Tata Nexon EV: ಬೆಂಕಿಗೆ ಆಹುತಿಯಾದ ಟಾಟಾ ಕಾರು, ಗ್ರಾಹಕನಿಗೆ ನ್ಯಾಯ ಒದಗಿಸಿಕೊಟ್ಟ ನ್ಯಾಯಾಲಯ

0
147
Tata Nexon EV

Tata Nexon EV

ಎಲೆಕ್ಟ್ರಾನಿಕ್ ವಾಹನಗಳ ಭರಾಟೆ ಭಾರತದಲ್ಲಿ ಜೋರಾಗಿದೆ. ಎಲ್ಲಿ ನೋಡಿದರೂ ಇವಿಗಳು. ಜನಪ್ರಿಯ ಕಾರು ನಿರ್ಮಾಣ ಸಂಸ್ಥೆ ಟಾಟಾ ಸಹ ಇವಿ ಕಾರುಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಆದರೆ ಈ ಇವಿ ಕಾರು, ಬೈಕುಗಳು ಅಗಾಗ್ಗೆ ಬೆಂಕಿಗೆ ಆಹುತಿಯಾಗುವ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಆಗೆಲ್ಲ ವಾಹನ ಕೊಂಡ ಗ್ರಾಹಕನಿಗೆ ಭಾರಿ ನಷ್ಟ ಉಂಟಾಗುತ್ತದೆ.

2023 ರಲ್ಲಿ ಹೈದರಾಬಾದ್ ನ ಜೊನಾಥನ್ ಬರ್ನಾರ್ಡ್ ಎಂಬುವರು ಟಾಟಾ ನೆಕ್ಸಾನ್ ಇವಿ ಕಾರು ಖರೀದಿ ಮಾಡಿದ್ದರು. ಆರಂಭದಲ್ಲಿ ಎಲ್ಲ ಚೆನ್ನಾಗಿತ್ತು ಆದರೆ 10 ತಿಂಗಳಲ್ಲಿ ಸಮಸ್ಯೆ ಆರಂಭವಾಯ್ತು. ಬ್ಯಾಟರಿ ಕಡಿಮೆ ಇದ್ದರೆ ಗಾಡಿ ಓಡುತ್ತಲೇ ಇರಲಿಲ್ಲ, ಕೆಲವು ಡ್ರೈವಿಂಗ್ ಮೋಡ್ ಗಳಿಗೆ ಹಾಕಿದ ಕೂಡಲೆ ಗಾಡಿ ಚಲಿಸುತ್ತಿರಲಿಲ್ಲ. ಜೊನಾಥನ್, ಸರ್ವೀಸ್ ಸೆಂಟರ್ ಗೆ ಭೇಟಿ ನೀಡಿದಾಗ ಬ್ಯಾಟರಿಯಲ್ಲಿ ಸಮಸ್ಯೆ‌ ಇದೆ, ನಾವು ಬದಲಾಯಿಸಿಕೊಡುತ್ತೇವೆ, ಅಲ್ಲಿಯವರೆಗೆ ನೀವು 50% ಕಡಿಮೆ ಚಾರ್ಜ್ ಇದ್ದಾಗ ಗಾಡಿ ಓಡಿಸಬೇಡಿ ಎಂದಿದ್ದಾರೆ.

ಆ‌ ನಂತರ ಟಾಟಾ ದವರು ಹೊಸ ಬ್ಯಾಟರಿ ಹಾಕಿಕೊಡುವ‌ ಬದಲಿಗೆ ನವೀಕರಿಸಿದ ಬ್ಯಾಟರಿಗಳನ್ನು ಗಾಡಿಗೆ ಹಾಕಿ ಕೊಟ್ಟಿದ್ದಾರೆ. ನವೀಕರಿಸಿದ ಬ್ಯಾಟರಿ ಹಾಕಿದ 12 ದಿನ ಆದ ಬಳಿಕ ಜೊನಾಥನ್ ರ ಕಾರು ಓಡಿಸಬೇಕಾದರೆ ಕಾರಿನ ಬ್ಯಾಟರಿ‌ ಜಾಗದಿಂದ ಜೋರಾಗಿ ಶಬ್ದ ಕೇಳಿ‌ ಬಂತಂತೆ, ಇದರಿಂದ ಗಾಬರಿಯಾದ ಜೊನಾಥನ್ ಮೊದಲು ಒಂದು ಬೈಕ್’ಗೆ ಡಿಕ್ಕಿ ಹೊಡೆದಿದ್ದಾರೆ, ಅದರ ಬಳಿಕ ಮರವೊಂದಕ್ಕೆ ಢಿಕ್ಕಿ‌ ಹೊಡೆದಿದ್ದಾರೆ. ಜೊನಾಥನ್ ಹೊರಗೆ ಬಂದು‌ ನೋಡಿದರೆ ಕಾರಿನ ಬ್ಯಾಟರಿ‌ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತಂತೆ ಅದಾದ ಕೆಲವೇ ಹೊತ್ತಿನಲ್ಲಿ ಇಡೀ ಕಾರಿಗೆ ಬೆಂಕಿ ಆವರಿಸಿ, ಕಾರು ಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಜೊನಾಥನ್, ಈ ಬಗ್ಗೆ ಟಾಟಾ ಸರ್ವೀಸ್ ಸೆಂಟರ್ ನಲ್ಲಿ ಕೇಳಿದಾಗ ಸಮಾಧಾನಕರ ಉತ್ತರ ಬಂದಿಲ್ಲವಾದ್ದರಿಂದ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಅಲ್ಲಿ‌ ಎರಡೂ ಪಕ್ಷಗಳ ವಾದ-ವಿವಾದ ಆಲಿಸಿದ ಜಿಲ್ಲಾ ಗ್ರಾಹಕರ ವೇದಿಕೆಯು, ಟಾಟಾ ಕಂಪೆನಿ, ಜೊನಾಥನ್’ಗೆ 16.95 ಲಕ್ಷ ಹಣ ನೀಡಬೇಕು ಎಂದು ಆದೇಶಿಸಿದೆ. ಮಾತ್ರವಲ್ಲದೆ ಇದರ ಜೊತೆಗೆ ಜೊನಾಥನ್’ಗೆ ಮಾನಸಿಕ ಹಿಂಸೆ‌ ನೀಡಿದ್ದಕ್ಕೆ 2.50 ಲಕ್ಷ, ದೂರಿನ ಖರ್ಚಿಗೆ 10 ಸಾವಿರ ಹಣ ಕೊಡುವಂತೆ ಹೇಳಿದೆ. ಒಂದೊಮ್ಮೆ ತಡವಾಗಿ ಹಣ ನೀಡಿದ್ದಾದಲ್ಲಿ ಅದಕ್ಕೆ 9% ಬಡ್ಡಿ ಸೇರಿಸಿ ಕೊಡಬೇಕು ಎಂದು ಹೇಳಿದೆ.

Yamaha RX100: ಮತ್ತೆ ಬರುತ್ತಿದೆ RX100 ಆದರೆ ಈ ಬಾರಿ ಭಿನ್ನ ರೂಪ, ಇನ್ನಷ್ಟು ಶಕ್ತಿಶಾಲಿ

ಟಾಟಾ ಸಂಸ್ಥೆ ಜಿಲ್ಲಾ ಗ್ರಾಹಕರ ವೇದಿಕೆಯ ಆದೇಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಹೈಕೋರ್ಟ್ ನಲ್ಲಿ ಅಪೀಲು ಹಾಕುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here