Upasana Konidela: ಚಿರಂಜೀವಿ ಸೊಸೆ ಉಪಾಸನಾ ಡಯಟ್ ಹೇಗಿರುತ್ತೆ, ಪ್ರತಿದಿನ ಸೇವಿಸುವ ಆಹಾರವೇನು?

0
118
Upasana Konidela

Upasana Konidela

ಚಿರಂಜೀವಿ ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ, ಟಾಲಿವುಡ್ ಸ್ಟಾರ್ ನಟರ ಪತ್ನಿಯರಲ್ಲೇ ಅತ್ಯಂತ ಶ್ರೀಮಂತೆ. ಉಪಾಸನಾ ಕೇವಲ ರಾಮ್ ಚರಣ್ ಪತ್ನಿ ಮಾತ್ರವಲ್ಲ, ವಿಶ್ವ ಪ್ರಸಿದ್ಧ ಅಪೋಲೊ ಹಾಸ್ಪಿಟಲ್ ಸಂಸ್ಥೆಯ ವ್ಯವಸ್ಥಾಪಕ ಮಂಡಳಿಯ ಸದಸ್ಯೆ ಸಹ ಹೌದು. ದೇಶ ವಿದೇಶಗಳಲ್ಲಿ ಸಾವಿರಾರು ಘಟಕಗಳನ್ನು‌ಹೊಂದಿರುವ ಅಪೋಲೊ ಹಾಸ್ಟಿಟಲ್ ಮತ್ತು ಮೆಡಿಕಲ್ ಶಾಪ್ ಗಳ ಒಡೆತನ ಇವರ ಕುಟುಂಬದ್ದೆ.

ಸ್ವತಃ ಮೆಡಿಕಲ್ ಕುಟುಂಬದ ಹಿನ್ನೆಲೆ ಹೊಂದಿರುವ ಉಪಾಸನಾ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಸದಾ ಮಾತನಾಡುತ್ತಿರುತ್ತಾರೆ ಉಪಾಸನಾ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಡಯಟ್ ಬಗ್ಗೆ ಉಪಾಸನಾ ಮಾತನಾಡಿದ್ದಾರೆ. ತಾವು ದಿನನಿತ್ಯ ಸೇವಿಸುವ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಉಪಾಸನಾ ಕೋನಿಡೆಲ, ಇಂಟರ್ಮಿಡೇಟ್ ಫಾಸ್ಟಿಂಗ್ ಮಾಡುತಗತಾರಂತೆ. ಅಂದರೆ ಅವರ ಪ್ರತಿ ಊಟದ ನಡುವೆ 14 ಗಂಟೆಗಳ ಅಂತರ ಇರುವಂತೆ ನೋಡಿಕೊಳ್ಳುತ್ತಾರೆ. ಅಂದರೆ ಅವರು ದಿನಕ್ಕೆ ಎರಡು ಮಾತ್ರಿ ಮಾತ್ರವೇ ಊಟ ಮಾಡುತ್ತಾರೆ. ಹಿಂದಿನ ದಿನದವಕೊನೆಯ ಊಟಕ್ಕೂ ಮಾರನೇಯ ದಿನದ ಮೊದಲ ಊಟದ ನಡುವೆ 14 ಗಂಟೆ ಇರುವುದು ಅತ್ಯಂತ ಅವಶ್ಯಕ ಎಂದಿದ್ದಾರೆ ಉಪಾಸನಾ.

ಉಪಾಸನಾ ದಿನದ ಮೊದಲ ಊಟದಲ್ಲಿ‌ ಪ್ರೊಟೀನ್ ಯುಕ್ತ ಆಹಾರ ಹೆಚ್ಚು ಸೇವಿಸುತ್ತಾರಂತೆ. ಪ್ರೊಟೀನ್ ಹೆಚ್ಚು ಇರುವ ಆಹಾರ ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ಹೆಚ್ಚು ಮಾಡುವುದಿಲ್ಲ. ಮೊದಲ ಊಟಕ್ಕೆ ಶುಗರ್ ಸ್ಪೈಕ್ ಆಗಿಬಿಟ್ಟರೆ ದಿನ ಪೂರ್ತಿ ಅದು ಹಾಗೆಯೇ ಮುಂದುವರೆಯುತ್ತದೆ. ಹಾಗಾಗಿ ದಿನದ ಮೊದಲ ಊಟವನ್ನು ಎಚ್ಚರಿಕೆಯಿಂದ ಮಾಡಬೇಕು. ನಾನು ಮೊದಲ ಊಟಕ್ಕೆ ಮೊಟ್ಟೆ, ಹಸಿರು ಕಾಳು, ಮೊಳಕೆ ಬಂದಿರುವ ಕಾಳು, ಪನ್ನೀರುಗಳನ್ನು ಹೆಚ್ಚಾಗಿ ಬಳಸುತ್ತೇನೆ ಎಂದಿದ್ದಾರೆ ಉಪಾಸನಾ.

ನನಗೆ ರುಚಿಯಾದುದ್ದು ತಿನ್ನಬೇಕು ಎನ್ನಿಸಿದಾಗ ನಾನು ಚಿಕನ್ ಅಥವಾ ಫಿಶ್ ತಿನ್ನುತ್ತೇನೆ. ಆಗಲೂ ಸಹ ಊಟದಲ್ಲಿ ಎಣ್ಣೆ ಕಡಿಮೆ ಇರುವಂತೆ ನೋಡಿಕೊಳ್ಳುತ್ತೇನೆ. ಮತ್ತು ಚಿಕನ್ ಅಥವಾ ಫಿಶ್ ತಿಂದ ಮರು ದಿನ ಚೆನ್ನಾಗಿ ಜಿಮ್ ವರ್ಕೌಟ್ ಅಥವಾ ವ್ಯಾಯಾಮ ಮಾಡುತ್ತೇನೆ ಎಂದಿದ್ದಾರೆ.

Tumbbad movie: ಬಿಡುಗಡೆ ಆಗಾದ ಫ್ಲಾಪ್, ರಿ-ರಿಲೀಸ್ ನಲ್ಲಿ ಭಾರಿ ಹಣ ಗಳಿಸಿದೆ ಈ ಸಿನಿಮಾ

ಇಂಟರ್ಮಿಟೆಂಟ್ ಫಾಸ್ಟಿಂಗ್ ನಿಂದ ಜೀರ್ಣ ಕ್ರಿಯೆ ಪರಿಣಾಮಕಾರಿಯಾಗಿ ಆಗುತ್ತದೆ. ದೇಹದಲ್ಲಿನ ಕೊಬ್ಬು ಕರಗುತ್ತದೆ. ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ಅತ್ಯಂತ ಸಹಾಯಕಾರಿ. ಅದರಲ್ಲೂ ಪ್ರೊಟೀನ್ ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯ ಲಾಭಗಳು ಹೆಚ್ಚು ಎಂಬುದು ಉಪಾಸನಾ ನಂಬಿಕೆ. ವೈದ್ಯರೂ ಇದನ್ನೇ ಹೇಳುತ್ತಾರೆ.

LEAVE A REPLY

Please enter your comment!
Please enter your name here