಾರೆ.

ಅಲಾರಂ ಶಬ್ದ ನಮಗೆ ಗೊತ್ತಿರುವಂತೆ ಹಠಾತ್ತನೆ ಮೊಳಗಲು ಆರಂಭವಾಗುತ್ತದೆ. ಅದರ ಶಬ್ದ ತುಸು ಜೋರಾಗಿರುತ್ತದೆ. ಅದು ಮಲಗಿರುವ ವ್ಯಕ್ತಿಗೆ ಶಾಕ್ ನೀಡುವ ರೀತಿಯ ಶಬ್ದವನ್ನು ಹೊಂದಿರುತ್ತದೆ. ಆದರೆ ಈ ರೀತಿಯ ಅಲಾರಾಂ ಶಬ್ದ ಬಳಸುವುದು ವ್ಯಕ್ತಿಯಲ್ಲಿ ಹೃದಯಘಾತ, ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಮೆದುಳಿನ ಕ್ರಿಯೆಗಳಲ್ಲಿ ವ್ಯತ್ಯಾಸವುಂಟಾಗಲು ಕಾರಣವಾಗಬಹುದಂತೆ. ‘ಕಾರ್ಡಿವೆಸ್ಕ್ಯುಲಾರ್’ ಸಮಸ್ಯೆ ಉಳ್ಳವರಿಗಂತೂ ಈ ಅಲಾರಾಂಗಳು ಬಹಳ ಅಪಾಯಕಾರಿಯಂತೆ.

ಅಲಾರಾಂ ಶಬ್ದದಿಂದ ಎಚ್ಚರವಾಗುವವರ ರಕ್ತದ ಒತ್ತಡ ಮತ್ತು ಹೃದಯ ಬಡಿತ ಸುಮಾರು 74% ಹೆಚ್ಚಾಗುವುದನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ. ಅಲಾರಾಂ ಬಳಕೆಯಿಂದ ಹಠಾತ್ತನೆ ನಿದ್ದೆಯಿಂದ ಎಚ್ಚರಗೊಳ್ಳುವುದು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಬೀರುವುದಲ್ಲದೆ, ಆ ವ್ಯಕ್ತಿಯ ಭಾವನಾತ್ಮಕ ವ್ಯಕ್ತಿತ್ವದಲ್ಲಿಯೂ ಬದಲಾವಣೆ ಆಗುತ್ತದೆ. ಹಠಾತ್ತನೆ ನಿದ್ದೆಯನ್ನು ಮುರಿದುಕೊಳ್ಳುವ ವ್ಯಕ್ತಿಯಗಿಂತಲೂ, ಸಹಜವಾಗಿ ಎಚ್ಚರವಾಗುವ ವ್ಯಕ್ತಿಯು ಸಂತೋಷದಿಂದ ದಿನ ಕಳೆಯುತ್ತಾನೆ ಎನ್ನುತ್ತಾರೆ ವಿಜ್ಞಾನಿಗಳು.

ಹಾಗಿದ್ದರೆ ಈ ಅಲಾರಂಗೆ ಪರ್ಯಾಯವೇನು?

ಹೀಗೆ ಹಠಾತ್ತನೆ ನಿದ್ರೆಯಿಂದ ಎಚ್ಚರಿಸುವ ಅಲಾರಂಗಳಿಗೆ ಪರ್ಯಾಯವೂ ಇದೆ. ಅದುವೇ ‘ಸ್ನೂಜ್’ (Snooze). ಐಫೋನ್​ಗಳಲ್ಲಿ ಮೊದಲಿನಿಂದಲೂ ಈ ಸ್ನೂಜ್ ಆಯ್ಕೆ ಇದೆ. ಬೇರೆ ಮೊಬೈಲ್​ಗಳಲ್ಲಿಯೂ ಈ ಸ್ನೂಜ್ ಆಯ್ಕೆ ಬಳಸಬಹುದು. ಅಲಾರಂ ಶಬ್ದಗಳಂತೆ ಹಠಾತ್ತನೆ ಇವು ಎಚ್ಚರಿಸುವುದಿಲ್ಲ. ಬದಲಿಗೆ ಕಡಿಮೆ ಶಬ್ದವನ್ನು ಒಂದೇ ಶ್ರುತಿಯಲ್ಲಿ ಪ್ರಸಾರ ಮಾಡುತ್ತವೆ, ಈ ಶಬ್ದ ನಿದ್ರೆಯಲ್ಲಿರುವ ಮೆದುಳನ್ನು ನಿಧಾನಕ್ಕೆ ಸಕ್ರಿಯಗೊಳಿಸುತ್ತವೆ. ಇದು ಮಲಗಿರುವ ವ್ಯಕ್ತಿಗೆ ಶಾಕ್ ನೀಡಿದ ಅನುಭವ ಕೊಡುವುದಿಲ್ಲ. ಬದಲಿಗೆ ನಿಧಾನಕ್ಕೆ ಎಚ್ಚರಗೊಳ್ಳುತ್ತಾನೆ.

Sloth Virus: ಅಮೆರಿಕ, ಯೂರೋಪ್​ಗಳಿಗೆ ದಾಳಿ ಮಾಡಿದೆ ನಿಗೂಢ ‘ಸ್ಲಾತ್ ವೈರಸ್’ ಚಿಕಿತ್ಸೆಯೇ ಇಲ್ಲ

ಅಲಾರಾಂ ಅಥವಾ ಸ್ನೂಜ್ ಎರಡನ್ನೂ ಬಳಸದೆ ದೇಹಕ್ಕೆ ಅವಶ್ಯವಾದಷ್ಟು ನಿದ್ರೆಯನ್ನು ಪೂರ್ಣಗೊಳಿಸಿ ಸಹಜವಾಗಿಯೇ ಎಚ್ಚರವಾಗುವುದು ಬಹಳ ಉತ್ತಮ ಆಯ್ಕೆ ಆಗಬಲ್ಲದು. ಅದಲ್ಲದೆ ಹೋದರೆ ಸ್ನೂಜ್ ಉತ್ತಮ ಆಯ್ಕೆ ಆಗಬಲ್ಲದು. ಆದರೆ ಅಲಾರಾಂ ಬೇಡ ಎನ್ನುತ್ತಾರೆ ವಿಜ್ಞಾನಿಗಳು.

LEAVE A REPLY

Please enter your comment!
Please enter your name here