Weekly Horoscope: ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಯಾವ ರಾಶಿಯವರಿಗೆ ಅದೃಷ್ಟ

0
178
Weekly Horoscope

Weekly Horoscope

ಈ ತಿಂಗಳ ಮೂರನೇ ವಾರ ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 22 ರವರೆಗೆ ಇರಲಿದೆ. ಈ ವಾರದಲ್ಲಿ ಕೆಲ ರಾಶಿ, ನಕ್ಷತ್ರ ಚಲನೆಗಳಿದ್ದು, ಕೆಲ ರಾಶಿಗಳ ಮೇಲೆ ದೊಡ್ಡ ಮಟ್ಟಿಗಿನ ಪ್ರಭಾವ ಬೀರಲಿವೆ. ಸೆಪ್ಟೆಂಬರ್ ತಿಂಗಳ ಮೂರನೇ ವಾರ ಯಾವ ರಾಶಿಗೆ ಹೇಗಿರಲಿದೆ ಇಲ್ಲಿ ತಿಳಿಯಿರಿ.

ಮೇಷ ರಾಶಿ

ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಮೊದಲ ರಾಶಿಯಾದ ಮೇಷ ರಾಶಿಗೆ ಶುಭವಾಗಲಿದೆ. ಮದುವೆ ಮಾತುಕತೆ ಮುಂದುವರೆಯಲಿದೆ. ಅವಿವಾಹಿತರಿಗೆ ಮದುವೆ ನಿಶ್ಚಯ ಆಗಲಿದೆ. ನಿಂತಿದ್ದ ಮದುವೆ ನಡೆಯಲಿದೆ. ಕೆಲಸಗಳಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಕೆಲಸ ಮೆಚ್ಚುಗೆಗೆ ಪಾತ್ರವಾಗಲಿದೆ. ಸ್ನೇಹಿರಿಂದ ಮೆಚ್ಚುಗೆ ಸಿಗಲಿದೆ.

ವೃಷಭ ರಾಶಿ

ವೃಷಭ ರಾಶಿವರಿಗೆ ಈ ವಾರ ಮಿಶ್ರಫಲ ಇರಲಿದೆ. ಕೆಲವು ಆತುರದ ನಿರ್ಣಯಗಳನ್ನು ತೆಗೆದುಕೊಳ್ಳುವಿರಿ. ‌ಇದರಿಂದಾಗಿ ಮಾತು ತಪ್ಪಬೇಕಾಗಬಹುದು, ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗದು. ಮನೆಗೆ ಸಂಬಂಧಿಗಳು ಬರುವರು. ವಿದೇಶಕ್ಕೆ ಹೋಗುವ ಕನಸು ಕಾಣುತ್ತಿದ್ದವರಿಗೆ ನಿರಾಸೆ ಆಗಲಿದೆ. ಕೆಲವು ಸತ್ಯಗಳು ತಿಳಿಯಲಿವೆ.

ಮಿಥುನ ರಾಶಿ

ಮಿಥುನ ರಾಶಿಯ ಅಶುಭ ಪರ್ವ ಮುಂದುವರೆದಿದೆ. ನಿಮ್ಮ ಕಷ್ಟಕ್ಕೆ ಕುಟುಂಬದ ಬೆಂಬಲ ಸಿಗದು. ನೀವೂ ಸಹ ವಿನಾಕಾರಣ ಕೋಪ ಮಾಡಿಕೊಳ್ಳುತ್ತೀರಿ. ಕೆಲಸದ ಸ್ಥಳದಲ್ಲಿ ಅವಮಾನ ಆಗಲಿದೆ, ಉದ್ಯೋಗ ಬಿಡುವ ಯೋಚನೆ ಮಾಡಲದ್ದೀರಿ. ಮನಸ್ಸಿಗೆ ಬೇಸರವಾಗುವ ಸಂಗತಿಗಳು ನಡೆಯಲಿವೆ. ಕಚೇರಿಯಲ್ಲಿ ಆಗಿರುವ ಅವಮಾನದ ಬಗ್ಗೆ ಯಾರೊಂದಿಗೆ ಹೇಳಿಕೊಳ್ಳಲು ಸಹ ಆಗದು. ಆದರೆ ತಾಳ್ಮೆವಹಿಸಿ.

ಕರ್ಕಾಟಕ ರಾಶಿ

ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ತಾಯಿಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವಿರಿ. ವಾಹನದಿಂದ ನಿಮಗೆ ಸುಖ. ಹಿಂದಿನ ವಿಷಯಕ್ಕೆ ಸಂಬಂಧಿಸಿದ ಕೆಲವು ಕಾಳಜಿಗಳನ್ನು ಅನುಭವಿಸಬಹುದು. ಇದು ನಿಮ್ಮ ಸಂಬಂಧದಲ್ಲಿ ಅನಗತ್ಯ ಅಡೆತಡೆಗಳನ್ನು ಉಂಟುಮಾಡಬಹುದು. ನಿಮ್ಮ ಸಂತೋಷಕ್ಕಾಗಿ ಕಾರಣಗಳನ್ನು ಹುಡುಕುವಿರಿ. ನಿಮ್ಮ ತಿಳಿವಳಿಕೆಯನ್ನು ತೋರಿಸಲು ಹೋಗುವುದು ಬೇಡ. ಅನಾರೋಗ್ಯವು ನಿಧಾ‌ನವಾಗಿ ಕಡಿಮೆಯಾಗುವುದು. ಲಲಿತಾದೇವಿಯನ್ನು ಉಪಾಸನೆ ಮಾಡಿ.

ಸಿಂಹ ರಾಶಿ

ಸಿಂಹ ರಾಶಿಗೆ ಮಿಶ್ರಫಲ ಸಿಗಲಿವೆ. ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಲಿದೆ. ಪೋಷಕರ ಮೇಲಿನ ಸಿಟ್ಟು ಮುಂದುವರೆಯಲಿದೆ. ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ವಿಧಿ-ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ ಅವಮಾನ ಎದುರಿಸಬೇಕಾಗಿದೆ. ಪತ್ನಿ, ಗೆಳೆಯ/ಗೆಳತಿಯೊಂದಿಗೂ ಜಗಳ ಮಾಡಿಕೊಳ್ಳುವಿರಿ. ಮಾಡಿದ ಕೆಲಸಕ್ಕೆ ತಕ್ಕ ಫಲ ದೊರೆಯಲಿದೆ. ಮನಸ್ಸಿಗೆ ಬೇಸರ ಆವರಿಸಿಕೊಳ್ಳಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭವಿದೆ. ನಟನಾ ವೃತ್ತಿಯಲ್ಲಿರುವವರಿಗೆ ಲಾಭ ಸಿಗಲಿದೆ. ಈ ವಾರ ಅನವಶ್ಯಕ ಓಡಾಟ ಹೆಚ್ಚಾಗುವುದು. ಉದ್ಯೋಗ ಸ್ಥಳದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ನಡೆಯಲದೆ. ಸುಖಾ ಸುಮ್ಮನೆ ತೊಂದರೆ ಮೈಮೇಲೆ ಎಳೆದುಕೊಳ್ಳಬೇಡಿ.

ತುಲಾ ರಾಶಿ

ತುಲಾ ರಾಶಿಗೆ ಮಿಶ್ರಫಲವಿದೆ. ಮಾನಸಿಕ ತೊಳಲಾಟ ಇರಲಿದೆ. ಅನಾರೋಗ್ಯ ಕಾಡಲಿದೆ. ಹೂಡಿಕೆ ವಿಚಾರದಲ್ಲಿ ಗೊಂದಲ ಇರಲಿದೆ. ವಿವಾಹ ಮಾತುಕತೆಗೆ ತಡೆ ಬೀಳಲಿದೆ. ಶತ್ರುಗಳ ಕಾಟ ಇರಲಿದೆ. ಅವರನ್ನು ಗೆಲ್ಲಲು ಮಾಡುವ ಪ್ರಯತ್ನದಲ್ಲಿ ಸೋಲು ಕಾಣಲಿದ್ದೀರಿ. ಹಣಕಾಸಿನ ನಷ್ಟವೂ ಆಗಲಿದೆ.

ವೃಶ್ಚಿಕ ರಾಶಿ

ಈ ರಾಶಿಯವರಿಗೆ ಈ ವಾರ ಮಿಶ್ರಫಲ. ಮಾನಸಿಕ ತುಮುಲ ಇರುವುದಿಲ್ಲ. ಆದರೆ ಬರಬೇಕಾದ ಲಾಭ ಬಾರದು. ಹಣ ಖರ್ಚಾಗಲಿದೆ, ದೇಹ ಬಾಧೆಯೂ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ನಷ್ಟವಾಗಲಿದೆ. ಹಳೆಯ ಗೆಳೆಯರು ಸಿಗುವರು, ಉತ್ತಮ ಸಮಯ ಕಳೆಯುವಿರಿ. ಚೂಪಾದ ವಸ್ತುಗಳಿಂದ ದೂರ ಇರಿ. ಪತ್ನಿಯೊಂದಿಗೆ ಸಲುಗೆಯಿಂದಿರಿ.

ಧನು ರಾಶಿ

ಧನು ರಾಶಿಗೆ ಈ ವಾರ ಮಿಶ್ರಫಲ ಇದೆ. ಉದ್ಯೋಗ ಹುಡುಕುತ್ತಿರುವವರಿಗೆ ಸಮಸ್ಯೆ ಆಗಲಿದೆ. ಕೆಲವು ಐಶಾರಾಮಿ ಅಥವಾ ಭೋಗ ವಸ್ತು ಖರೀದಿಸುವಿರಿ ಅಥವಾ ಅನುಭವಿಸುವಿರಿ. ಜಾಗೃತೆಯಾಗಿ ಮಾತನ್ನಾಡಿ, ಅನವಶ್ಯಕವಾಗಿ ಶತ್ರುಗಳನ್ನು ಸೃಷ್ಠಿಸಿಕೊಳ್ಳುವುದು ಬೇಡ. ಅನವಶ್ಯಕವಾಗಿ ವೆಚ್ಚ ಜಾಸ್ತಿ ಆಗಲಿದೆ. ಆದರೆ ನೀವು ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಶುಭ ಸಮಯವಿದೆ. ಉದ್ಯೋಗದಲ್ಲಿ ಪ್ರಗತಿ ಆಗಲಿದೆ, ಬಡ್ತಿ ಸಿಗಲಿದೆ. ಸಂಗಾತಿಯ ಜೊತೆಗೆ ಸವಿ ಸಮಯ ಕಳೆಯಲಿದ್ದೀರಿ. ಕಷ್ಟಗಳಲ್ಲಿ ಸಿಲುಕದಾಗ ನಿಮ್ಮವರು ಸಹಾಯ ಮಾಡುವರು. ಯಾರೊಂದಿಗೆ ಅತಿಯಾದ ಪ್ರೇಮ ಬೇಡ. ದೇವರ ಧ್ಯಾನ ಮರೆಯಬೇಡಿ.

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಸ್ಪೂರ್ತಿದಾಯಕ ಜನರನ್ನು ಭೇಟಿ ಆಗಲಿದ್ದೀರಿ. ಕೆಲವು ಉತ್ತಮ ವಸ್ತುಗಳು ಉಡುಗೊರೆಯಾಗಿ ಸಿಗಲಿವೆ. ಅನಾರೋಗ್ಯ ಕಾಣಲಿದೆ, ವಿಶೇಷವಾಗಿ ಮೂಳೆ, ಮಾಂಸಖಂಡದಲ್ಲಿ ನೋವು ಕಾಣಿಸಿಕೊಳ್ಳಲಿದೆ. ಶಿಸ್ತಿನ ಜೀವನ ರೂಪಿಸಿಕೊಳ್ಳಿ, ಇಲ್ಲವಾದರೆ ದೀರ್ಘ ಕಾಲದ ಅನಾರೋಗ್ಯ ಎದುರಿಸಬೇಕಾದೀತು.

ಮೀನ ರಾಶಿ

ಕೊನೆಯ ರಾಶಿಗೆ ಈ ವಾರ ಮಿಶ್ರಫಲ ಇದೆ. ಯಾವ ವಿಷಯದಲ್ಲಿಯೂ ನಿಮಗೆ ಸಂತೋಷ ಇರುವುದಿಲ್ಲ. ಕೆಲವರ ಜೊತೆ ಸಂಬಂಧ ಸರಿಹೋಗಲಿದೆ. ಪತ್ನಿಯ ಜೊತೆಗೆ ಮುನಿಸು ಇರಲಿದೆ. ಕುಟುಂಬದ ಬಗ್ಗೆ ಪ್ರೀತಿ ಇರಲಿ. ದೊಡ್ಡವರ ಬಗ್ಗೆ ಗೌರವ ಇರಲಿ. ಬಿದ್ದಾಗ ಅವರು ಮೇಲೆತ್ತಲಿದ್ದಾರೆ.

LEAVE A REPLY

Please enter your comment!
Please enter your name here