Bengaluru Taxi: ಓಲಾ, ಊಬರ್ ಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಬೆಂಗಳೂರು ಟ್ಯಾಕ್ಸಿ ಡ್ರೈವರ್‌ಗಳು

0
130
Bengaluru Taxi

Bengaluru Taxi

ಕ್ಯಾಬ್ ಸೇವಾ ಸಂಸ್ಥೆಗಳಾದ ಓಲಾ, ಊಬರ್ ಗಳು ಚಾಪೆ ಕೆಳಗೆ ತೂರಿದರೆ ನಮ್ಮ ಬೆಂಗಳೂರಿನ ಕ್ಯಾಬ್ ಡ್ರೈವರ್ ಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಆ ಮೂಲಕ ಡಬಲ್ ಲಾಭ ಗಳಿಸುತ್ತಿದ್ದಾರೆ. ಟ್ಯಾಕ್ಸಿ ಡ್ರೈವರ್ ಗಳ ಈ ಹೊಸ ಕಾರ್ಯ ವಿಧಾನದಿಂದ ಓಲಾ-ಊಬರ್ ಗಳು ತಲೆ ಕೆಡಿಸಿಕೊಂಡಿವೆ ಆದರೆ ಟ್ಯಾಕ್ಸಿ ಡ್ರೈವರ್ ಗಳ ಮೇಲೆ ಯಾವುದೇ ಕ್ರಮ ಸಹ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಬೆಂಗಳೂರಿನ ಟ್ಯಾಕ್ಸಿ ಡ್ರೈವರ್ ಗಳು ರೈಡ್ ಗಳನ್ನು ಪಡೆಯಲು ಓಲಾ, ಊಬರ್’ನ ಅಪ್ಲಿಕೇಶನ್ ಗಳನ್ನು ಬಳಸುತ್ತಿರುವುದು ಗೊತ್ತೇ ಇದೆ. ಇದರಲ್ಲಿ ಗಳಿಸಿದ ಹಣದಲ್ಲಿ ಓಲಾ ಅಥವಾ ಊಬರ್ ಗೆ ಪಾಲು ನೀಡಬೇಕಿತ್ತು ಡ್ರೈವರ್ ಗಳು ಆದರೆ ಈಗ ಬೆಂಗಳೂರಿನ ಕೆಲ ಡ್ರೈವರ್ ಗಳು ಹೊಸ ದಾರಿ ಕಂಡುಕೊಂಡಿದ್ದು, ವಾಟ್ಸ್ ಆಪ್, ಟೆಲಿಗ್ರಾಂಗಳನ್ನು ಬಳಸಿಕೊಂಡು ಗ್ರಾಹಕರನ್ನು ಸಂಪರ್ಕಿಸಿ ಟ್ಯಾಕ್ಸಿ ಬುಕ್ ಆಗುವಂತೆ ಮಾಡುತ್ತಿದ್ದಾರೆ. ಇದರಿಂದ ಡಬಲ್ ಲಾಭ ಪಡೆಯುತ್ತಿದ್ದಾರೆ.

ಡ್ರೈವರ್ ಗಳು ಟೆಲಿಗ್ರಾಂ, ವಾಟ್ಸ್ ಆಫ್ ಗ್ರೂಪ್ ಗಳನ್ನು ಮಾಡಿಕೊಂಡಿದ್ದು, ಈ ಗ್ರೂಪ್ ಗಳಲ್ಲಿ ಪ್ರಯಾಣಿಕರನ್ನು ಸಹ ಸೇರಿಸಿದ್ದಾರೆ. ಗ್ರೂಪ್ ನಲ್ಲಿರುವ ಯಾವುದೇ ಪ್ರಯಾಣಿಕ ತನಗೆ ಕ್ಯಾಬ್ ಬುಕ್ ಮಾಡಬೇಕೆಂದರೆ ಗ್ರೂಪ್ ಗೆ ಮೆಸೇಜ್ ಮಾಡುತ್ತಾನೆ. ತನ್ನ ಲೊಕೇಶನ್, ಡ್ರಾಪ್ ಲೊಕೇಶನ್ ಕಳಿಸುತ್ತಾನೆ. ಇದನ್ನು ಗಮನಿಸುವ ಡ್ರೈವರ್ ಗಳು ಯಾರಿಗೆ ಆ ಗ್ರಾಹಕನಿಗೆ ಸೇವೆ ನೀಡಲು ಅನುಕೂಲ ಇದೆಯೋ ಆ ಗ್ರೂಪ್ ಗೆ ಪ್ರಯಾಣಿಕ ಕಳಿಸಿರುವ ಮಾಹಿತಿಯನ್ನು ವರ್ಗಾಯಿಸುತ್ತಾನೆ. ಡ್ರೈವರ್, ಪ್ರಯಾಣಿಕನಿಗೆ ನೇರವಾಗಿ ಕರೆ ಮಾಡಿ ಪಿಕಪ್ ಮಾಡುತ್ತಾನೆ, ನೇರವಾಗಿ ಹಣ ಪಡೆಯುತ್ತಾನೆ. ಈ ಮಾದರಿಯಲ್ಲಿ ಬಹುತೇಕ ನಡೆಯುವುದು ಕ್ಯಾಶ್ ಆನ್ ಡೆಲಿವರಿ.

ಡ್ರೈವರ್’ಗಳು ಬೆಂಗಳೂರಿನ ಬೇರೆ ಬೇರೆ ಏರಿಯಾದ ಗ್ರೂಪ್ ಗಳನಳನ್ನು ಮಾಡಿಟ್ಟುಕೊಂಡಿದ್ದು, ಮುಖ್ಯ ಗ್ರೂಪ್ ಗೆ ಬರುವ ಗ್ರಾಹಕರ ಬೇಡಿಕೆಗಳನ್ನು ಅದರ ಲೊಕೇಶನ್ ಆಧರಿಸಿ ಆಯಾ ಗ್ರೂಪ್ ಗೆ ಹಾಕಿಬಿಡುತ್ತಾರೆ. ಗ್ರಾಹಕರಿಗೂ ಸಹ ಡಿಸ್ಕೌಂಟ್ ಗಳನ್ನು ನೀಡಿರುವ ಕಾರಣ ಪ್ರಯಾಣಿಕರು ಸಹ ಈ ಸೇವೆಯನ್ನು ಬಳಸುತ್ತಿದ್ದಾರೆ. ತಮ್ಮ ಪ್ರಯಾಣ ಮುಗಿದ ಮೇಲೆ ಹಣ ನೀಡಬಹುದಾಗಿರುವ ಕಾರಣ ಪ್ರಯಾಣಿಕರು ಸಹ ಮೋಸ ಹೋಗವ ಭಯ ಇಲ್ಲದೆ ಈ ಸೇವೆ ಬಳಸುತ್ತಿದ್ದಾರೆ.

YouTuber Ranveer Allahbadia: ಖ್ಯಾತ ಯೂಟ್ಯೂಬರ್’ನ ಖಾತೆ ಹ್ಯಾಕ್, ಎಲ್ಲವೂ ಡಿಲೀಟ್

ಓಲಾ-ಊಬರ್ ಗಳಲ್ಲಿ ಸಿಗುವ ಪ್ರಯಾಣಿಕರ ಸಂಖ್ಯೆಯನ್ನೇ ಬಳಸಿಕೊಂಡು ಬೆಂಗಳೂರಿನ ಟ್ಯಾಕ್ಸಿ ಡ್ರೈವರ್ ಗಳು ಈ ದೊಡ್ಡ ನೆಟ್ ವರ್ಕ್ ಕಟ್ಟಿಕೊಂಡಿದ್ದಾರೆ. ಹೀಗೆ ವಾಟ್ಸ್ ಆಪ್, ಟೆಲಿಗ್ರಾಂನಿಂದ ಗ್ರಾಹಕರಿಗೆ ಸೇವೆ ನೀಡುತ್ತಿರುವ ಕಾರಣ ಪ್ರತಿದಿನ ಸುಮಾರು 70% ಹೆಚ್ಚು ಹಣ ಗಳಿಸುತ್ತಿದ್ದಾರಂತೆ ಬೆಂಗಳೂರಿನ ಟ್ಯಾಕ್ಸಿ ಡ್ರೈವರ್ ಗಳು.

LEAVE A REPLY

Please enter your comment!
Please enter your name here