Pakistan: ಬೆಂಗಳೂರಿಗೆ ಬಂದುನಗುರುತು ಬದಲಾಯಿಸಿಕೊಂಡಿದ್ದ‌ ಪಾಕಿಸ್ತಾನಿ ಕುಟುಂಬದ ಬಂಧನ

0
90
Pakistan

Pakistan

ಭಾರತದಲ್ಲಿ ವಲಸಿಗರ ಸಮಸ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ. ಕಳೆದ ಕೆಲ ವರ್ಷಗಳಿಂದಲೂ ಬಾಂಗ್ಲಾದೇಶಿ ವಲಸಿಗರನ್ನು ಹೊರಗಟ್ಟುವ ಕಾರ್ಯ ಚಾಲ್ತಿಯಲ್ಲಿದೆ. ಬಾಂಗ್ಲಾ ಮಾತ್ರವೇ ಅಲ್ಲದೆ ಪಾಕಿಸ್ತಾನದಿಂದಲೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದಾರೆ. ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದು ಗುರುತು ಬದಲಿಸಿಕೊಂಡು ಕಳೆದ ಹತ್ತು ವರ್ಷದಿಂದ ಇಲ್ಲಿಯೇ ನೆಲೆಸಿದ್ದ ಕುಟುಂಬವೊಂದನ್ನು ಬಂಧಿಸಿದ್ದಾರೆ ಬೆಂಗಳೂರು ಪೊಲೀಸರು.

ರಶೀದ್ ಅಲಿ ಸಿದ್ದಿಖಿ (48) ಅಲಿಯಾಸ್ ಶಂಕರ್ ಶರ್ಮಾ, ಪತ್ನಿ ಆಯೆಷಾ (38) ಅಲಿಯಾಸ್ ಆಶಾ ರಾಣಿ, ಅವರ ಪೋಷಕರಾದ ಹನೀಫ್ ಮೊಹಮ್ಮದ್ (73) ಅಲಿಯಾಸ್ ರಾಮ್ ಬಾಬು ಶರ್ಮಾ, ರುಬಿನಾ (61) ಅಲಿಯಾಸ್ ರಾಣಿ ಶರ್ಮಾ ಅವರುಗಳನ್ನು ಗುಪ್ತಚರ ಇಲಾಖೆ‌ ಒದಗಿಸಿರುವ ಮಾಹಿತಿ ಆಧಾರದಲ್ಲಿ ಬಂಧಿಸಲಾಗಿದೆ. ಈ ನಾಲ್ವರು ಬೆಂಗಳೂರಿನ ಹೊರವಲಯದಲ್ಲಿ ಮನೆ ಮಾಡಿಕೊಂಡಿದ್ದರು.

ಇವರ ಕತೆ ಆಸಕ್ತಿಕರವಾಗಿದೆ, ರಶೀದ್ ಅಲಿ ಮೂಲತಃ ಪಾಕಿಸ್ತಾನದ ಕರಾಚಿ ಬಳಿಯ ಊರಿನವರು, ರಶೀದ್ ಪತ್ನಿ ಆಯೆಷಾ ಲಾಹೋರ್ ನವರು. ಆಯೆಷಾ, ತನ್ನ ಕುಟುಂಬದವರೊಡನೆ ಬಾಂಗ್ಲಾದೇಶದಲ್ಲಿ ನೆಲೆಸಿದ್ದಾಗ 2011 ರಲ್ಲಿ ಇವರಿಬ್ಬರು ಆನ್ ಲೈನ್ ನಲ್ಲಿ ವಿವಾಹವಾದರಂತೆ. ರಶೀದ್, ಕಠರ್ ಇಸ್ಲಾಂನ ವಿರೋಧಿಯಾಗಿದ್ದು, ಎಲ್ಲ ಧರ್ಮಗಳನ್ನೂ ಒಳಗೊಳ್ಳುವ ಸೂಫಿವಾದವನ್ನು ಬೋಧಿಸುವವರಾಗಿದ್ದಾರೆ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಧಾರ್ಮಿಕ ಗುರುಗಳು ರಶೀದ್ ನನ್ನು ದೇಶ ಬಿಟ್ಟು ಓಡುವಂತೆ ಮಾಡಿದ್ದಾರೆ. ಅಲ್ಲಿಂದ ಮತ್ತೊಂದು ಇಸ್ಲಾಂ ರಾಷ್ಟ್ರ ಬಾಂಗ್ಲಾದೇಶಕ್ಕೆ ಓಡಿಹೋದ ರಶೀದ್ ಅಲ್ಲಿ ಪತ್ನಿ ಮತ್ತು ಆಕೆಯ ಪೋಷಕರೊಡನೆ ನೆಲೆಸಿದ್ದರು. ಅಲ್ಲಿಯೂ ಸಹ ಮೆಹದಿ ಫೌಂಡೇಶನ್ ಮೂಲಕ ಕಠರ್ ಇಸ್ಲಾಂ ಅನ್ನು ವಿರೋಧಿಸಿ ಸೂಫಿವಾದದ ಪ್ರಚಾರ ಮಾಡುತ್ತಿದ್ದರಿಂದ ಇದರಿಂದ ತುಸು ಹಣವನ್ನೂ ಗಳಿಸುತ್ತಿದ್ದರು. ಆದರೆ ಬಾಂಗ್ಲಾದೇಶದಲ್ಲಿಯೂ ಧಾರ್ಮಿಕ ಗುರುಗಳಿಂದ ಸಮಸ್ಯೆ ಆದಾಗ ಮೆಹದಿ ಫೌಂಡೇಶನ್ ಮೂಲಕವೇ ಭಾರತೀಯರೊಬ್ಬರ ಪರಿಚಯ ಮಾಡಿಕೊಂಡು ಕುಟುಂಬ ಸಮೇತತಾಗಿ ಭಾರತಕ್ಕೆ ಬಂದರು.

ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದ ರಶೀದ್ ಮೊದಲಿಗೆ ದೆಹಲಿಯಲ್ಲಿ ನೆಲೆಸಿದ್ದರು. ಅಲ್ಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್’ಗಳನ್ನು ಮಾಡಿಸಿಕೊಂಡರು. ಹೀಗೆ ಮಾಡಿಸಿಕೊಳ್ಳುವಾಗ ಶರ್ಮಾ ಹೆಸರಿನಲ್ಲಿ ಕಾರ್ಡ್ ಗಳನ್ನು ಮಾಡಿಸಿಕೊಂಡರು. ಆ ನಂತರ ನೇಪಾಳದಲ್ಲಿ ನಡೆದ ಮೆಹದಿ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ಪರಿಚಯವಾದ ವಸೀಮ್ ಮತ್ತು ಅಲ್ತಾಫ್ ಬೆಂಗಳೂರಿಗೆ ಬರಲು ಆಹ್ವಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೂಫಿಯಿಸಂ ಪಾಠ ಮಾಡುವಂತೆ ಕೋರಿದ್ದಾರೆ. ಕೂಡಲೆ ಒಪ್ಪಿಕೊಂಡ ರಶೀದ್ ತನ್ನ ಕುಟುಂಬವನ್ನು ಕರೆದುಕೊಂಡು 2018 ರಲ್ಲಿ ಬೆಂಗಳೂರಿಗೆ ಬಂದಿದ್ದಾರೆ. 2018 ರಿಂದಲೂ ಇಲ್ಲಿಯೇ ನೆಲೆಸಿರುವ ರಶೀದ್ ಇಲ್ಲಿ ಮೆಹದಿ ಫೌಂಡೇಶನ್ ವತಿಯಿಂದ ಸೂಫಿಯಿಸಂ ಪ್ರಚಾರ ಮಾಡುತ್ತಿದ್ದಾರೆ. ಅಲ್ರಾ ಟಿವಿಯಲ್ಲಿ ಬೋಧನೆಗಳನ್ನು ಮಾಡುತ್ತಿದ್ದಾರೆ. ಕಠರ್ ಇಸ್ಲಾಮಿಸಂ ಅನ್ನು ವಿರೋಧಿಸುವುದು, ಇಸ್ಲಾಂ ಮೂಲವಾದಿತನವನ್ನು ವಿರೋಧಿಸುವ ಕಾರ್ಯ ಇವರದ್ದು. ಇವರ ಕುಟುಂಬದವರು ಆಹಾರ ಮಾರಾಟ, ಗ್ಯಾರೇಜ್ ಗಳಿಗೆ ಆಯಿಲ್ ಮಾರಾಟ ಮಾಡುತ್ತಿದ್ದರು.

Tirupati Laddu: ತಿರುಪತಿಯಲ್ಲಿ ಮೊದಲು ಕೊಡಲಾಗುತ್ತಿದ್ದ ಪ್ರಸಾದವೇ ಬೇರೆ, ಲಡ್ಡು ಕೊಡಲು ಆರಂಭ ಮಾಡಿದ್ದು ಏಕೆ?

ಆದರೆ ಇತ್ತೀಚೆಗೆ ಪಾಕಿಸ್ತಾನದ ಇಬ್ಬರು ಗೆಳೆಯರು ರಶೀದ್ ಅನ್ನು ನೋಡಲು ಬಂದಿದ್ದರು. ಬಾಂಗ್ಲಾದೇಶದ ಢಾಕಾದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಕಾರಣ ಬಂಧಿಸಲಾಗಿತ್ತು. ಅವರ ವಿಚಾರಣೆ ಬಳಿಕ ಅವರಿಬ್ಬರೂ ರಶೀದ್ ಭೇಟಿಗೆ ಆಗಮಿಸುತ್ತಿರುವ ವಿಷಯ ತಿಳಿದು ಬಂತು. ಕೂಡಲೆ ಗುಪ್ತಚರ ಇಲಾಖೆಯವರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದರು. ಬೆಂಗಳೂರು ಪೊಲೀಸರು ಕೂಡಲೆ ರಶೀದ್ ಮನೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದರು.

LEAVE A REPLY

Please enter your comment!
Please enter your name here