Bigg Boss: ಗೆಳೆಯನ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರಾ ಪ್ರಶಾಂತ್ ಸಂಬರ್ಗಿ?

0
151
Bigg Boss

Bigg Boss

ಪ್ರಶಾಂತ್‌ ಸಂಬರ್ಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಪ್ರಚಾರ ಪ್ರಿಯ ಎಂದೂ ಕರೆಸಿಕೊಳ್ಳುವ ಸಂಬರ್ಗಿ, ಹಿಂದೂಪರ ಸಂಘಟನೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ಬಿಗ್’ಬಾಸ್ ಮನೆಗೆ ಹೋಗಿ ಬಂದಿರುವ ಸಂಬರ್ಗಿ, ಇದೀಗ ಬಿಗ್’ಬಾಸ್ ಮನೆಯಲ್ಲಿರುವ ತನ್ನ ಗೆಳೆಯನ ಬಗ್ಗೆ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಸಂಬರ್ಗಿಯಂತೆಯೇ ಸಾರ್ವಜನಿಕ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಎನಿಸಿಕೊಂಡಿರುವ ಲಾಯರ್ ಜಗದೀಶ್ ಬಿಗ್’ಬಾಸ್ ಮನೆ ಸೇರಿದ್ದಾರೆ. ಬಿಗ್’ಬಾಸ್ ಮನೆಗೆ ಹೋದ ಎರಡೇ ದಿನಕ್ಕೆ ಸಹ ಸ್ಪರ್ಧಿಗಳ ಮೇಲೆ ಜಗಳ ಆರಂಭಿಸಿದ ಜಗದೀಶ್, ಇಂದಂತೂ ಬಿಗ್’ಬಾಸ್ ಗೆ ಆವಾಜ್ ಹಾಕಿದ್ದಾರೆ. ಬಿಗ್ ಬಾಸ್ ಮೇಲೆ ಕೇಸು ಹಾಕ್ತೀನಿ, ಬಿಗ್’ಬಾಸ್ ಗೇಟು ಒಡಿಸ್ತೀನಿ ಎಂದೆಲ್ಲ ಹೇಳಿದ್ದಾರೆ. ಬಿಗ್’ಬಾಸ್ ಮನೆಯೊಳಗೆ ಲಾಯರ್ ಜಗದೀಶ್ ಆರ್ಭಟ ನಡೆಸಬೇಕಾದರೆ ಹೊರಗೆ ಅವರ ಗೆಳೆಯರೇ ಆಗಿರುವ ಪ್ರಶಾಂತ್ ಸಂಬರ್ಗಿ, ಲಾಯರ್ ಜಗದೀಶ್ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ.

ಲಾಯರ್ ಜಗದೀಶ್ ಅವರ ವಕೀಲಿಕೆಯ ಲೈಸೆನ್ಸ್ ರದ್ದಾಗಿದೆ. ಅವರು ಸುಳ್ಳು ಸರ್ಟಿಫಿಕೇಟ್ ಕೊಟ್ಟು ವಕೀಲರಾಗಿರುವ ಕಾರಣ ಅವರ ಬಾರ್ ಕೌನ್ಸಿಲ್ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ ಎಂದು ಆದೇಶ ಪ್ರತಿಯೊಂದನ್ನು ಸಂಬರ್ಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿರುವ ಆದೇಶ ಪ್ರತಿಯಲ್ಲಿ ಕೆಎನ್ ಜಗದೀಶ್ ಕುಮಾರ್ ಅವರ ಕಾನೂನು ಪದವಿ ಅಮಾನ್ಯಗೊಳಿಸಿರುವ ಮಾಹಿತಿ ಇದೆ. ಕನ್ನಡದ ಕೆಲವು ಮಾಧ್ಯಮಗಳು ಸಹ ಇದನ್ನೇ ವರದಿ ಮಾಡಿವೆ.

ಆದರೆ ಪ್ರಶಾಂತ್‌ ಸಂಬರ್ಗಿ ಹಂಚಿಕೊಂಡಿರುವ ಆದೇಶ ಪ್ರತಿಯಲ್ಲಿ ಜಗದೀಶ್ ಕುಮಾರ್ ವಿಳಾಸ ನವ ದೆಹಲಿಯದ್ದಿದೆ. ಹಿಮಾಂಶು ಭಾಟಿ ಅವರು ದಾಖಲಿಸಿದ್ದ ಪ್ರಕರಣದಲ್ಲಿ ಬಂದಿರುವ ತೀರ್ಪಿನ ಪ್ರತಿಯ ಒಂದು ಪುಟದ ದಾಖಲೆಯನ್ನು ಸಂಬರ್ಗಿ ಹಂಚಿಕೊಂಡಿದ್ದು, ಆದೇಶದ ಮೇಲೆ ದಿನಾಂಕ ಸಹ ಆರು ತಿಂಗಳು ಹಿಂದಿನ ದಿನಾಂಕ ಇದೆ. ಜಗದೀಶ್ ಅಸಲಿಗೆ ಬೆಂಗಳೂರಿನ ಸಹಕಾರ ನಗರದವರು, ಇಲ್ಲಿಯೇ ಅವರ ಸ್ವಂತ ಮನೆ ಇದೆ. ಆದರೆ ಸಂಬರ್ಗಿ ಹಂಚಿಕೊಂಡಿರುವ ಆದೇಶ ಪ್ರತಿಯಲ್ಲಿ ಜಗದೀಶ್ ಅವರು ದೆಹಲಿ ನಿವಾಸಿ ಎಂದು ವಿಳಾಸ ಇದೆ.

Samantha: ಸಮಂತಾ ಬಗ್ಗೆ ನೀಚ ಹೇಳಿಕೆ ನೀಡಿದ ಸಚಿವೆ, ತೆಲುಗು ಚಿತ್ರರಂಗದ ತೀವ್ರ ಆಕ್ರೋಶ, ರಾಹುಲ್ ಗಾಂಧಿಗೂ ಮನವಿ

ಇದೆಲ್ಲ ಅನುಮಾನಕ್ಕೆ ಕಾರಣವಾಗಿದ್ದು, ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿರುವ ಆದೇಶ ಪ್ರತಿ ನಕಲಿಯೇ ಅಥವಾ ಬೇಕೆಂದೆ ತಮ್ಮ ಗೆಳೆಯನ ವಿರುದ್ಧ ಸುಳ್ಳು ಸುದ್ದಿಯನ್ನು ಹರಡುವ ಪ್ರಯತ್ನವನ್ನು ಸಂಬರ್ಗಿ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ಹಿಂದೆ ಚಂದನ್ ಶೆಟ್ಟಿ ವಿಚ್ಚೇದನ ವಿಚಾರದಲ್ಲಿ ಸಹ, ನಿವೇದಿತಾಗೆ ಅಕ್ರಮ ಸಂಬಂಧ ಇದೆ ಎಂಬ ಅರ್ಥ ಬರುವ ಮಾತುಗಳನ್ನು ಮಾಧ್ಯಮದ ಮುಂದೆ ಸಂಬರ್ಗಿ ಹೇಳಿದ್ದರು, ಆದರೆ ಅದನ್ನು ಚಂದನ್ ಶೆಟ್ಟಿ ಮತ್ತು ನಿವೇದಿತಾ ತೀವ್ರವಾಗಿ ಖಂಡಿಸಿದ್ದರು.

LEAVE A REPLY

Please enter your comment!
Please enter your name here