Bengaluru
ಗಣೇಶ ಚತುರ್ಥಿ ಮುಗಿದಿದ್ದು, ಮನೆಯಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಿದ ಬಹುತೇಕರು ಒಂದೇ ದಿನಕ್ಕೆ ಗಣೇಶನ ವಿಸರ್ಜಿಸುತ್ತಾರೆ. ಮನೆಯಲ್ಲಿ ಪ್ರತಿಷ್ಟಾಪನೆ ಮಾಡುವವರು, ದೇವರಿಗೆ ಚಿನ್ನದ ಆಭರಣಗಳನ್ನು ತೊಡಿಸಿ ಸಂಭ್ರಮಿಸುವ ಪ್ರತೀತಿ ಇದೆ. ಹಾಗೆಯೇ ಬೆಂಗಳೂರಿನ ಕುಟುಂಬವೊಂದು ಗಣೇಶನ ಮೂರ್ತಿಗೆ ನಾಲ್ಕು ಲಕ್ಷ ಮೌಲ್ಯದ ಚಿನ್ನದ ಸರವನ್ನು ತೊಡಿಸಿ ಅಲಂಕಾರ ಮಾಡಿತ್ತು. ಆದರೆ ವಿಸರ್ಜನೆ ಹೊತ್ತಿನಲ್ಲಿ ಚಿನ್ನದ ಸರದ ಸಮೇತ ಗಣೇಶನ ವಿಸರ್ಜನೆ ಮಾಡಿತ್ತು.
ಬೆಂಗಳೂರಿನ ಗೋವಿಂದರಾಜನಗರದ ರಾಮಯ್ಯ ಮತ್ತು ಉಮಾದೇವಿ ದಂಪತಿ ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಗೆ ಸುಮಾರು 60 ಗ್ರಾಂ ತೂಕದ ಚಿನ್ನದ ಸರವನ್ನು ತೊಡಿಸಿ ಅಲಂಕಾರ ಮಾಡಿದ್ದರು. ಗಣೇಶ ವಿಸರ್ಜಿಸಲು ಬಿಬಿಎಂಪಿ ಟ್ಯಾಂಕರ್ ಬಂದಾಗ, ಆ ಟ್ಯಾಂಕರ್ ನವರಿಗೆ ಗಣೇಶ ಮೂರ್ತಿಯನ್ನು ನೀಡಿ ಕೈ ಮುಗಿದು ಮನೆಗೆ ಬಂದು ಬಿಟ್ಟಿದ್ದಾರೆ. ಆದರೆ ಬಳಿಕ ಅವರಿಗೆ ನೆನಪಿಗೆ ಬಂದಿದೆ, ನಾವು ಗಣೇಶ ಮೂರ್ತಿಗೆ ತೊಡಿಸಿದ್ದ ಚಿನ್ನದ ಸರವನ್ನು ಬಿಚ್ಚಿಕೊಂಡಿಲ್ಲ ಎಂದು!
ಕೂಡಲೆ ಟ್ಯಾಂಕರ್ ಬಳಿ ಹೋಗಿ ಟ್ಯಾಂಕರ್ ನ ಹುಡುಗರಿಗೆ ಮಾಹಿತಿ ನೀಡಿದ್ದಾರೆ. ಆಗ ಗಣೇಶನ ಕೊರಳಲ್ಲಿ ಸರ ಇದ್ದಿದ್ದು ಗಮನಿಸಿದೆವು ಆದರೆ ಅದು ನಕಲಿ ಎಂದುಕೊಂಡು ನಾವು ಗಣೇಶನ ಮುಳುಗಿಸಿಬಿಟ್ಟೆವು ಎಂದಿದ್ದಾರೆ. ದಂಪತಿ, ಕೂಡಲೆ ಸ್ಥಳೀಯ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿ ಸಹಾಯಕ್ಕೆ ಮನವಿ ಮಾಡಿದ್ದಾರೆ. ಸ್ಥಳೀಯ ಶಾಸಕರ ಸಹಾಯವನ್ನೂ ಸಹ ಕೇಳಿದ್ದಾರೆ.
Crude Oil: ದಾಖಲೆ ಕುಸಿದ ಕಂಡ ಕಚ್ಚಾ ತೈಲ ಬೆಲೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿತ ಯಾವಾಗ?
ಬಳಿಕ ಟ್ಯಾಂಕರ್ ನ ಕಂಟ್ರ್ಯಾಕ್ಟರ್ ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ನಲ್ಲಿದ್ದ ಎಲ್ಲ ನೀರನ್ನು ಹೊರಕ್ಕೆ ಬಿಟ್ಟಿದ್ದಾರೆ. ಅದಾಗಲೇ ಸುಮಾರು 300 ಗಣಪತಿಯ ವಿಸರ್ಜನೆ ಮಾಡಿದ್ದ ಕಾರಣ ಟ್ಯಾಂಕರ್ ನಲ್ಲಿ ದೊಡ್ಡ ಪ್ರಮಾಣದ ಮಣ್ಣು ಸೇರಿಕೊಂಡಿತ್ತು. ಕೊನೆಗೆ ಸುಮಾರು ಹತ್ತು ಜನ ಹುಡುಗರನ್ನು ಬಿಟ್ಟು ಸುಮಾರು 10 ಗಂಟೆ ವರೆಗೆ ಹುಡುಕಾಡಿದ ಬಳಿಕ ಚಿನ್ನದ ಸರ ದೊರೆತಿದೆ. ಸರಕ್ಕಾಗಿ ಕಾಯುತ್ತಾ ಕೂತಿದ್ದ ದಂಪತಿ ಸರವನ್ನು ತೆಗೆದುಕೊಂಡು ಹೋಗಿದ್ದಾರೆ.