Flipkart
ಗಣೇಶ ಚತುರ್ಥಿ ಮುಗಿದಿದೆ, ದಸರಾ, ದೀಪಾವಳಿ ಸನಿಹದಲ್ಲಿವೆ. ಹಬ್ಬಗಳಿಗೆ ಧಾರ್ಮಿಕ, ಸಾಂಸ್ಕೃತಿಕ ಪ್ರಾಮುಖ್ಯತೆ ಇರುವ ಜೊತೆಗೆ ಆರ್ಥಿಕವಾಗಿಯೂ ಹಬ್ಬಗಳು ಬಹಳ ಪ್ರಾಮುಖ್ಯತೆ ಹೊಂದಿವೆ. ಇಡೀ ವರ್ಷದಲ್ಲಿ ಭಾರತದಲ್ಲಿ ಆಗುವ ವ್ಯವಹಾರ ಗಾತ್ರ, ದಸರಾ, ದೀಪಾವಳಿ ಋತುವಿನಲ್ಲಿ ಆಗುವ ವ್ಯವಹಾರದ ಗಾತ್ರಕ್ಕೆ ಸಮನಾಗಿರುತ್ತದೆ ಎನ್ನಲಾಗುತ್ತದೆ. ದಸರಾ ಮತ್ತು ದೀಪಾವಳಿ ಖರೀದಿಗೆ ಬಹಳ ಪ್ರಾಶಸ್ತ್ಯವಾದ ದಿನಗಳೆಂದು ಭಾವಿಸಲಾಗುತ್ತದೆ. ಇದೀಗ ಮತ್ತೆ ಹಬ್ಬಗಳ ಸೀಸನ್ ಹತ್ತಿರ ಬಂದಿದ್ದು, ಅದಕ್ಕೆ ಬಹು ಮುಂಚಿತವಾಗಿ ಆನ್ಲೈನ್ ಮಳಿಗೆಗಳು ಆಫರ್ಗಳನ್ನು ಬಿಟ್ಟಿವೆ. ಫ್ಲಿಪ್ಕಾರ್ಟ್ನ ಬಿಗ್ಬಿಲಿಯನ್ ಡೇ ಘೋಷಣೆಯಾಗಿದ್ದು, ಮೊಬೈಲ್ ಸೇರಿದಂತೆ ಹಲವು ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.
ಫ್ಲಿಪ್ಕಾರ್ಟ್ ಬಿಗ್ಬಿಲಿಯನ್ ಡೇ ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಲಿದೆ. ಫ್ಲಿಪ್ಕಾರ್ಟ್ ಪ್ಲಸ್ ಹೊಂದಿರುವ ಸದಸ್ಯರಿಗೆ ಸೆಪ್ಟೆಂಬರ್ 26 ರಿಂದಲೇ ಬಿಗ್ಬಿಲಿಯನ್ ಡೇ ಪ್ರಾರಂಭವಾಗಲಿದೆ. ಈ ಬಾರಿ ದಿನಸಿ ವಸ್ತುಗಳಿಂದ ಹಿಡಿದು ಹೈಟೆಕ್ ಫೋನ್ ವರೆಗೆ, ಶಕ್ತಿಯುತ ಲ್ಯಾಪ್ಟಾಪ್ಗಳು ಬಹಳ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಹಬ್ಬಕ್ಕೆ ಬಟ್ಟೆಗಳಂತೂ 50% ರಿಯಾಯಿತಿ ದರದಲ್ಲಿ ಮಾರಾಟವಾಗಲಿವೆ. ಕೆಲವು ವಸ್ತುಗಳ ರಿಯಾಯಿತಿ ಬೆಲೆಗಳನ್ನು ಫ್ಲಿಪ್ಕಾರ್ಟ್ ಈಗಾಗಲೇ ಬಿಡುಗಡೆ ಮಾಡಿದೆ.
ಆಪಲ್ನ ಐಪ್ಯಾಡ್ ಕೇವಲ 18,999 ರೂಪಾಯಿಗೆ ಲಭ್ಯವಾಗಲಿದೆ. ಐಫೋನ್ 15 ಸಹ ಸುಮಾರು 40 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ದರಕ್ಕೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಇನ್ನು ಶಕ್ತಿಯುತ ಡೆಲ್ ಲ್ಯಾಪ್ಟಾಪ್ಗಳು 60 ಸಾವಿರಕ್ಕೂ ಕಡಿಮೆ ದರಕ್ಕೆ ಸಿಗಲಿವೆ. ಆಪಲ್ ಪ್ರಾಡೆಕ್ಟ್ಗಳ ಮೇಲಿನ ರಿಯಾಯಿತಿ ಸೆಪ್ಟೆಂಬರ್ 23 ರಿಂದಲೇ ಪ್ರಾರಂಭವಾಗಲಿದೆ. ಸ್ಯಾಮ್ಸಂಗ್ ಸಹ ತನ್ನ ಎ ಸೀರೀಸ್ ಹಾಗೂ ಎಸ್ ಸೀರೀಸ್ ಮೊಬೈಲ್ಗಳ ಮೇಲೆ ಭಾರಿ ರಿಯಾಯಿತಿ ಘೋಷಣೆ ಮಾಡಲಿದೆ. ಇದರ ರಿಯಾಯಿತಿ ದರಗಳು ಸೆಪ್ಟೆಂಬರ್ 20ರಿಂದಲೇ ಆರಂಭವಾಗಲಿದೆ.
Jeeva Park: ಜೀವ ಪಾರ್ಕ್: ಬೆಂಗಳೂರಿನ ಪಕ್ಕದಲ್ಲೇ ಒಂದು ಪ್ರಾಣಿಗಳ ಅರಮನೆ
99 ರೂಪಾಯಿಗೆ, 499 ರೂಪಾಯಿಗಳಿಗೆ, 599, 699 ರೂಪಾಯಿ ಹೀಗೆ ವಿವಿಧ ದರಗಳಲ್ಲಿ ಹಲವು ವಸ್ತುಗಳು ಮಾರಾಟವಾಗಲಿವೆ. ಕೆಲವು ಅದೃಷ್ಟಶಾಲಿಗಳಿಗೆ ತೀರ ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ ಗೂಡ್ಸ್ಗಳು ಸಹ ಸಿಗಲಿವೆ. ನೀವು ಯಾವುದಾದರೂ ವಸ್ತುವನ್ನು ಆನ್ಲೈನ್ನಲ್ಲಿ ಕೊಳ್ಳಲು ರೆಡಿಯಾಗಿದ್ದರೆ ಒಂದು ವಾರ ತಡೆಯಿರಿ. ನೀವು ಕೊಳ್ಳಬೇಕು ಎಂದುಕೊಂಡಿರುವ ವಸ್ತುವನ್ನು ಕಾರ್ಟ್ಗೆ ಆಡ್ ಮಾಡಿಕೊಂಡಿರಿ. ಬಿಲಿಯನ್ ಡೇ ಪ್ರಾರಂಭವಾದಾಗ ಖರೀದಿ ಮಾಡಿ ಹಣ ಉಳಿಸಿ.