Engineer
ಭಾರತ ಎಂಜಿನಿಯರ್’ಗಳನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ವಿಶ್ವಮಟ್ಟದಲ್ಲಿ ಜನಪ್ರಿಯ. ಚೀನಾ ಬಿಟ್ಟರೆ ವರ್ಷಕ್ಕೆ ಅತಿ ಹೆಚ್ಚು ಮಂದಿ ಎಂಜಿನಿಯರ್ ಗಳು ಇರುವುದು, ಸೃಷ್ಟಿಯಾಗುತ್ತಿರುವುದು ಭಾರತದಲ್ಲಿ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಭಾರತದ ಎಂಜಿನಿಯರ್’ಗಳು ಕೆಲಸ ಮಾಡುತ್ತಿದ್ದಾರೆ. ಭಾರತದ ಎಂಜಿನಿಯರ್’ಗಳು ಗುಣಮಟ್ಟದ ಎಂಜಿನಿಯರ್’ಗಳೆಂದೇ ಹೆಸರು ಪಡೆದಿದ್ದಾರೆ. ಆದರೆ ಐದು ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಎಂಜಿನಿಯರ್ ಗಳ ದಾಖಲಾತಿಯಲ್ಲಿ ಕುಸಿತ ಕಂಡು ಬಂದಿದೆ.
ಕರ್ನಾಟಕ ಸೇರಿದಂತೆ ದೇಶದ ಹಲವು ಪ್ರಮುಖ ಕಾಲೇಜುಗಳಲ್ಲಿ ಈ ವರ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್’ಗೆ ದಾಖಲಾತಿ ಪಡೆದುಕೊಂಡಿಲ್ಲ, ಎಂಜಿನಿಯರಿಂಗ್ ಬದಲಿಗೆ ಬೇರೆ ಪದವಿಗಳತ್ತ ಮುಖ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ದಾಖಲಾತಿ ಕುಸಿತ ಆಗಿದ್ದು, ಪ್ರತಿ ಮೂರು ಎಂಜಿನಿಯರಿಂಗ್ ಸೀಟಿನಲ್ಲಿ ಒಂದು ಸೀಟು ಖಾಲಿ ಇದೆ! ಮಹಾರಾಷ್ಟ್ರದಲ್ಲಿ ಸುಮಾರು 15% ದಾಖಲಾತಿ ಕುಸಿತ ಕಂಡು ಬಂದಿದ್ದು, ಎಂಜಿನಿಯರಿಂಗ್ ಕಾಲೇಜುಗಳ ಆತಂಕಕ್ಕೆ ಕಾರಣವಾಗಿದೆ. ಬೇರೆ ಕೆಲ ರಾಷ್ಟ್ರಗಳಲ್ಲಿಯೂ ಸಹ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಏನೂ ಇಲ್ಲ.
ಬ್ರ್ಯಾಂಚ್ ಆಧಾರದಲ್ಲಿ ನೋಡುವುದಾದರೆ ಈ ಬಾರಿಯೂ ಸಹ ಅತಿ ಹೆಚ್ಚು ವಿಧ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ದಾಖಲಾತಿ ಪಡೆದುಕೊಂಡಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್’ಗೆ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿಧ್ಯಾರ್ಥಿಗಳು ಪದವಿಗಿಂತಲೂ ಕೋರ್ಸ್ ಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವುದು ಹಾಗೂ ಭಾರತದ ಬದಲಿಗೆ ವಿದೇಶದಲ್ಲಿ ಓದುವುದರ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವ ಕಾರಣದಿಂದ ಎಂಜಿನಿಯರಿಂಗ್ ದಾಖಲಾತಿ ಕಡಿಮೆ ಆಗಿದೆ ಎನ್ನಲಾಗುತ್ತಿದೆ.
Bengaluru: 56 ಕೋಟಿ ಕದ್ದ ಎಂಜಿನಿಯರ್, ಎರಡು ವರ್ಷದ ಬಳಿಕ ಬಂಧನ
ಕೆಲವು ವರದಿಗಳ ಪ್ರಕಾರ, ವಿಧ್ಯಾರ್ಥಿಗಳಲ್ಲಿ ಇತ್ತೀಚೆಗೆ ಶಿಕ್ಷಣದ ಬಗ್ಗೆ ಗಂಭೀರತೆ ಕೊರತೆ ಎದ್ದು ಕಾಣುತ್ತಿದೆ, ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಇದಕ್ಕೂ ಮುಖ್ಯವಾಗಿ, ಈಗ ಎಂಜಿಯರ್’ಗಳಾಗಿ ಹೊರಬಂದಿರುವ ವಿಧ್ಯಾರ್ಥಿಗಳಿಗೆ ಸೂಕ್ತ ಸಂಬಳ ಕೊಡದೆ ಅತಿಯಾಗಿ ಕೆಲಸ ಮಾಡಿಸಿಕೊಳ್ಲುತ್ತಿರುವುದು ಸಹ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಬಗ್ಗೆ ನಿರ್ಲಕ್ಷ್ಯ ತೋರಲು ಕಾರಣ ಇರಬಹುದು ಎನ್ನಲಾಗುತ್ತಿದೆ. ಎಂಜಿನಿಯರ್’ಗಳ ಕೊರತೆ ಭಾರತಕ್ಕೆ ಸಮಸ್ಯೆಯಾಗಿಯೂ ಎನ್ನಲಾಗುತ್ತಿದೆ.