Tirupati Laddu: ದನದ ಕೊಬ್ಬು ಪತ್ತೆಯಾದ ಬಳಿಕ ಮಾರಾಟವಾದ ತಿರುಪತಿ ಲಡ್ಡುಗಳ ಸಂಖ್ಯೆ ಎಷ್ಟು ಗೊತ್ತೆ?

0
141
Tirupati Laddu

Tirupati Laddu

ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಲಡ್ಡು ಅನ್ನು ಪ್ರಸಾದವಾಗಿ ನೀಡುವುದು ಶತಮಾನಗಳಿಂದಲೂ ನಡೆದುಕೊಂಡು ಬಂದೊರುವ ವಾಡಿಕೆ. ಆದರೆ ಇತ್ತೀಚೆಗೆ ಬಹಿರಂಗಗೊಂಡ ವರದಿಯ ಪ್ರಕಾರ, ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಳಕೆ ಮಾಡಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ‌ ಕೊಬ್ಬು ಪತ್ತೆಯಾಗಿದೆ. ದನದ ಕೊಬ್ಬು, ಮೀನಿನ ಎಣ್ಣೆ, ಹಂದಿಯ ಕೊಬ್ಬು ಇರುವುದು ಲ್ಯಾಬ್ ವರದಿಯಿಂದ ತಿಳಿದು ಬಂದಿದ್ದು ಈ ಸುದ್ದಿ ದೇಶದಾದ್ಯಂತ ಕೋಲಾಹಲವನ್ನೇ ಎಬ್ಬಿಸಿದೆ.

ದನದ ಕೊಬ್ಬು ದೇವರ ಪ್ರಸಾದದಲ್ಲಿ ಬೆರೆಯಲು ಕಾರಣವಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾಗಿದ್ದರಿಂದ ತಿರುಪತಿಗೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಆಗುತ್ತದೆ. ತಿರುಪತಿ ಕ್ಷೇತ್ರದ ಮುಖ್ಯ ಆದಾಯಗಳಲ್ಲಿ ಒಂದಾದ ಲಡ್ಡುವಿನ ಮಾರಾಟ ಕುಸಿದು ಹೋಗುತ್ತದೆ ಎನ್ನಲಾಗಿತ್ತು. ಆದರೆ ಹಾಗೇನೂ ಆಗಿಲ್ಲ ಎನ್ನುತ್ತಿವೆ ವರದಿಗಳು.

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಇದೆ ಎಂಬುದು ಪತ್ತೆಯಾಗಿ ವಾರವಾಗುತ್ತಾ ಬಂದಿದೆ. ಈ ವಾರದಲ್ಲಿ ತಿರುಪತಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯೇನೂ ಆಗಿಲ್ಲ. ಅಲ್ಲದೆ ಕಳೆದ ನಾಲ್ಕು ದಿನದಲ್ಲಿ ತಿರುಪತಿಯಲ್ಲಿ ಬರೋಬ್ಬರಿ ಹದಿನಾಲ್ಕು ಲಕ್ಷ ಲಡ್ಡುಗಳು ಮಾರಾಟ ಆಗಿವೆ. ಸೆಪ್ಟೆಂಬರ್ 19 ರಂದು 3.59 ಲಕ್ಷ, ಅದಾದ ಬಳಿಕ ಸೆ 20 ರಂದು 3.17, ಸೆ 21 ರಂದು 3.67, ಸೆ 21 ರಂದು 3.60, ಸೆ 22 ರಂದು 3.50 ಹೀಗೆ ವಿವಾದದ ಬಳಿಕವೂ ಪ್ರತಿದಿನ 3.50 ಲಕ್ಷ ಸರಾಸರಿಯಲ್ಲಿ ಲಡ್ಡು ಮಾರಾಟ ಆಗುತ್ತಲೇ ಇವೆ.

Tirupati Laddu: ಕರ್ನಾಟಕದ 34 ಸಾವಿರ ದೇವಾಲಯಗಳಲ್ಲಿ ನಂದಿನಿ ತುಪ್ಪವನ್ನೇ ಬಳಸಲು ಆದೇಶ

ತಿರುಪತಿಯಲ್ಲಿ ಲಡ್ಡು ತಯಾರಿಸಲು ಪ್ರತಿದಿನ 15 ಸಾವಿರ ಕೆಜಿ ತುಪ್ಪದ ಬಳಕೆ ಆಗುತ್ತದೆ. ಈ ಹಿಂದೆ ಏಜೆನ್ಸಿಯೊಂದು ತುಪ್ಪ ಸರಬರಾಜು ಮಾಡುತ್ತಿತ್ತು, ಆದರೆ ಆ ತುಪ್ಪದಲ್ಲಿ ಪ್ರಾಣಿಗಳ‌ ಕೊಬ್ಬು ಪತ್ತೆ ಆಗಿದೆ. ಆಡಳಿತಾರೂಢ ಟಿಡಿಪಿ ಸರ್ಕಾರವು, ಇದಕ್ಕೆಲ್ಲ ಈ ಹಿಂದೆ ಆಡಳಿತದಲ್ಲಿದ್ದ ವೈಸಿಪಿ ಸರ್ಕಾರ ಕಾರಣ ಎಂದಿದ್ದು, ಪ್ರಕರಣದ ತನಿಖೆಗೆ ವಿಶೇಷ ತನಿಖಾ ಸಂಸ್ಥೆಯೊಂದನ್ನು ಸ್ಥಾಪಿಸಿದೆ.

LEAVE A REPLY

Please enter your comment!
Please enter your name here