Indian Army: ಸೈನಿಕರ ಕೈಸೇರಿತು ಭಾರತದಲ್ಲೇ ತಯಾರಾದ ಸಬ್​ಮಷಿನ್ ಗನ್: ಇದರ ವಿಶೇಷತೆ ಗೊತ್ತೇನು?

0
111
Indian Army

Indian Army

ಭಾರತೀಯ ಸೈನ್ಯ ವಿಶ್ವದ ಶಕ್ತಿ ಶಾಲಿ ಸೈನ್ಯಗಳಲ್ಲಿ ಒಂದಾಗುವತ್ತ ಒಂದೊಂದೆ ಹೆಜ್ಜೆ ಇಡುತ್ತಿದೆ. ಇಷ್ಟು ವರ್ಷಗಳ ಕಾಲ ವಿದೇಶಿ ಬಂದೂಕು, ಇನ್ನಿತರೆ ಕೆಲ ಶಸ್ತ್ರಾಸ್ತ್ರಗಳನ್ನು ಮಾತ್ರವೇ ಬಳಸುತ್ತಿದ್ದ ಸೈನಿಕರು ಇದೀಗ ಮೊದಲ ಬಾರಿಗೆ ಭಾರತದಲ್ಲಿಯೇ ತಯಾರಾದ ಸಬ್ ಮಷಿನ್ ಗನ್ ಅನ್ನು ಕೈಯಲ್ಲಿ ಹಿಡಿದಿದ್ದಾರೆ. ಇದು ಜರ್ಮನ್​ನ ಎಂಪಿ5 ಹಾಗೂ ಇಸ್ರೇಲಿನ ಉಜಿ ಗನ್​ಗಳಿಗಿಂತಲೂ ಕ್ಷಮತೆ ಮತ್ತು ಶಕ್ತಿ ಹೊಂದಿದೆ ಎನ್ನಲಾಗುತ್ತಿದೆ. ಅಂದಹಾಗೆ ಈ ಮಷಿನ್​ಗನ್​ನ ವಿಶೇಷತೆಗಳೇನು? ಶಕ್ತಿ ಸಾಮರ್ಥ್ಯಗಳೇನು? ಇಲ್ಲಿ ತಿಳಿಯಿರಿ.

ಈ ಸಬ್​ಮಷಿನ್​ ಗನ್​ಗೆ ‘ಅಸ್ಮಿತ’ ಎಂದು ಹೆಸರಿಡಲಾಗಿದೆ. ಅಸ್ಮಿತ ಎಂದರೆ ಆತ್ಮಗೌರವ, ಹೆಮ್ಮೆ ಎಂದರ್ಥ. ಈ ಬಂದೂಕು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಆತ್ಮಗೌರವವನ್ನು ಎತ್ತಿಹಿಡಿಯುತ್ತದೆ ಎಂಬುದು ಸೇನೆಯ ನಂಬಿಕೆ. ಅಂದಹಾಗೆ ಅಸ್ಮಿತ ಸಬ್​ ಮಷೀನ್​ ಗನ್​ನ ಡಿಸೈನ್, ಟೆಸ್ಟಿಂಗ್ ಇನ್ನಿತರೆಗಳು 2020 ರಲ್ಲಿ ಪ್ರಾರಂಭವಾಗಿದ್ದವು. ಆದರೆ ಈಗ ಹೆಚ್ಚಿನ ಪ್ರೊಡಕ್ಷನ್ ಆಗಿ ಸೈನಿಕರ ಕೈ ತಲುಪಿದೆ. ಅದೂ 1 ಲಕ್ಷಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಬಂದೂಕುಗಳನ್ನು ಭಾರತೀಯ ಸೈನ್ಯಕ್ಕೆ ಪೂರೈಸಲಾಗಿದೆ. ವಿದೇಶದಿಂದ ರಫ್ತು ಮಾಡಿಕೊಳ್ಳುವ ವಿದೇಶಿ ಸಬ್​ಮಷೀನ್​ ಗನ್​ಗಳಿಗೆ ಹೋಲಿಸಿದರೆ ಈ ಬಂದೂಕುಗಳ ಬೆಲೆ 30% ಕಡಿಮೆ ಇದೆ.

2.5 ಕೆಜಿ ತೂಗುವ ಅಸ್ಮಿತೆ ಅಲಿಯಾಸ್ ಎಎಸ್ಎಂಐ ಬಂದೂಕು, ಇದೇ ಕ್ಯಾಟಗರಿಗೆ ಸೇರುವ ವಿದೇಶದ ಕೆಲ ಬಂದೂಕುಗಳಿಗಿಂತಲೂ ಸುಮಾರು 20% ಕಡಿಮೆ ತೂಕವನ್ನು ಹೊಂದಿದೆ. ಈ ಬಂದೂಕನ್ನು ಹಗುರಗೊಳಿಸಲು ಮತ್ತು ಬಳಸಲು ಸುಲಭವಾಗಿರುವಂತೆ ಮಾಡಲು ಅಲ್ಯುಮೀನಿಯಂ ಮತ್ತು ಕಾರ್ಬನ್ ಫೈಬರ್ ಅನ್ನು ಹೆಚ್ಚಾಗಿ ಬಳಸಲಾಗಿದೆ. ಇದೇ ಕಾರಣಕ್ಕೆ ಇದು ಕಡಿಮೆ ತೂಕದ್ದಾಗಿರುವ ಜೊತೆಗೆ ಬಳಕೆಯಲ್ಲಿ ಇತರೆ ಸಬ್ ಮಷೀನ್​ಗನ್​ಗಳಿಗಿಂತಲೂ ಬಹಳ ಸುಲಭದ್ದಾಗಿದೆ. ಮತ್ತು ನಿರ್ಮಾಣ ವೆಚ್ಚವೂ ಸಹ ಬಹಳ ಕಡಿಮೆ.

Vladimir Putin: ರಷ್ಯಾ ಅಧ್ಯಕ್ಷ ಪುತಿನ್ ವಿರುದ್ಧ ಅಂತರಾಷ್ಟ್ರೀಯ ಅರೆಸ್ಟ್ ವಾರೆಂಟ್, ಬಂಧಿಸುವ ಧೈರ್ಯ ಯಾರಿಗಿದೆ?

ಇದು 19ಎಂಎಂ ಗುಂಡನ್ನು ಬಳಸುವ ಗನ್ ಆಗಿದ್ದು, 9 ಗುಂಡುಗಳನ್ನು ಹೊಂದಿರುವ 19ಎಂಎಂ ಕ್ಯಾಟರೇಜ್ ಅನ್ನು ಈ ಗನ್​ಗೆ ಬಳಸಬೇಕಾಗುತ್ತದೆ. ಈ ಎಎಸ್ಎಂಐ ಬಂದೂಕು ಒಂದು ನಿಮಿಷದಲ್ಲಿ ಸತತವಾಗಿ 600 ಸುತ್ತು ಗುಂಡು ಹೊಡೆಯುವ ಕ್ಷಮತೆ ಹೊಂದಿದೆ. 100 ಮೀಟರ್​ನಿಂದ ಆರಂಭಿಸಿ 200 ಮೀಟರ್​ ದೂರದ ವರೆಗೆ ಸಹ ಇದು ನಿಖರವಾಗಿ ಮತ್ತು ಶಕ್ತಿಯುತವಾದ ದಾಳಿಯನ್ನು ಮಾಡಬಲ್ಲದು.

ಲೋಕೇಶ್ ಮೆಕ್ಯಾನಿಕ್ ಲಿಮಿಟೆಡ್​ನವರು ಈ ಬಂದೂಕನ್ನು ನಿರ್ಮಾಣ ಮಾಡಿದ್ದು, ಡಿಸೈನ್ ಮತ್ತು ಇನ್ನಿತರೆಗಳಲ್ಲಿ ಪುಣೆಯ ಐಐಟಿ ಮತ್ತು ಭಾರತೀಯ ಸೈನ್ಯದ ಶಸ್ತ್ರಾಸ್ತ್ರ ಪರಿಣಿತರು ನೆರವು ಒದಗಿಸಿದ್ದಾರೆ. ಪ್ರಸ್ತುತ ಭಾರತೀಯ ಸೇನೆಯ ನಾರ್ತನ್ ಕಮ್ಯಾಂಡ್​ ನವರು ಈ ಬಂದೂಕುಗಳನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ಎನ್​ಎಸ್​ಜಿ ಸೇರಿದಂತೆ ಇತರೆ ಸೈನಿಕ ವಿಭಾಗವೂ ಸಹ ಇದೇ ಬಂದೂಕುಗಳನ್ನು ಬಳಸಲಿವೆ.

LEAVE A REPLY

Please enter your comment!
Please enter your name here